ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸುನಾಮಿ ನಡುವೆಯೂ ಇಬ್ಬರು ಕೇಂದ್ರ ಸಚಿವರಿಗೆ ಸೋಲು

|
Google Oneindia Kannada News

ನವದೆಹಲಿ, ಮೇ 25: ಮೋದಿ ಸುನಾಮಿ ಬಿಜೆಪಿಗೆ 303 ಕ್ಷೇತ್ರಗಳಲ್ಲಿ ಗೆಲುವು ನೀಡಿದೆ. ಎನ್‌ಡಿಎ 353 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ. ಇಷ್ಟೆಲ್ಲಾ ಗೆದ್ದಿದ್ದರೂ ಸಹ ಇಬ್ಬರು ಕೇಂದ್ರ ಸಚಿವರು ಸೋಲನುಭವಿಸಿದ್ದಾರೆ.

ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಹರ್‌ದೀಪ್ ಸಿಂಗ್‌ ಪುರಿ ಮತ್ತು ಕೆ.ಜೆ.ಅಲ್ಫೋನ್ಸ್ ಅವರು ಸೋಲನ್ನಪ್ಪಿದ್ದಾರೆ. ಹರ್‌ದೀಪ್ ಪುರಿ ಅವರು ಬಹು ಹಿರಿಯ ಸಚಿವರಾಗಿದ್ದರು, ಇವರ ಸೋಲು ಆಶ್ಚರ್ಯ ಬಿಜೆಪಿಗರಿಗೆ ಉಂಟುಮಾಡಿದೆ.

ಲೋಕಸಭೆ ಚುನಾವಣೆ : ಕರ್ನಾಟಕದಲ್ಲಿ ಸೋತ ಘಟಾನುಘಟಿ ನಾಯಕರು! ಲೋಕಸಭೆ ಚುನಾವಣೆ : ಕರ್ನಾಟಕದಲ್ಲಿ ಸೋತ ಘಟಾನುಘಟಿ ನಾಯಕರು!

ಕೇರಳದ ಎರ್ನಾಕುಲಂ ನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಕೆ.ಜೆ.ಅಲ್ಫೋನ್ಸ್‌ ಅವರು ತಮ್ಮ ಎದುರಾಳಿ ಸಿಪಿಐಎಂ ನ ಪಿ.ರಾಜೀವ್ ವಿರುದ್ಧ 1.84 ಲಕ್ಷ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.

BJPs two central ministers defeat in lok sabha elections

ಇನ್ನು ಹಿರಿಯ ಸಚಿವರಾಗಿದ್ದ ಹರ್‌ದೀಪ್ ಸಿಂಗ್ ಪುರಿ ಅವರು ಪಂಜಾಬ್‌ನ ಅಮೃತಸರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಗುರ್ಜೀತ್ ಸಿಂಗ್ ಔಜಲಾ ವಿರುದ್ಧ ಒಂದು ಲಕ್ಷ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.

ಸಂಸತ್ತಿನಲ್ಲಿ ಈ ಬಾರಿ ಮಹಿಳಾಮಣಿಯರ ಹವಾ, 78 ಸಂಸದೆಯರ ಆಯ್ಕೆ ಸಂಸತ್ತಿನಲ್ಲಿ ಈ ಬಾರಿ ಮಹಿಳಾಮಣಿಯರ ಹವಾ, 78 ಸಂಸದೆಯರ ಆಯ್ಕೆ

ಇನ್ನು ಬಿಜೆಪಿಯ ಅತ್ಯಂತ ಪ್ರಮುಖ ವಕ್ತಾರ, ಕೇಂದ್ರದಿಂದ ಓನ್‌ಜಿಸಿ ನಿಗಮ ಮಂಡಳಿಗಳ ಅಧ್ಯಕ್ಷರಾಗಿಯೂ ನೇಮಕವಾಗಿದ್ದ ಸಂಬಿತ್ ಪಾತ್ರಾ ಅವರೂ ಸಹ ಒಡಿಶಾದ ಪುರಿಯಲ್ಲಿ ಸೋಲನುಭವಿಸಿದ್ದಾರೆ.

ಸಂಬಿತ್ ಪಾತ್ರಾ ಅವರು ಬಿಜೆಪಿಯ ಅತ್ಯಂತ ಪ್ರಮುಖ ಮಾಧ್ಯಮ ವಕ್ತಾರರಾಗಿದ್ದರು. ಅವರು ಬಹುತೇಕ ಎಲ್ಲಾ ರಾಷ್ಟ್ರೀಯ ಚಾನೆಲ್‌ಗಳಲ್ಲಿ ಬಿಜೆಪಿ ಪರವಾಗಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಅವರು ಗೆದ್ದಿದ್ದಲ್ಲಿ ಅವರಿಗೆ ಸಚಿವ ಸ್ಥಾನವನ್ನು ನಿರೀಕ್ಷಿಸಲಾಗಿತ್ತು.

English summary
BJP's two central ministers defeat in lok sabha elections. BJP won 303 constituencies as single party amid of that two ministers of it looses in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X