ಬಿಜೆಪಿ ನಾಯಕಿಗೆ ಅಶ್ಲೀಲ ಸಂದೇಶ ಕಳಿಸಿದ್ದವನ ಬಂಧನ

Posted By:
Subscribe to Oneindia Kannada

ಲಕ್ನೋ, ಮಾರ್ಚ್ 06: ಬಿಜೆಪಿ ನಾಯಕಿ ಶೈನಾ ಎನ್ ಸಿ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಬಿಜೆಪಿ ಕಾರ್ಯಕರ್ತ ಜಯಂತ್ ಕುಮಾರ್ ಸಿಂಗ್ ಆಲಿಯಾಸ್ ಸಿಂಕು ಎಂಬ ವ್ಯಕ್ತಿಯನ್ನು ಉತ್ತರಪ್ರದೇಶ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕಳೆದ ಮೂರು ತಿಂಗಳಿನಿಂದ ನನ್ನ ಮೊಬೈಲ್ ಫೋನಿಗೆ ವ್ಯಕ್ತಿಯೊಬ್ಬನಿಂದ ಅಶ್ಲೀಲ ಸಂದೇಶ, ಚಿತ್ರಗಳು ಬರುತ್ತಿವೆ ಎಂದು ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್ ಕೂಡಾ ಆಗಿರುವ ಬಿಜೆಪಿ ನಾಯಕಿ ಶೈನಾ ಅವರು ಪೊಲೀಸರಿಗೆ ದೂರು ನೀಡಿದ್ದರು.

BJP worker from Varanasi arrested for sending lewd messages to party leader Shaina NC

ಸಾರ್ವಜನಿಕ ಜೀವನದಲ್ಲಿರುವ ನನ್ನಂಥವರಿಗೆ ಇಂಥ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಧೈರ್ಯ ತೋರಿಸುತ್ತಿದ್ದರೆ, ಸಾಮಾನ್ಯ ಮಹಿಳೆಯರ ಕಥೆ ಏನು? ಇಂಥವರಿಂದ ಇನ್ನಷ್ಟು ಜನರಿಗೆ ತೊಂದರೆಯಾಗದಿರಲಿ ಎಂದು ಪೊಲೀಸರಿಗೆ ದೂರು ನೀಡಿದೆ.

ಕಳೆದ ಎರಡು ವಾರದಿಂದ ಆತನ ಮೆಸೇಜ್ ಗಳ ಹಿಂಸೆ ವಿಪರೀಪಕ್ಕೆ ಹೋಗಿದ್ದರಿಂದ ದೂರು ನೀಡಬೇಕಾಯಿತು. ಕಿರುಕುಳಕ್ಕೊಳಗಾಗುವ ಇತರ ಮಹಿಳೆಯರಿಗೆ ಧೈರ್ಯ ತುಂಬಲು ಯತ್ನಿಸುತ್ತೇನೆ ಎಂದು ಶೈನಾ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP worker from Varanasi arrested for sending lewd messages to party leader Shaina NC.
Please Wait while comments are loading...