ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿಗೆ ಬಹುಮತವಿಲ್ಲ!

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 20 : 2019ರ ಲೋಕಸಭೆ ಚುನಾವಣೆಗೆ ಸುಮಾರು ಏಳು ತಿಂಗಳು ಬಾಕಿ ಇರುವಾಗ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ. ಈಗ ಚುನಾವಣೆ ನಡೆದರೆ ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆಯಲು ವಿಫಲವಾಗಲಿದೆ.

India Today-Karvy ನಡೆಸಿದ ಮೂಡ್ ಆಫ್‌ ದಿ ನೇಷನ್ ಸಮೀಕ್ಷೆಯ ವರದಿ ಶನಿವಾರ ಪ್ರಕಟವಾಗಿದೆ. ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರೇ ಸೂಕ್ತ ಅಭ್ಯರ್ಥಿ ಎಂದು ಶೇ 49ರಷ್ಟು ಜನರು ಅಭಿಪ್ರಾಯಪಟ್ಟಿದ್ದು, ರಾಹುಲ್ ಗಾಂಧಿ ಪರವಾಗಿ ಶೇ 27ರಷ್ಟು ಜನರು ಮತಹಾಕಿದ್ದಾರೆ.

ಇಂಡಿಯಾ ಟುಡೇ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ?ಇಂಡಿಯಾ ಟುಡೇ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ?

ಆದರೆ, ಈಗ ಲೋಕಸಭೆ ಚುನಾವಣೆ ನಡೆದರೆ ಯುಪಿಎ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ. 2014ರಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪಡೆದಿರುವ ಬಿಜೆಪಿಗೆ ಹಿನ್ನಡೆಯಾಗಲಿದೆ. ಈಗ ಚುನಾವಣೆ ನಡೆದರೆ ಪಕ್ಷ ಬಹುಮತ ಗಳಿಸುವುದಿಲ್ಲ ಎಂದು ಸಮೀಕ್ಷೆಯ ವರದಿ ಹೇಳಿದೆ.

ಎಬಿಪಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಮಾತ್ರ ಎನ್ಡಿಎಗೆ ಸೋಲುಎಬಿಪಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಮಾತ್ರ ಎನ್ಡಿಎಗೆ ಸೋಲು

ಕಾಂಗ್ರೆಸ್ ನೇತೃತ್ವದ ಯುಪಿಎಯ ಮತಗಳಿಕೆ, ಸೀಟುಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಲಿದೆ. ಈ ಸಮೀಕ್ಷೆ ಚುನಾವಣೆ ಪೂರ್ವ ಮತ್ತು ಚುನಾವಣೋತ್ತರ ಮೈತ್ರಿಯ ಬಗ್ಗೆ ಮೂರು ಸಾಧ್ಯತೆಗಳನ್ನು ಹೇಳಿದೆ. ಸಮೀಕ್ಷೆಯ ವಿವರ ಇಲ್ಲಿದೆ ನೋಡಿ...

ಸಾಧ್ಯತೆ - 1

ಸಾಧ್ಯತೆ - 1

India Today-Karvy ನಡೆಸಿದ ಸಮೀಕ್ಷೆ ಪ್ರಕಾರ ಈಗ ಚುನಾವಣೆ ನಡೆದರೆ ಪಕ್ಷಗಳ ಬಲಾಬಲ ಹೀಗಿರಲಿದೆ. ಇದು ಚುನಾವಣಾ ಫಲಿತಾಂಶದ ಮೊದಲ ಸಾಧ್ಯತೆಯಾಗಿದೆ.

* ಎನ್‌ಡಿಎ 281 ಸೀಟು
* ಯುಪಿಎ 122 ಸೀಟು
* ಇತರರು 140 ಸೀಟುಗಳನ್ನು ಪಡೆಯಲಿದ್ದಾರೆ.

ಎನ್‌ಡಿಎ ಶೇ 36ರಷ್ಟು, ಯುಪಿಎ ಶೇ 31ರಷ್ಟು, ಇತರರು ಶೇ 33ರಷ್ಟು ವೋಟ್ ಶೇರ್ ಪಡೆಯಲಿದ್ದಾರೆ.

ಸಾಧ್ಯತೆ - 2

ಸಾಧ್ಯತೆ - 2

2ನೇ ಸಾಧ್ಯತೆಯಲ್ಲಿ ಯುಪಿಎ ಮೈತ್ರಿಕೂಟ ಬಿಎಸ್‌ಪಿ, ಎಸ್‌ಪಿ ಮತ್ತು ಟಿಎಂಸಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

* ಎನ್‌ಡಿಎ 228 ಸೀಟು
* ಯುಪಿಎ 224 ಸೀಟು
* ಇತರರು 91 ಸೀಟುಗಳು

ಈ ಮೈತ್ರಿ ಉಂಟಾದರೆ ಯುಪಿಎ ಸೀಟುಗಳ ಸಂಖ್ಯೆ ಹೆಚ್ಚಾಗಲಿದೆ. ಹಾಗೆಯೇ ಎನ್‌ಡಿಎ ಶೇ 36, ಯುಪಿಎ ಶೇ 41, ಇತರರು ಶೇ 23ರಷ್ಟು ವೋಟ್ ಶೇರ್ ಪಡೆಯಲಿದ್ದಾರೆ.

ಭಾರತದ ಅತ್ಯುತ್ತಮ ಮುಖ್ಯಮಂತ್ರಿ ಯಾರು? ಯಾರಿಗೆ ಎಷ್ಟು ಮಾರ್ಕ್ಸು?!

ಸಾಧ್ಯತೆ - 3

ಸಾಧ್ಯತೆ - 3

3ನೇ ಸಾಧ್ಯತೆ ಪ್ರಕಾರ ಎನ್‌ಡಿಎ ಮೈತ್ರಿಕೂಟ ದಕ್ಷಿಣದ ರಾಜ್ಯಗಳಲ್ಲಿ ಎಐಎಡಿಎಂಕೆ (ತಮಿಳುನಾಡು), ವೈಎಸ್‌ಆರ್ ಕಾಂಗ್ರೆಸ್ (ಆಂಧ್ರಪ್ರದೇಶ) ಜೊತೆ ಮೈತ್ರಿ ಮಾಡಿಕೊಳ್ಳಬಹುದು. ಇದರಿಂದಾಗಿ ಎನ್‌ಡಿಎ ಮೈತ್ರಿಕೂಟದ ಸಂಖ್ಯೆ ಹೆಚ್ಚಾಗಲಿದೆ.

* ಎನ್‌ಡಿಎ 255 ಸೀಟು
* ಯುಪಿಎ 242 ಸೀಟು
* ಇತರರು 46 ಸೀಟು

ವೋಟ್ ಶೇರ್ ಅನ್ನು ನೋಡುವುದಾದದರೆ ಎನ್‌ಡಿಎ ಶೇ 41, ಯುಪಿಎ ಶೇ 43, ಇತರರು ಶೇ 16ರಷ್ಟು ಮತ ಪಡೆಯಲಿದ್ದಾರೆ. ಇಲ್ಲಿ ಯುಪಿಎ ಮತಗಳಿಗೆ ಪ್ರಮಾಣ ಹೆಚ್ಚಾಗಲಿದೆ ಎಂಬುದು ಅಂದಾಜು.

ಚುನಾವಣೋತ್ತರ ಮೈತ್ರಿ

ಚುನಾವಣೋತ್ತರ ಮೈತ್ರಿ

2019ರ ಲೋಕಸಭೆ ಚುನಾವಣೆ ಮುಗಿದ ಬಳಿಕ ಟಿಆರ್‌ಎಸ್ ಮತ್ತು ಬಿಜೆಡಿ ಎನ್‌ಡಿಎ ಮೈತ್ರಿಕೂಟ ಸೇರಿದರೆ ಮೈತ್ರಿಕೂಟದ ಸಂಖ್ಯಾಬಲ ಹೆಚ್ಚಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಬೇಕಾದರೆ ಮಧ್ಯಪ್ರದೇಶ, ರಾಜಸ್ಥಾನ್, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಎರಡರಲ್ಲಿ ಗೆಲ್ಲಬೇಕು ಎಂದು ಸಮೀಕ್ಷೆ ಹೇಳಿದೆ.

English summary
According to India Today-Karvy Insights Mood of the Nation Survey Bharatiya Janata Paty (BJP) would fall short of the magic number, If Lok Sabha Elections 2019 elections were conducted today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X