ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರದಲ್ಲಿ ಸ್ವಂತ ಬಲದಲ್ಲಿ ಬಿಜೆಪಿ ಸರ್ಕಾರ ರಚನೆ: ಅಸ್ಸಾಂ ಸಿಎಂ

|
Google Oneindia Kannada News

ಗುವಾಹಟಿ, ಜನವರಿ 02: ಮಾರ್ಚ್‌ನಲ್ಲಿ ಮಣಿಪುರದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಮಣಿಪುರದಲ್ಲಿ ಬಿಜೆಪಿ ತನ್ನದೇ ಆದ ಸರ್ಕಾರವನ್ನು ರಚನೆ ಮಾಡಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದಾರೆ. "ಮಾರ್ಚ್‌ನಲ್ಲಿ ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ಸಂದರ್ಭದಲ್ಲಿ ಬಿಜೆಪಿಯು ಮಣಿಪುರದಲ್ಲಿ ಸ್ವಂತವಾಗಿ ಸರ್ಕಾರವನ್ನು ರಚನೆ ಮಾಡಲಿದೆ. ಈಶಾನ್ಯದಲ್ಲಿ ಬಿಜೆಪಿ ಉಳಿಯುತ್ತದೆ," ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭರವಸೆ ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ನಲ್ಲಿ ಮಣಿಪುರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, "ಬಿಜೆಪಿ ಪಕ್ಷವು ಈ ಬಾರಿ ಏಕಾಂಗಿಯಾಗಿ ಸ್ಪರ್ಧೆಗೆ ಇಳಿಯಲಿದೆ. ಇತರ ಪ್ರಮುಖ ಮಿತ್ರ ಪಕ್ಷವಾದ ಎನ್‌ಪಿಎಫ್ ಇಲ್ಲಿಯವರೆಗೆ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸುವ ಕುರಿತು ಯಾವುದೇ ಘೋಷಣೆ ಮಾಡಿಲ್ಲ," ಎಂದು ತಿಳಿಸಿದ್ದಾರೆ.

 ಬಿಜೆಪಿಗೆ ಮಣಿಪುರದಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯುವ ವಿಶ್ವಾಸ ಬಿಜೆಪಿಗೆ ಮಣಿಪುರದಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯುವ ವಿಶ್ವಾಸ

2016 ರಿಂದ 2019 ರವರೆಗಿನ ಎಲ್ಲಾ ಏಳು ಈಶಾನ್ಯ ರಾಜ್ಯಗಳಲ್ಲಿ ಎನ್‌ಡಿಎ ಗೆಲುವು ಒಂದೇ ಬಾರಿಗೆ ಅಲ್ಲ. ಮಣಿಪುರದ ಚುನಾವಣೆಯಿಂದ ಹಿಡಿದು ಆರು ರಾಜ್ಯಗಳಲ್ಲಿ ನಮ್ಮದೇ ಸರ್ಕಾರಗಳನ್ನು ಉಳಿಸಿಕೊಳ್ಳಲಾಗುವುದು. 2023 ರ ಆರಂಭದಲ್ಲಿ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿಯೂ ನಮ್ಮ ಸರ್ಕಾರವನ್ನು ಉಳಿಸುಕೊಳ್ಳುತ್ತೇವೆ. ಅರುಣಾಚಲ ಪ್ರದೇಶದಲ್ಲಿ 2024 ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಬಹುಮತ ಪಡೆಯಲಿದೆ," ಎಂದು ಹೇಳಿದರು.

BJP will form government on its own in Manipur: Assam CM Himanta Biswa Sarma

"ಸತತ ಐದು ವರ್ಷಗಳ ನಂತರ, ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಎಲ್ಲಾ ಸರ್ಕಾರಗಳನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂಬುವುದು ನನ್ನ ಸ್ವಂತ ಮೌಲ್ಯಮಾಪನವಾಗಿದೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಇದು ಎರಡನೇ ಬಿಜೆಪಿ ಸರ್ಕಾರ. ಮಣಿಪುರದಲ್ಲಿ ಈ ಬಾರಿ ಸ್ವಂತ ಬಲದಿಂದ ಸರ್ಕಾರ ರಚಿಸಲಿದ್ದೇವೆ. ಕಳೆದ ಬಾರಿ, ಇದು ದೊಡ್ಡ ಒಕ್ಕೂಟವಾಗಿತ್ತು. ಆದರೆ ಈ ಬಾರಿ ಮಣಿಪುರದಲ್ಲಿ ಸರಿಯಾದ ಬಿಜೆಪಿ ಸರ್ಕಾರ ಇರುತ್ತದೆ ಎಂದು ನನಗೆ ವಿಶ್ವಾಸವಿದೆ," ಎಂದು ಶರ್ಮಾ ತಿಳಿಸಿದರು.

ಮಣಿಪುರದಲ್ಲಿ ಬಿಜೆಪಿಗೆ ಬಹುಮತ ನೀಡಿ: ಜನರಲ್ಲಿ ಸ್ಪೀಕರ್‌ ಮನವಿಮಣಿಪುರದಲ್ಲಿ ಬಿಜೆಪಿಗೆ ಬಹುಮತ ನೀಡಿ: ಜನರಲ್ಲಿ ಸ್ಪೀಕರ್‌ ಮನವಿ

ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯದಲ್ಲೂ ಪ್ರಬಲ ಬಿಜೆಪಿ ಸರ್ಕಾರ

"ಮುಂದೆ ನಾವು ನಾಗಾಲ್ಯಾಂಡ್, ಮಿಜೋರಾಂ ಮತ್ತು ಮೇಘಾಲಯದಲ್ಲಿಯೂ ಪ್ರಬಲ ಬಿಜೆಪಿ ಸರ್ಕಾರವನ್ನು ನಾವು ರಚನೆ ಮಾಡುತ್ತೇವೆ, ಪ್ರಬಲ ಎನ್‌ಡಿಎ ಕೂಟ ರಚನೆ ಮಾಡಲಿದ್ದೇವೆ. ತ್ರಿಪುರಾದಲ್ಲೂ ನಾವು ಮತ್ತೆ ಸರ್ಕಾರವನ್ನು ರಚನೆ ಮಾಡಲಿದ್ದೇವೆ. ಅಂತಿಮವಾಗಿ, ಈಶಾನ್ಯದಲ್ಲಿ ಸಂಪೂರ್ಣ ನಮ್ಮ ಸರ್ಕಾರ ರಚನೆ ಆಗಲಿದೆ. ಬಿಜೆಪಿ ಈಶಾನ್ಯದಲ್ಲಿ ಬಹಳ ಕಾಲ ಉಳಿಯಲೆಂದೆ ಬಂದಿದೆ. ಅದು ಈ ಸರಣಿ ಚುನಾವಣೆಗಳ ನಂತರ ಸಾಬೀತಾಗುತ್ತಿದೆ," ಎಂದು ಅಭಿಪ್ರಾಯಿಸಿದರು. "ಬಿಜೆಪಿಯು ಮಣಿಪುರದಲ್ಲಿ ಮುಂದಿನ ಸರ್ಕಾರವನ್ನು ರಚಿಸುತ್ತದೆ, ಬಿಜೆಪಿ ಮಾರ್ಚ್‌ನಲ್ಲಿ ಚುನಾವಣೆಯನ್ನು ಎದುರಿಸುತ್ತದೆ. ಈಶಾನ್ಯದಲ್ಲಿ ಉಳಿಯಲು, ಬಲಶಾಲಿಯಾಗಲು ಬಿಜೆಪಿ ಇಲ್ಲಿದೆ 2024 ರವರೆಗೆ ಚುನಾವಣೆ ನಡೆಯುವ ಎಲ್ಲಾ ಆರು ರಾಜ್ಯಗಳಲ್ಲಿ ಎನ್‌ಡಿಎ ಪ್ರಬಲ ಬಿಜೆಪಿ ಸರ್ಕಾರ ರಚನೆ ಮಾಡಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ 2003 ರಲ್ಲಿ ಅರುಣಾಚಲ ಪ್ರದೇಶದಲ್ಲಿ ಈಶಾನ್ಯದಲ್ಲಿ ತನ್ನ ಮೊದಲ ಸರ್ಕಾರವನ್ನು ರಚಿಸಿತು ಆದರೆ ಅದು ಗೆಗಾಂಗ್ ಅಪಾಂಗ್ ನೇತೃತ್ವದ ಸಾಮೂಹಿಕ ಪಕ್ಷಾಂತರದ ಮೂಲಕ ಸರ್ಕಾರನ್ನು ರಚನೆ ಮಾಡಿದೆ. ಕೇಸರಿ ಪಕ್ಷದ ಮೊದಲ ಚುನಾಯಿತ ಸರ್ಕಾರವು 2016 ರಲ್ಲಿ ಅಸ್ಸಾಂನಲ್ಲಿ ರಚನೆ ಆಗಿದೆ. ಈ ಸರ್ಕಾರದಲ್ಲಿ ಹಿಮಂತ ಬಿಸ್ವಾ ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರ 2017 ರಲ್ಲಿ ಮೊದಲ ಸರ್ಕಾರವನ್ನು ರಚಿಸಲು ಮಣಿಪುರದಲ್ಲಿ ಐದು ಪಕ್ಷಗಳ ಒಕ್ಕೂಟವನ್ನು ರಚಿಸಿದರು. ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಇದೇ ರೀತಿಯಲ್ಲಿ ಬಿಜೆಪಿ ಸರ್ಕಾರವನ್ನು ರಚನೆ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

Recommended Video

ಮಾತಾ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತದಿಂದ 12 ಭಕ್ತರ ಸಾವು | Oneindia Kannada

English summary
BJP will form government on its own in Manipur Says Assam CM Himanta Biswa Sarma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X