ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಹುಟ್ಟು ಹಬ್ಬದ ಹಿನ್ನೆಲೆ ಬಿಜೆಪಿಯಿಂದ 'ಹ್ಯಾಪಿ ಬರ್ತ್‌ಡೇ ಪಿಎಂ' ಲಸಿಕೆ ಬೂಸ್ಟರ್‌

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌, 09: ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿಯು ಮೂರು ವಾರಗಳ ಹ್ಯಾಪಿ ಬರ್ತ್‌ಡೇ ಪಿಎಂ ಲಸಿಕೆ ಬೂಸ್ಟರ್‌ ಅನ್ನು ನಡೆಸಲಿದೆ. ಬೂತ್‌ ಮಟ್ಟದಲ್ಲಿ ಸುಮಾರು ಐದು ಕೋಟಿ ಅಂಚೆ ಚೀಟಿಗಳಲ್ಲಿ ಧನ್ಯವಾದ ಮೋದಿಜೀ ಎಂದು ಬರೆದು ಪೋಸ್ಟ್‌ ಮಾಡುವುದು, ಹಾಗೆಯೇ ಸುಮಾರು 14 ಕೋಟಿ ರೇಷನ್‌ ಕಿಟ್‌ಗಳನ್ನು ನೀಡುವುದು, 71 ನದಿ ತೀರಗಳನ್ನು ಸ್ವಚ್ಛಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಮುಂಚಿತವಾಗಿ ಮಾಡುವ ಕಾರ್ಯಕ್ರಮಗಳು ಆಗಿದೆ.

ಹಾಗೆಯೇ ಸಾಮಾಜಿಕ ಜಾಲಾತಾಣದಲ್ಲಿ ಕೊರೊನಾ ಲಸಿಕೆಯ ಬಗ್ಗೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಜೀವನ ಹಾಗೂ ಕಾರ್ಯಗಳನ್ನು ಪ್ರಚಾರ ಮಾಡುವುದು ಕೂಡಾ ಈ ಅಭಿಯಾನದ ಭಾಗವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ 71 ಜನ್ಮ ದಿನಾಚರಣೆಯನ್ನು ಸೆಪ್ಟೆಂಬರ್‍ 17 ರಂದು ಆಚರಿಸುತ್ತಿದ್ದಾರೆ. ಹಾಗೆಯೇ ತನ್ನ ಸಾರ್ವಜನಿಕ ಸೇವೆ ಜೀವನದ ಇಪ್ಪತ್ತು ವರ್ಷಗಳನ್ನೂ ಪೂರೈಸುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಎರಡನೇ ತರಂಗದ ಹಿನ್ನೆಲೆಯಲ್ಲಿ ಈ ಅಭಿಯಾನವು ಮಹತ್ವ ಪಡೆದಿದೆ.

 'ಪ್ರಧಾನಿ ಹೆಸರಲ್ಲಿ ಪ್ರಚಾರ ಮಾಡುತ್ತೇವೆ': ಬಿಜೆಪಿಯನ್ನು ಅಣಕಿಸಿದ ಟಿಕಾಯತ್‌ 'ಪ್ರಧಾನಿ ಹೆಸರಲ್ಲಿ ಪ್ರಚಾರ ಮಾಡುತ್ತೇವೆ': ಬಿಜೆಪಿಯನ್ನು ಅಣಕಿಸಿದ ಟಿಕಾಯತ್‌

2014 ರ ಲೋಕಸಭಾ ಚುನಾವಣೆಯ ನಂತರ, ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಎಲ್ಲಾ ಸಾಮಾಜಿಕ ರಾಜಕೀಯ ಯೋಜನೆಗಳ, ಅಭಿಯಾನಗಳ ಪ್ರಚಾರಕ್ಕೆ ಮುಖ್ಯ ಅಸ್ತ್ರವಾಗಿ ಬಿಟ್ಟಿದ್ದಾರೆ. ಚುನಾವಣೆಗೆ ಅಭ್ಯರ್ಥಿ ಬೇರೊಬ್ಬರು ಆಗಿದ್ದರೂ, ಬಿಜೆಪಿ ಮಾತ್ರ ಮೋದಿ ಹೆಸರಿನಲ್ಲೇ ತನ್ನ ಎಲ್ಲಾ ಪ್ರಚಾರ ಕಾರ್ಯವನ್ನು ನಡೆಸಿದೆ. ಈ ಹಿಂದೆ ಪಕ್ಷವು ಪ್ರಧಾನಿ ಮೋದಿಯ ಹುಟ್ಟು ಹಬ್ಬದ ಹಿನ್ನೆಲೆ ಸೇವಾ ಸಪ್ತಾಹ ಕಾರ್ಯಕ್ರಮವನ್ನು ನಡೆಸಿತ್ತು. ಪ್ರಧಾನಿಯ 70 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿಯು ಆರಂಭ ಮಾಡಿದ ಸೇವಾ ಸಪ್ತಾಹ ಕಾರ್ಯಕ್ರಮವು ಬಳಿಕ ಸೇವೆ ಹಾಗೂ ಸಮರ್ಪಣೆ ಅಭಿಯಾನವಾಗಿ ವಿಸ್ತರಣೆ ಹೊಂದಿತು. ಈ ಬಾರಿಯ ಹುಟ್ಟು ಹಬ್ಬದ ಆಚರಣೆಯ ಉದ್ದೇಶವು ಕೂಡಾ ಪ್ರಧಾನಿ ಮೋದಿ ಮಾಡಿದ ಕಾರ್ಯಗಳ ಪ್ರಚಾರವಾಗಿದೆ. ಇನ್ನು ಈ ಅಭಿಯಾನವು ಮುಂದಿನ ವಿಧಾನ ಸಭೆ ಚುನಾವಣೆಯನ್ನು ಕೂಡಾ ಗುರಿಯಾಗಿಸಿಕೊಂಡಿದೆ.

BJP to roll out 3-week Happy Birthday PM booster shot

ಎರಡನೇ ಕೊರೊನಾ ಸಾಂಕ್ರಾಮಿಕ ಅಲೆಯನ್ನು ಹತೋಟಿಗೆ ತಂದ ಹಿನ್ನೆಲೆ ಹಾಗೂ ಎಪ್ಪತ್ತು ಕೋಟಿಗೂ ಅಧಿಕ ಮಂದಿಗೆ ಕನಿಷ್ಠ ಒಂದು ಡೋಸ್‌ ಕೊರೊನಾ ವೈರಸ್‌ ಸೋಂಕಿನ ವಿರುದ್ದದ ಲಸಿಕೆಯನ್ನು ನೀಡಲಾಗಿರುವ ಹಿನ್ನೆಲೆ ಇಂತಹ ಅಭಿಯಾನವು ತಮ್ಮ ಕಾರ್ಯವನ್ನು ಜನರ ಮುಂದೆ ಪ್ರಸ್ತುತ ಪಡಿಸಲು ಸಹಕಾರಿಯಾಗುತ್ತದೆ ಎಂದು ಬಿಜೆಪಿ ಪಕ್ಷವು ಅಭಿಪ್ರಾಯ ಪಟ್ಟಿದೆ.

ಇತ್ತೀಚಿನ ಸಭೆಯಲ್ಲಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯ ಉಸ್ತುವಾರಿಗಳು ಮತ್ತು ಹಿರಿಯ ರಾಜ್ಯ ಘಟಕದ ಪದಾಧಿಕಾರಿಗಳಿಗೆ ಈ ಅಭಿಯಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ ಅರುಣ್‌ ಸಿಂಗ್‌, ಕೆಲವು ಪ್ರಮುಖ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

 'ಜಿಡಿಪಿ' ಏರಿಕೆ ಎಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ದರ ಹೆಚ್ಚಳ: ರಾಹುಲ್ ಗಾಂಧಿ 'ಜಿಡಿಪಿ' ಏರಿಕೆ ಎಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ದರ ಹೆಚ್ಚಳ: ರಾಹುಲ್ ಗಾಂಧಿ

* ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಪ್ರತಿ ವ್ಯಕ್ತಿಗೆ 5 ಕೆಜಿ ಪಡಿತರ ನೀಡುವುದು, ಈ ಚೀಲದಲ್ಲಿ ಧನ್ಯವಾದ ಪ್ರಧಾನಿ ಮೋದಿ ಎಂದು ಹಾಕಿರುವುದು ಹಾಗೂ ಪ್ರಧಾನಿ ಮೋದಿಯ ಚಿತ್ರವನ್ನು ಹಾಕುವುದು. ಒಟ್ಟು 14 ಕೋಟಿ ಚೀಲಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಇನ್ನು 2.16 ಕೋಟಿ ಬ್ಯಾಗ್‌ಗಳನ್ನು ಬಿಜೆಪಿ ರಾಜ್ಯ ಸರ್ಕಾರಗಳು ವಿತರಿಸಿವೆ.

* ಕೊರೊನಾ ವೈರಸ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಧಾನಿ ಮೋದಿಯ ಸಹಾಯ ಪಡೆದ ಫಲಾನುಭವಿಗಳ ವಿಡಿಯೋವನ್ನು ಬಡವರ ರಕ್ಷಕ ಪ್ರಧಾನಿ ಮೋದಿ ಎಂದು ವೈರಲ್‌ ಮಾಡುವುದು

* ಬಡವರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯ ಕೊಡುಗೆಗಾಗಿ 5 ಕೋಟಿ 'ಧನ್ಯವಾದ ಮೋದಿಜಿ' ಪೋಸ್ಟ್ ಕಾರ್ಡ್‌ಗಳನ್ನು ನೇರವಾಗಿ ಪ್ರಧಾನಿಗೆ ಕಳುಹಿಸಲು ಬೂತ್ ಮಟ್ಟದಲ್ಲಿ ಜನರನ್ನು ಸಜ್ಜುಗೊಳಿಸುವುದು

 'ಉಗ್ರರ ಅಸ್ತಿತ್ವ ಎಂದಿಗೂ ಶಾಶ್ವತವಲ್ಲ': ತಾಲಿಬಾನ್‌ ಬಗ್ಗೆ ನರೇಂದ್ರ ಮೋದಿ 'ಉಗ್ರರ ಅಸ್ತಿತ್ವ ಎಂದಿಗೂ ಶಾಶ್ವತವಲ್ಲ': ತಾಲಿಬಾನ್‌ ಬಗ್ಗೆ ನರೇಂದ್ರ ಮೋದಿ

* ಪ್ರಧಾನಿ ನರೇಂದ್ರ ಮೋದಿಗೆ 71 ವರ್ಷ ಆಗುತ್ತಿರುವ ಹಿನ್ನೆಲೆ 71 ನದಿ ತೀರಗಳಲ್ಲಿ ಸ್ವಚ್ಛ ಕಾರ್ಯಕ್ರಮ ನಡೆಸುವುದು

* ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆಯನ್ನು ಪಡೆದವರು ಲಸಿಕೆ ಲಭ್ಯ ಮಾಡಿದ ಕಾರಣಕ್ಕೆ ಪ್ರಧಾನಿ ಮೋದಿಗೆ ವಿಡಿಯೋ ಮೂಲಕ ಧನ್ಯವಾದ ಸಲ್ಲಿಸುವುದು

* ಪ್ರಧಾನಿ ನರೇಂದ್ರ ಮೋದಿಯ ಜೀವನ ಹಾಗೂ ಕಾರ್ಯದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಅಥವಾ ರಾಜ್ಯ ಮಟ್ಟದಲ್ಲಿ ಸಭೆಗಳು ಅಥವಾ ಗೋಷ್ಠಿಗಳನ್ನು ನಡೆಸುವುದು

* ಸ್ಥಳೀಯ ಮಾಧ್ಯಮಗಳಲ್ಲಿ ಅಥವಾ ಭಾಷೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಸಾಹಿತಿಗಳ ಮಾತನ್ನು ಪ್ರಚಾರ ಮಾಡುವುದು

* ಪೋಷಕರನ್ನು ಕಳೆದುಕೊಂಡ ಅರ್ಹ ಮಕ್ಕಳಿಗೆ ನೋಂದಣಿ ಅಭಿಯಾನ ಹಾಗೂ ಪಿಎಂ-ಕೇರ್‌ ಅಡಿಯಲ್ಲಿ ನೋಂದಣಿ ಅಭಿಯಾನ

* ಪ್ರಧಾನಮಂತ್ರಿ ಸ್ವೀಕರಿಸಿದ ಸ್ಮರಣಿಕೆಗಳ ಬಿಡ್ಡಿಂಗ್‌ಗಾಗಿ ಸಾರ್ವಜನಿಕರನ್ನು ಸಜ್ಜುಗೊಳಿಸುವಿಕೆ

ಈ ಮೇಲಿನ ಎಲ್ಲಾ ಕಾರ್ಯಕ್ರಮಗಳನ್ನು ಬಿಜೆಪಿ ಪಕ್ಷದ ನಾಯಕರು ತಮ್ಮ ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ ನಡೆಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸೂಚಿಸಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
BJP to roll out 3-week Happy Birthday PM booster shot as Prime Minister Narendra Modi 71st birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X