ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯಿಂದ ಹಕ್ಕುಚ್ಯುತಿ ಮಂಡನೆ
ನವದೆಹಲಿ, ಜುಲೈ 20: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಪರ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಅಪ್ಪುಗೆ, ಕಣ್ ಮಿಟುಕಿನಿಂದ ಎಲ್ಲರ ಗಮನ ಸೆಳೆದಿದ್ದಲ್ಲದೆ, ರಫೇಲ್ ಒಪ್ಪಂದ ಬಗ್ಗೆ ಮಾತನಾಡಿದರು.
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಪಾರ ಪ್ರಮಾಣದ ಅವ್ಯವಹಾರವಾಗಿದೆ ಎಂದು ರಾಹುಲ್ ಆರೋಪಿಸಿದರು. ರಕ್ಷಣಾ ಸಚಿವಾಲಯದಿಂದ ರಹಸ್ಯ ಒಪ್ಪಂದವಾಗಿದೆ, ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮಕ್ರಾನ್ ಅವರು ಖುದ್ದು ನನಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು. ಈ ಬಗ್ಗೆ ಸದನದಲ್ಲಿ ಭಾರಿ ಗದ್ದಲ ಉಂಟಾಗಿದೆ.
ರಾಹುಲ್ ಗಾಂಧಿ ಅಪ್ಪುಗೆ, ಕಣ್ಮಿಟುಕು: ಗಣ್ಯರು ಏನಂತಾರೆ?
ರಾಹುಲ್ ಗಾಂಧಿ ಭಾಷಣದ ಬಗ್ಗೆ ಆಕ್ಷೇಪವೆತ್ತಿದ್ದ ಸಂಸದ ಅನಂತಕುಮಾರ್ 353 ನಿಯಮದ ಪ್ರಕಾರ ಮುಂಚಿತವಾಗಿ ಅನುಮತಿ ಇಲ್ಲದೆ, ಮೋದಿ ವಿರುದ್ಧ ವಾಕ್ ಪ್ರಹಾರ ನಡೆಸಲಾಗುತ್ತಿದೆ ಎಂದರು ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರ ನಡುವೆ ಮಾತಿನ ಚಕಮಕಿ ನಡೆಯಿತು.
BJP MPs will move a privilege motion against Rahul Gandhi for putting forth falsehood and misleading the Parliament: Ananth Kumar, BJP leader and Union Affairs minister pic.twitter.com/QSCFEdQEKM
— ANI (@ANI) July 20, 2018
ಅವಿಶ್ವಾಸ ನಿರ್ಣಯ LIVE: ರಾಹುಲ್ ನಂತರ ಮೋದಿ ಭಾಷಣದ ಮೋಡಿ
'ಸದನದಲ್ಲಿ ತಪ್ಪು ಮಾಹಿತಿ ನೀಡಿ, ಸದನದ ನಿಯಮಗಳನ್ನು ಮುರಿದಿದ್ದಲ್ಲದೆ, ಸುಗಮ ಕಲಾಪಕ್ಕೆ ಅಡ್ಡಿ ಪಡಿಸಿದ ರಾಹುಲ್ ಗಾಂಧಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುತ್ತೇವೆ' ಎಂದು ಸಂಸದ ಅನಂತಕುಮಾರ್ ಹೇಳಿದರು.
His behaviour was childish. He has grown old but it is unfortunate that he has not grown up. It is unfortunate that the president of Congress is so ill-informed and immature: Ananth Kumar, BJP leader and Union Affairs minister on #RahulGandhi pic.twitter.com/k2EknQneFm
— ANI (@ANI) July 20, 2018
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿದ ಪ್ರಮುಖ ಅಂಶಗಳು
ಸದನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಫೆಲ್ ಒಪ್ಪಂದ ಬಗ್ಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ : 2008ರಲ್ಲಿ ಫ್ರಾನ್ಸ್ ಜತೆ ಆದ ಒಪ್ಪಂದದಲ್ಲೆ ರಫೆಲ್ ಬಗ್ಗೆ ಉಲ್ಲೇಖವಿದೆ, ಯಾವುದೇ ರಹಸ್ಯ ಇದರಲ್ಲಿ ಇಲ್ಲ ಎಂದರು.