ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೋಹರ್ ಪರಿಕರ್ ಅನಾರೋಗ್ಯ; ಬಿಜೆಪಿಯಿಂದ ಪರ್ಯಾಯ ನಾಯಕನ ಆಯ್ಕೆ

|
Google Oneindia Kannada News

ನವದೆಹಲಿ/ಪಣಜಿ, ಸೆಪ್ಟೆಂಬರ್ 14: ಗೋವಾ ಮುಖ್ಯಮಂತ್ರಿ ಸ್ಥಾನಕ್ಕೆ ಪರ್ಯಾಯ ನಾಯಕರೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ಸೋಮವಾರ ತಂಡವೊಂದನ್ನು ಕಳಿಸಲಾಗುತ್ತಿದೆ. ಸ್ವತಃ ಮನೋಹರ್ ಪರಿಕರ್ ಈ ಬಗ್ಗೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜತೆಗೆ ಮಾತನಾಡಿದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

62 ವರ್ಷದ ಮನೋಹರ್ ಪರಿಕರ್ ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮಾಮೂಲಿನಂತೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ವತಃ ಅವರೇ ತಿಳಿಸಿರುವುದಾಗಿ ಕೂಡ ಮೂಲಗಳು ಹೇಳುತ್ತಿವೆ. ಗೋವಾ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಕೂಡ ಶುಕ್ರವಾರ ನಡೆಸಲಾಯಿತು.

'ಸರ್ಜಿಕಲ್ ಸ್ಟ್ರೈಕ್ ಗೆ ರಾಹುಲ್ ಗಾಂಧಿಯವರನ್ನೂ ಕರೆದೊಯ್ಯಬೇಕಿತ್ತೇ?''ಸರ್ಜಿಕಲ್ ಸ್ಟ್ರೈಕ್ ಗೆ ರಾಹುಲ್ ಗಾಂಧಿಯವರನ್ನೂ ಕರೆದೊಯ್ಯಬೇಕಿತ್ತೇ?'

ಕಳೆದ ವಾರ ವೈದ್ಯಕೀಯ ಚಿಕಿತ್ಸೆ ಪಡೆದು, ಅಮೆರಿಕದಿಂದ ಹಿಂತಿರುಗಿದ್ದರು ಪರಿಕರ್. ಆ ನಂತರ ಗುರುವಾರ ಸಂಜೆ ಉತ್ತರ ಗೋವಾದ ಕಾಂಡೋಲಿಮ್ ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸೋಮವಾರ ಗೋವಾಕ್ಕೆ ಭೇಟಿ ನೀಡುವ ತಂಡದಲ್ಲಿ ರಾಮ್ ಲಾಲ್ ಮತ್ತು ಬಿ.ಎಲ್.ಸಂತೋಷ್ ಇರಲಿದ್ದಾರೆ.

Manohar Parrikar

ಮನೋಹರ್ ಪರಿಕರ್ ಆರೋಗ್ಯ ಚೇತರಿಕೆ ಬಗ್ಗೆ ಸ್ಪಷ್ಟತೆ ಸಿಗುವವರೆಗೆ ಪರ್ಯಾಯ ನಾಯಕರೊಬ್ಬರನ್ನು ಗುರುತಿಸಲಾಗುವುದು. ಆದರೆ ರಾಜಕೀಯ ವಿಶ್ಲೇಷಕರ ಪ್ರಕಾರ, ಪರಿಕರ್ ಅವರಿಗೆ ಪರ್ಯಾಯ ಹುಡುಕುವುದು ಸುಲಭವಲ್ಲ. ಏಕೆಂದರೆ ಗೋವಾದಲ್ಲಿ ಅವರದು ಪ್ರಶ್ನಾತೀತ ನಾಯಕತ್ವ.

ಆದರೆ, ಅವರ ಆರೋಗ್ಯ ಹದಗೆಡುತ್ತಿರುವುದರಿಂದ ವಿರೋಧ ಪಕ್ಷವಾದ ಕಾಂಗ್ರೆಸ್ ಅಲ್ಲಿನ ವಿಧಾನಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸುತ್ತಿದೆ. ಗೋವಾದಲ್ಲಿ ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದ್ದರೂ ಮೈತ್ರಿ ಸರಕಾರ ರಚಿಸುವಲ್ಲಿ ಬಿಜೆಪಿ ಸಫಲವಾಗಿತ್ತು.

ಅಮೆರಿಕಾದಿಂದ ಬಂದ ಮರುದಿನವೇ ಕೆಲಸಕ್ಕೆ ಮರಳಿದ ಪರಿಕ್ಕರ್ಅಮೆರಿಕಾದಿಂದ ಬಂದ ಮರುದಿನವೇ ಕೆಲಸಕ್ಕೆ ಮರಳಿದ ಪರಿಕ್ಕರ್

ಪರಿಕರ್ ಅನಾರೋಗ್ಯದ ಕಾರಣಕ್ಕೆ ಗೋವಾದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆದ್ದರಿಂದ ಸರಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಕೂಡ ಚಿಕಿತ್ಸೆ ಹಾಗೂ ಆ ನಂತರದ ವೈದ್ಯಕೀಯ ಪರೀಕ್ಷೆಗಳಿಗಾಗಿ ಹಲವು ಬಾರಿ ಅಮೆರಿಕಕ್ಕೆ ಹೋಗಿ ಬಂದಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಮನೋಹರ್ ಪರಿಕರ್ ಗೆ ಪರ್ಯಾಯವಾಗಿ ನಾಯಕರೊಬ್ಬರನ್ನು ಆಯ್ಕೆ ಮಾಡಬೇಕಿದೆ.

English summary
The BJP will send a team to Goa on Monday to "explore alternatives" after Chief Minister Manohar Parrikar spoke to BJP chief Amit Shah, sources have told NDTV. Mr Parrikar, 62, has been unwell for months and is believed to have expressed his inability to work normally, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X