ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕಾಂಗ್ರೆಸ್ ಗ್ರಹಿಕೆಯನ್ನೇ ಸುಳ್ಳು ಮಾಡಿದ ಈಶಾನ್ಯ ರಾಜ್ಯದ ಗೆಲುವು"

|
Google Oneindia Kannada News

ಶಿಲ್ಲಾಂಗ್, ಮಾರ್ಚ್ 06: ಈಶಾನ್ಯ ರಾಜ್ಯಗಳಲ್ಲಿ ಕೇವಲ ಕಾಂಗ್ರೆಸ್ ಮಾತ್ರವೇ ಗೆಲ್ಲಬಹುದು ಎಂಬ ಗ್ರಹಿಕೆ ಇತ್ತು. ಆದರೆ ಆ ಗ್ರಹಿಕೆಯನ್ನು ಬಿಜೆಪಿ ಇದೀಗ ಸುಳ್ಳು ಮಾಡಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದರು.

ಮೇಘಾಲಯದ ನೂತನ ಮುಖ್ಯಮಂತ್ರಿಯಾಗಿ ಇಂದು(ಮಾ.6) ಎನ್ ಪಿಪಿ(ನ್ಯಾಶ್ನಲ್ ಪೀಪಲ್ಸ್ ಪಾರ್ಟಿ)ಯ ಕೊನ್ರಾಡ್ ಸಂಗ್ಮಾ ಪ್ರಮಾಣವಚನ ಸ್ವೀಕರಿಸಿದರು. ಎನ್ ಪಿಪಿ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಈ ಸಮಾರಂಭದಲ್ಲಿ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು.

ಮೇಘಾಲಯ ಮುಖ್ಯಮಂತ್ರಿಯಾಗಿ ಕೊನ್ರಾಡ್ ಪ್ರಮಾಣವಚನ ಸ್ವೀಕಾರ ಮೇಘಾಲಯ ಮುಖ್ಯಮಂತ್ರಿಯಾಗಿ ಕೊನ್ರಾಡ್ ಪ್ರಮಾಣವಚನ ಸ್ವೀಕಾರ

ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಕೊನ್ರಾಡ್ ಸಂಗ್ಮಾ ಅವರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಗೆಲುವು ಬಹುದೊಡ್ಡ ವಿಜಯದ ಸಂಕೇತ. ಪ್ರಧಾನಿ ನರೇಂದ್ರ ಮೋದಿಯವರ ಯಶಸ್ವೀ ನಾಯಕತ್ವವೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.

BJP to change perception of Cong in N East states: Rajnath Singh

21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೇಘಾಲಯದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಒಟ್ಟು 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಎನ್ ಪಿಪಿ, ಬಿಜೆಪಿಯ 2 ಮತ್ತು ಇತರ ಪ್ರಾದೇಶಿಕ ಪಕ್ಷಗಳ 13 ಶಾಸಕರ ಬಲ ಪಡೆದಿದೆ. ಸದ್ಯಕ್ಕೆ ಒಟ್ಟು 34 ಶಾಸಕ ಬಲದೊಂದಿಗೆ ಬಹುಮತ ಪಡೆದು ಸರ್ಕಾರ ರಚಿಸಿದೆ.
English summary
Union Home Minister Rajnath Singh on Tuesday took a jibe at the Congress Party and said it was a perception that only the grand old party could survive in the north-east, but now the Bharatiya Janata Party (BJP) has changed its perception.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X