ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

By Poll Report Card: ಬಿಜೆಪಿ 41/59, ಕೈ ಪಡೆಗೆ 31 ಕಡೆ ನಷ್ಟ

|
Google Oneindia Kannada News

ಬಿಹಾರ ವಿಧಾನಸಭೆ ಚುನಾವಣೆ ಜೊತೆಗೆ ದೇಶದ 11 ರಾಜ್ಯಗಳಲ್ಲಿನ 59 ವಿಧಾನಸಭಾ ಕ್ಷೇತ್ರಗಳಿಗೆ ನಡೆಸಲಾದ ಚುನಾವಣೆಯ ಫಲಿತಾಂಶವೂ ನವೆಂಬರ್ 10ರಂದು ಪ್ರಕಟವಾಗಿದೆ. ಬಿಹಾರದಲ್ಲಿ ಮಿತ್ರಪಕ್ಷ ಜೆಡಿಯುವನ್ನು ಹಿಂದಿಕ್ಕಿ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಸಾಧನೆ ಮಾಡಿದೆ. ಇದೇ ರೀತಿ ಉಪ ಚುನಾವಣೆ ರಿಪೋರ್ಟ್ ಕಾರ್ಡ್ ನೋಡಿದರೆ 59 ಕ್ಷೇತ್ರಗಳಲ್ಲಿ 41 ಬಿಜೆಪಿ ಪಾಲಾಗಿದ್ದು, ಭರ್ಜರಿ ಫಲಿತಾಂಶ ನೀಡಿದೆ.

ಕೊರೊನಾವೈರಸ್ ಕಾಟದ ನಡುವೆ ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನವೆಂಬರ್ 3ರಂದು ಚುನಾವಣೆ ನಡೆಸಲಾಯಿತು. ಎಲ್ಲೆಡೆ ಈಗ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಪ್ರಮುಖವಾಗಿ ಮಧ್ಯಪ್ರದೇಶದಲ್ಲಿ ಸರ್ಕಾರದ ಅಸ್ತಿತ್ವಕ್ಕೆ ಈ ಫಲಿತಾಂಶ ದಿಕ್ಸೂಚಿ ನೀಡಲಿದೆ.

ಶೇಕಡವಾರು ಮತ ಗಳಿಕೆ: ಆರ್‌ಜೆಡಿ ಟಾಪ್, ಜೆಡಿಯು 3ನೇ ಸ್ಥಾನ ಶೇಕಡವಾರು ಮತ ಗಳಿಕೆ: ಆರ್‌ಜೆಡಿ ಟಾಪ್, ಜೆಡಿಯು 3ನೇ ಸ್ಥಾನ

ಮಧ್ಯಪ್ರದೇಶದಲ್ಲಿ 229 ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವು 107 ಸ್ಥಾನ ಹೊಂದಿದ್ದು, ಉಪ ಚುನಾವಣೆಯಲ್ಲಿ 28 ಸ್ಥಾನದ ಪೈಕಿ ಕನಿಷ್ಠ 8 ಸ್ಥಾನ ಗೆಲ್ಲಬೇಕಾಗಿತ್ತು. ಬಿಜೆಪಿ ಆರಂಭದಿಂದಲೇ ಮುನ್ನಡೆ ಪಡೆದುಕೊಂಡು 19 ಸ್ಥಾನ ಗಳಿಸಿದರೆ, ಕಾಂಗ್ರೆಸ್ 87 ಸ್ಥಾನ ಹೊಂದಿದ್ದು, ಎಲ್ಲಾ 28 ಸ್ಥಾನವನ್ನು ಗೆಲ್ಲಬೇಕಿತ್ತು. ಆದರೆ, ಗೆದ್ದಿದ್ದು ಮಾತ್ರ 9ಸ್ಥಾನಗಳನ್ನು ಮಾತ್ರ.

BJP stellar show in 41 by-Election results

11 ರಾಜ್ಯಗಳಲ್ಲಿನ 59 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶ ನವೆಂಬರ್ 10, 2020

ಸ್ಥಾನ ಗಳಿಕೆ:

  • ಛತ್ತೀಸ್​ಗಢ: ಕಾಂಗ್ರೆಸ್ 1
  • ಗುಜರಾತ್: ಬಿಜೆಪಿ 8
  • ಹರ್ಯಾಣ: ಕಾಂಗ್ರೆಸ್ 1
  • ಜಾರ್ಖಂಡ್: ಕಾಂಗ್ರೆಸ್ 1, ಜೆಎಂಎಂ1
  • ಕರ್ನಾಟಕ: ಬಿಜೆಪಿ 2
  • ಮಧ್ಯಪ್ರದೇಶ: ಬಿಜೆಪಿ 19, ಕಾಂಗ್ರೆಸ್ 9
  • ಮಣಿಪುರ: ಬಿಜೆಪಿ 4, ಪಕ್ಷೇತರ 1
  • ಉತ್ತರಪ್ರದೇಶ: ಬಿಜೆಪಿ 6, ಎಸ್ಪಿ 1
  • ತೆಲಂಗಾಣ: ಬಿಜೆಪಿ 1
  • ಒಡಿಶಾ: ಬಿಜೆಡಿ 2
  • ನಾಗಾಲ್ಯಾಂಡ್: ಎನ್ಡಿಪಿಪಿ 1, ಪಕ್ಷೇತರ 1

ಯಾವ ಪಕ್ಷಕ್ಕೆ ಪ್ಲಸ್ ಯಾವ ಪಕ್ಷಕ್ಕೆ ಮೈನಸ್

Recommended Video

ಇವ್ರೆ ನೋಡಿ BJPಯ Lucky charm !! | Oneindia Kannada
  • ಛತ್ತೀಸ್​ಗಢ: ಕಾಂಗ್ರೆಸ್ +1, ಜೆಸಿಸಿಜೆ -1
  • ಗುಜರಾತ್: ಬಿಜೆಪಿ +8, ಕಾಂಗ್ರೆಸ್ -8
  • ಹರ್ಯಾಣ: ಕಾಂಗ್ರೆಸ್ 1 Nil
  • ಜಾರ್ಖಂಡ್: ಕಾಂಗ್ರೆಸ್ 1, ಜೆಎಂಎಂ1 Nil
  • ಕರ್ನಾಟಕ: ಬಿಜೆಪಿ +2, ಕಾಂಗ್ರೆಸ್ -1, ಜೆಡಿಎಸ್ -1
  • ಮಧ್ಯಪ್ರದೇಶ: ಬಿಜೆಪಿ +18, ಕಾಂಗ್ರೆಸ್ -18
  • ಮಣಿಪುರ: ಬಿಜೆಪಿ +4, ಪಕ್ಷೇತರ +1, ಕಾಂಗ್ರೆಸ್ -5
  • ಉತ್ತರಪ್ರದೇಶ: ಬಿಜೆಪಿ 6, ಎಸ್ಪಿ 1 Nil
  • ತೆಲಂಗಾಣ: ಬಿಜೆಪಿ +1, ಟಿಆರ್‌ಎಸ್ -1
  • ಒಡಿಶಾ: ಬಿಜೆಡಿ +1, ಬಿಜೆಪಿ -1
  • ನಾಗಾಲ್ಯಾಂಡ್: ಎನ್ಡಿಪಿಪಿ +1, ಪಕ್ಷೇತರ +1, ಎನ್ ಪಿಎಫ್ -1

English summary
Apart from putting up a stellar performance in Bihar, the BJP secured victory in 41 out of 59 by Elections
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X