ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ: ಬಿಜೆಪಿ-ಕಾಂಗ್ರೆಸ್ ಖರ್ಚು ಮಾಡಿದ ಹಣದ ಲೆಕ್ಕ

|
Google Oneindia Kannada News

Recommended Video

ನೋಟಿನ ಮೇಲೆ ಲಕ್ಷ್ಮಿ ಚಿತ್ರ ಮುದ್ರಿಸಿ ರೂಪಾಯಿ ಮೌಲ್ಯ ಹೆಚ್ಚಿಸಬಹುದಾ ? | ONEINDIA KANNADA

ನವದೆಹಲಿ, ಜನವರಿ 16: ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಖರ್ಚು ಮಾಡಿರುವ ಹಣದ ಲೆಕ್ಕವನ್ನು ಆಯೋಗವು ಬಹಿರಂಗಪಡಿಸಿದೆ.

ಲೋಕಸಭೆ ಚುನಾವಣೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗಿಂತಲೂ ಬಿಜೆಪಿ ಅತಿ ಹೆಚ್ಚು ಹಣವನ್ನು ಖರ್ಚು ಮಾಡಿದೆ. ಎರಡನೇ ಸ್ಥಾನ ಕಾಂಗ್ರೆಸ್‌ಗೆ.

"ಕರ್ನಾಟಕ ಉಪ ಚುನಾವಣೆಯಲ್ಲಿ ಒಂದು ಕ್ಷೇತ್ರಕ್ಕೆ 100 ಕೋಟಿ ಖರ್ಚು"

2019 ರ ಲೋಕಸಭೆ ಚುನಾವಣೆ ಮತ್ತು ಏಪ್ರಿಲ್-ಮೇ ನಲ್ಲಿ ನಡೆದ ನಾಲ್ಕು ವಿಧಾನಸಭೆ ಚುನಾವಣೆಗೆ ಬಿಜೆಪಿ ಬರೋಬ್ಬರಿ 1284 ಕೋಟಿ ರೂಪಾಯಿ ಹಣ ಖರ್ಚು ಮಾಡಿದೆ. ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಖರ್ಚು ಮಾಡಿರುವುದು 820 ಕೋಟಿ.

BJP Spent 1200 Crore For Lok Sabha Elections

ಹಣಕಾಸು ವೆಚ್ಚದ ಖರ್ಚನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆ ಆಯೋಗಕ್ಕೆ ನೀಡಿದ್ದು, ಈ ಮಾಹಿತಿ ಪ್ರಕಾರ ಬಿಜೆಪಿಯು ಚುನಾವಣೆ ಸಮಯ ಪ್ರಚಾರಕ್ಕೆ 1078 ಕೋಟಿ. ಅಭ್ಯರ್ಥಿಗಳಿಗೆಂದು 180.5 ಕೋಟಿ, ಮಾಧ್ಯಮಗಳಿಗೆ 6.33 ಲಕ್ಷ, ಪ್ರಚಾರ ಸಾಮಗ್ರಿಗಳಿಗೆ 46 ಲಕ್ಷ, ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳಿಗೆ 9.91 ಕೋಟಿ, ಇತರೆ ಖರ್ಚು 2.52 ಕೋಟಿ ಮತ್ತು ಅಭ್ಯರ್ಥಿಗಳ ಮೇಲಿನ ಅಪರಾಧ ಪ್ರಕರಣಗಳ ಜಾಹೀರಾತಿಗೆ 48.96 ಲಕ್ಷ ಖರ್ಚು ಮಾಡಲಾಗಿದೆ.

2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಯು 714 ಕೋಟಿಖರ್ಚು ಮಾಡಿತ್ತು. ಅದು ಈ ಬಾರಿ 77 % ಹೆಚ್ಚಾಗಿದೆ. ಬಿಜೆಪಿಯ ಆದಾಯವೂ ಸಹ 137% ಹೆಚ್ಚಾಗಿದೆ.ಸ

ಲೋಕಸಭೆ ಚುನಾವಣೆ ಮತ್ತು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಸಾ, ಸಿಕ್ಕಿಂ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಕೇಂದ್ರ ಕಚೇರಿಯಿಂದಲೇ 755 ಕೋಟಿ ಹಣ ಖರ್ಚು ಮಾಡಲಾಗಿದೆ. 175 ಕೋಟಿಯನ್ನು ಸ್ಟಾರ್ ಪ್ರಚಾರಕರಿಗಾಗಿ, ಮಾಧ್ಯಮಗಳ ಜಾಹೀರಾತಿಗಾಗಿ 325 ಕೋಟಿ, ಪ್ರಚಾರ ವಸ್ತುಗಳಿಗಾಗಿ 25.40 ಕೋಟಿ, 15.91 ಕೋಟಿ ಹಣ ಸಭೆಗಳಿಗಾಗಿ ಮತ್ತು 212.72 ಕೋಟಿಯನ್ನು 'ಇತರೆ' ಕಾರಣಗಳಿಗಾಗಿ ಖರ್ಚು ಮಾಡಲಾಗಿದೆ. ಈ ಖರ್ಚು ಬಿಜೆಪಿ ಕೇಂದ್ರ ಕಚೇರಿಯಿಂದ ಆಗಿದೆ.

ಇನ್ನು ಕಾಂಗ್ರೆಸ್ ಪಕ್ಷವು 2014 ರ ಲೋಕಸಭೆ ಚುನಾವಣೆಯಲ್ಲಿ 516 ಕೋಟಿ ಖರ್ಚು ಮಾಡಿತ್ತು. 2019 ರ ಚುನಾವಣೆಯಲ್ಲಿ 820 ಕೋಟಿ ಖರ್ಚು ಮಾಡಿದೆ.

English summary
BJP spent 1200 crore rupees in Lok sabha elections 2019. Congress spent 820 crore rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X