ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಠ್ಮಂಡುವಿನ ನೈಟ್‌ಕ್ಲಬ್‌ನಲ್ಲಿ ರಾಹುಲ್ ಗಾಂಧಿ ಪಾರ್ಟಿ: ಬಿಜೆಪಿ ಟೀಕೆ

|
Google Oneindia Kannada News

ಕಠ್ಮಂಡು ಮೇ 3: ಕಠ್ಮಂಡುವಿನ ನೈಟ್‌ಕ್ಲಬ್‌ನಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ಪಾರ್ಟಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಿಜೆಪಿ ಟೀಕಾ ಪ್ರಹಾರಕ್ಕೆ ಎಡೆ ಮಾಡಿದೆ. ಇದಕ್ಕೆ ಕಾಂಗ್ರೆಸ್, ರಾಹುಲ್ ಗಾಂಧಿ ಪಾರ್ಟಿ ಮಾಡೋದ್ರಲ್ಲಿ ತಪ್ಪೇನಿದೆ? ಎಂದು ಬಿಜೆಪಿಗೆ ಮರುಪ್ರಶ್ನೆ ಮಾಡುವ ಮೂಲಕ ತನ್ನ ಉನ್ನತ ನಾಯಕನನ್ನು ಸಮರ್ಥಿಸಿಕೊಂಡಿದೆ.

Recommended Video

ನೇಪಾಳದ ಪಬ್ ನಲ್ಲಿ ರಾಹುಲ್ ಗಾಂಧಿ ಪಾರ್ಟಿ ಮಾಡ್ತಿರೋ ವಿಡಿಯೋ ಫುಲ್ ವೈರಲ್ | Oneindia Kannada

ಪತ್ರಿಕಾಗೋಷ್ಠಿಯಲ್ಲಿ ವೈರಲ್ ವಿಡಿಯೊ ಕುರಿತು ಕೇಳಲಾದ ಪ್ರಶ್ನೆಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ರಾಹುಲ್ ಗಾಂಧಿ ಅವರು ಕಠ್ಮಂಡುವಿನಲ್ಲಿ ಸ್ನೇಹಿತನ ಮದುವೆಯಲ್ಲಿ ಭಾಗವಹಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ವಿನಾಕಾರಣ ಕಾಂಗ್ರೆಸ್ ನಾಯಕರ ಹಿಂದೆ ಹೋಗುವ ಬದಲು ಆಮದು ವಿಚಾರಗಳತ್ತ ಗಮನ ಹರಿಸುವಂತೆ ಬಿಜೆಪಿಗೆ ಕಟುವಾಗಿ ಸಲಹೆ ನೀಡಿದರು.

"ರಾಹುಲ್ ಗಾಂಧಿ ತಮ್ಮ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಕಠ್ಮಂಡುವಿಗೆ ತೆರಳಿದ್ದಾರೆ. ಅವರು ಅಲ್ಲಿಗೆ ವೈಯಕ್ತಿಕ ಭೇಟಿಯಲ್ಲಿದ್ದಾರೆ. ಬಿಜೆಪಿ ವಿದ್ಯುತ್ ಬಿಕ್ಕಟ್ಟು, ಹಣದುಬ್ಬರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಬಿಟ್ಟು ರಾಹುಲ್ ಗಾಂಧಿ ಬಗ್ಗೆ ಅವರಿಗೆ ಚಿಂತೆ ಯಾಕೆ? ರಾಹುಲ್ ಗಾಂಧಿ ಪ್ರಪಂಚದಲ್ಲಿ ಎಲ್ಲಾ ಕಡೆ ಸಮಯವನ್ನು ನೀಡುತ್ತಾರೆ" ಎಂದು ಸುರ್ಜೆವಾಲಾ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

"ನಾನು ಈ ದೇಶದಲ್ಲಿ ಕುಟುಂಬವನ್ನು ಹೊಂದಿರುವಾಗ, ಮದುವೆ ಮತ್ತು ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸುವುದು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ವಿಷಯವಾಗಿದೆ. ಮದುವೆಯಾಗುವುದು, ಯಾರೊಂದಿಗಾದರೂ ಸ್ನೇಹಿತರಾಗುವುದು ಅಥವಾ ಅವರ ಮದುವೆಯಲ್ಲಿ ಪಾಲ್ಗೊಳ್ಳುವುದು ಈ ದೇಶದಲ್ಲಿ ಇನ್ನೂ ಅಪರಾಧವಾಗಲಿಲ್ಲ"ಎಂದು ಅವರು ಬಿಜೆಪಿಗೆ ಕುಟುಕಿದರು.

BJP slams Rahul Gandhi’s visit to Kathmandu nightclub, Congress says what’s wrong with it?

ಜೊತೆಗೆ ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು ಕೇಸರಿ ಪಕ್ಷವು ಸುಳ್ಳುಗಳನ್ನು ಹರಡುತ್ತಿದೆ ಎಂದು ಆರೋಪಿಸಿದರು. ಜೊತೆಗೆ ಅವರು ಸಾಮಾನ್ಯ ವ್ಯಕ್ತಿಯಂತೆ ಖಾಸಗಿ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸಿದ್ದಾರೆ. ಹೀಗಿರುವಾಗ ರಾಹುಲ್ ಗಾಂಧಿಯದ್ದು ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. "ಅವರು ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸಿರುವುದರಲ್ಲಿ ತಪ್ಪೇನು? ಇವರ ಬಗ್ಗೆ ಸಂಘಿಗಳೇಕೆ ಹೆದರುತ್ತಾರೆ? ಸಂಘಿಗಳು ಏಕೆ ಸುಳ್ಳನ್ನು ಹಬ್ಬಿಸುತ್ತಿದ್ದಾರೆ? ನಾವೆಲ್ಲರೂ ಖಾಸಗಿ ಕಾರ್ಯಕ್ರಮಗಳಿಗೆ ಸಾಮಾನ್ಯವಾಗಿ ಹಾಜರಾಗುತ್ತೇವೆ" ಎಂದು ಟ್ಯಾಗೋರ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಸುರ್ಜೇವಾಲಾ, "ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಹೋದಂತೆ ರಾಹುಲ್ ಗಾಂಧಿ ಆಹ್ವಾನಿಸದ ಅತಿಥಿಯಾಗಿ ಹೋಗಿಲ್ಲ. ಸ್ನೇಹಿತನ ಖಾಸಗಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಅವರು ಸ್ನೇಹ ದೇಶವಾದ ನೇಪಾಳಕ್ಕೆ ತೆರಳಿದ್ದಾರೆ" ಎಂದಿದ್ದಾರೆ. ಬಿಜೆಪಿಯು ಹಂಚಿಕೊಂಡ ದಿನಾಂಕವಿಲ್ಲದ ವಿಡಿಯೊ ರಾಹುಲ್ ಗಾಂಧಿಯವರು ಮಂದಬೆಳಕಿನ ನೈಟ್‌ಕ್ಲಬ್‌ನಲ್ಲಿ ಸ್ನೇಹಿತರ ಜೊತೆಯಲ್ಲಿ ಇರುವುದನ್ನು ತೋರಿಸುತ್ತದೆ. ಜನರು ಹಿನ್ನೆಲೆಯಲ್ಲಿ ಜೋರಾಗಿ ಸಂಗೀತಕ್ಕೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

English summary
As the BJP stoked controversy by sharing a video of Rahul Gandhi partying at a nightclub in Kathmandu, the Congress defended its top leader and asked “what’s wrong with it?”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X