ಬಿಜೆಪಿಯ ಸಂಯುಕ್ತಾ ಲಕ್ನೋದ ಮೊದಲ ಮಹಿಳಾ ಮೇಯರ್

Subscribe to Oneindia Kannada

ಲಕ್ನೋ, ಡಿಸೆಂಬರ್ 1: ಲಕ್ನೋದ 100 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರ ಮೇಯರ್ ಹುದ್ದೆಗೇರಲಿದ್ದಾರೆ. ಬಿಜೆಪಿಯ ಸಂಯುಕ್ತಾ ಭಾಟಿಯಾ ಲಕ್ನೋದ ಮೇಯರ್ ಸ್ಥಾನ ಅಲಂಕರಿಸಲಿದ್ದಾರೆ.

ಸಂಯುಕ್ತಾ ಭಾಟಿಯಾ ನಮ್ಮ ಮೇಯರ್ ಅಭ್ಯರ್ಥಿ ಎಂದು ಬಿಜೆಪಿ ನವೆಂಬರ್ 5ರಂದೇ ಘೋಷಿಸಿತ್ತು. ಇದೀಗ ಬಿಜೆಪಿ ಲಕ್ನೋದಲ್ಲಿ ಗೆದ್ದಿರುವುದರಿಂದ 100 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರೊಬ್ಬರು ಲಕ್ನೋದ ಮೇಯರ್ ಹುದ್ದೆಗೇರಲಿದ್ದಾರೆ.

 BJP's Sanyukta Bhatia Set to Become First Woman Mayor of Lucknow in 100 year

ಲಕ್ನೋದಲ್ಲಿ 110 ವಾರ್ಡ್ ಗಳಿದ್ದು ಹೆಚ್ಚಿನ ವಾರ್ಡ್ ಗಳಲ್ಲಿ ಬಿಜೆಪಿ ಗೆದ್ದು ಬಹುಮತ ಗಳಿಸಿದೆ.

ಒಟ್ಟಾರೆ ಹೊರ ಬಿದ್ದಿರುವ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಲ್ಲಿ 16 ಮೇಯರ್ ಸ್ಥಾನಗಳಲ್ಲಿ ಬಿಜೆಪಿ 12ನ್ನು ಗೆದ್ದುಕೊಂಡಿದೆ. ಇನ್ನೂ ಎರಡು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಇನ್ನೆರಡು ಸ್ಥಾನಗಳನ್ನು ಬಿಎಸ್ಪಿ ಗೆದ್ದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sanyukta Bhatia of the ruling BJP in Uttar Pradesh is set to be the first woman mayor of Lucknow in 100 years. On November 5, the BJP had announced Sanyukta as its mayoral candidate for the city.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ