ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RSS, ಬಿಜೆಪಿ ನನ್ನ ಹತ್ಯೆಗೆ ಸಂಚು ರೂಪಿಸುತ್ತಿದೆ: ತೇಜ್ ಪ್ರತಾಪ್

|
Google Oneindia Kannada News

ಮಹುನಾ, ಆಗಸ್ಟ್ 23: ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಆರ್ ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಕೈ ಹಿಡಿದು, ದಾಳಿಗೆ ಪ್ರಯತ್ನಿಸಿದ್ದ ಘಟನೆ ಬುಧವಾರ ಬಿಹಾರದ ಮಹುನಾ ಎಂಬಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ತೇಜ್ ಪ್ರತಾಪ್, 'ಈ ಘಟನೆಯ ಹಿಂದೆ ಆರೆಸ್ಸೆಸ್(ರಾಷ್ಟ್ರೀಯ ಸ್ವಯಂಸೇವಕ ಸಂಘ) ಮತ್ತು ಬಿಜೆಪಿಯ ಕೈವಾಡವಿದೆ. ಅವರು ನನ್ನನ್ನು ಕೊಲ್ಲು ಸಂಚು ರೂಪಿಸುತ್ತಿದ್ದಾರೆ' ಎಂದು ದೂರಿದ್ದಾರೆ.

ಬಿಜೆಪಿ ಗೂಂಡಾಗಳ ಪಕ್ಷ: ತೇಜಸ್ವಿ ಯಾದವ್ಬಿಜೆಪಿ ಗೂಂಡಾಗಳ ಪಕ್ಷ: ತೇಜಸ್ವಿ ಯಾದವ್

'ಬಕ್ರೀದ್ ನಿಮಿತ್ತ ನಾನು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಲು ಮಹುನಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದು ನನ್ನ ಕೈಹಿಡಿದಿದ್ದ. ಆತನ ಬಳಿ ಶಸ್ತ್ರಾಸ್ತ್ರಗಳಿದ್ದವು. ಇದು ಬಿಜೆಪಿ ಮತ್ತು ಆರೆಸ್ಸೆಸ್ ನದೇ ಕುತಂತ್ರ ಎಂದು ತೇಜ್ ಪ್ರತಾಪ್ ದೂರಿದ್ದಾರೆ.

BJP, RSS trying to kill me: RJD leader Tej Pratap

"ಒಂದು ರಾಜ್ಯದಲ್ಲಿ ಶಾಸಕರು, ಸಚಿವರೇ ಸುರಕ್ಷಿತವಾಗಿಲ್ಲ ಎಂದರೆ ಜನಸಾಮಾನ್ಯರು ಹೇಗೆ ಸುರಕ್ಷಿತರಾಗಿರಲು ಸಾಧ್ಯ?" ಎಂದು ಬಿಹಾರ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡರು.

English summary
An armed individual clutched Rashtriya Janata Dal(RJD) leader Tej Pratap Yadav's hand in Mahua on Wednesday. Later he alleged that the incident was a conspiracy hatched by the Bharatiya Janata Party (BJP) and Rashtriya Swayamsevak Sangh (RSS) to kill him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X