ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲ: ಬಿಜೆಪಿ 3 ರಾಜ್ಯಗಳ ಚುನಾವಣೆಗೆ ರೆಡಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 5: ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ನಾಯಕತ್ವದ ಗೊಂದಲವಿದ್ದರೆ, ಬಿಜೆಪಿಯು ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗೆ ತಯಾರಿಯನ್ನು ಜೋರಾಗಿ ನಡೆಸಿದೆ.

ಲೋಕಸಭಾ ಚುನಾವಣೆ ಯಶಸ್ವಿಯಾಗಿ ಮುಗಿಸಿ ಇದೀಗ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಬಿಜೆಪಿ ತಯಾರಿ ಆರಂಭಿಸಿದೆ.

ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್‌ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಮೆರವಣಿಗೆ, ಸಭೆಯಗಳನ್ನು ಹಮ್ಮಿಕೊಳ್ಳುವ ಮೂಲಕ ತಯಾರಿ ಆರಂಭಿಸಿದೆ.

ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೊದಲ ಚುನಾವಣೆ ಇದಾಗಲಿದೆ.ಬಿಜೆಪಿಗಂತೂ ಎಲ್ಲಾ ರಾಜ್ಯಗಳಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಅದಕ್ಕೆ ಕಾರಣವೂ ಇದೆ. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಗಳನ್ನೊಳಗೊಂಡು ಜಾಥಾವನ್ನು ಹಮ್ಮಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತೆಗೆದುಕೊಂಡ ಮಹಾ ಜನದೇಶ ಯಾತ್ರೆ ಬಿಜೆಪಿಗೆ ಸಹಾಯ ಮಾಡಿದೆ, ಆದರೆ ಪ್ರವಾಹದಿಂದಾಗಿ ಎರಡು ಹಂತಗಳಲ್ಲಿ ಇದನ್ನು ಮಾಡಬೇಕಾಗಿತ್ತು.

70 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ: ಜನ್ಮದಿನದಂದು ಕೇಜ್ರಿವಾಲ್ ಸಂಕಲ್ಪ70 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ: ಜನ್ಮದಿನದಂದು ಕೇಜ್ರಿವಾಲ್ ಸಂಕಲ್ಪ

ಬಿಜೆಪಿಯ ಮುಖ್ಯ ಎದುರಾಳಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಒಳನೋಟಕ್ಕೆ ತುತ್ತಾಗಿವೆ ಮತ್ತು ಇದು ಅವರ ಶಕ್ತಿಯನ್ನು ಕಳೆದುಕೊಂಡಿದೆ.

ಪಕ್ಷವು ಏಕ ಶಕ್ತಿಯಾಗಿ ನಿಲ್ಲಬಲ್ಲದು ಎಂಬುದರ ಬಗ್ಗೆ ಮಹಾರಾಷ್ಟ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಇಲ್ಲ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಮ್ಮ ನಾಯಕರನ್ನು ಒಟ್ಟಿಗೆ ಇಟ್ಟುಕೊಳ್ಳಲು ತಮ್ಮ ಹೆಚ್ಚಿನ ಶಕ್ತಿಯನ್ನು ವ್ಯಯಿಸುತ್ತಿದ್ದಾರೆ.

 ಪರಿಚ್ಛೇದ 370 ರದ್ದತಿ ಚುನಾವಣೆಗೆ ಸಹಕಾರಿಯಾಗಬಲ್ಲದೇ?

ಪರಿಚ್ಛೇದ 370 ರದ್ದತಿ ಚುನಾವಣೆಗೆ ಸಹಕಾರಿಯಾಗಬಲ್ಲದೇ?

ನರೇಂದ್ರ ಮೋದಿಯವರು ಎರಡನೇ ಬಾರಿ ದೇಶದ ಪ್ರಧಾನಿಯಾಗಿ ನೇಮಕಗೊಂಡ ಬಳಿಕ ಮೊದಲು ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿ ದೇಶಕ್ಕೊಂದೇ ಕಾನೂನು, ದೇಶಕ್ಕೊಂದೇ ಧ್ವಜ ಎಂದರು. ಅವರ ಈ ನಿರ್ಧಾರದಿಂದ ಬಿಜೆಪಿ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿದಂತಿದೆ ಎನ್ನುವುದು ಕೆಲವರ ಅಭಿಪ್ರಾಯ.

 ಯಾವ್ಯಾವ ರಾಜ್ಯಗಳಲ್ಲಿ ಚುನಾವಣೆ

ಯಾವ್ಯಾವ ರಾಜ್ಯಗಳಲ್ಲಿ ಚುನಾವಣೆ

ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ ಈ ಮೂರು ರಾಜ್ಯಗಳಲ್ಲಿ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹಲವು ಕಡೆಗಳಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ. ಸಭೆಗಳೂ ಕೂಡ ನಡೆಯಲಿದೆ. ಹರಿಯಾಣಾದಲ್ಲಿ ಸೆಲ್ಜಾ ಅವರನ್ನು ರಾಜ್ಯ ಘಟಕದ ಮುಖ್ಯಸ್ಥರಾಗಿ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಅವರನ್ನು ಚುನಾವಣಾ ಸಮಿತಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ಬಿಜೆಪಿ ಮುಖಂಡ ಮತ್ತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಆಗಸ್ಟ್ 18 ರಿಂದ ತಮ್ಮ ಜನ ಆಶೀರ್ವಾದ ಯಾತ್ರೆ ನಡೆಸುತ್ತಿದ್ದಾರೆ ಮತ್ತು ಜನರ ಪ್ರತಿಕ್ರಿಯೆಯಿಂದ ಪಕ್ಷವು ಸಂತೋಷವಾಗಿದೆ.

 ಸೆಪ್ಟೆಂಬರ್ 8ರಂದು ರೋಟಕ್‌ನ ಮೆರವಣಿಗೆಯಲ್ಲಿ ಮೋದಿ ಭಾಗಿ

ಸೆಪ್ಟೆಂಬರ್ 8ರಂದು ರೋಟಕ್‌ನ ಮೆರವಣಿಗೆಯಲ್ಲಿ ಮೋದಿ ಭಾಗಿ

ಸೆಪ್ಟೆಂಬರ್ 8ರಂದು ಭೂಪೀಂದರ್ ಹೂಡಾ ಅವರ ತವರು ಕ್ಷೇತ್ರ ರೋಟಕ್‌ನಲ್ಲಿ ನಡೆಯಲಿರುವ ಬಿಜೆಪಿ ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.

 ಲೋಕಸಭಾ ಚುನಾವಣೆಯಲ್ಲಿ ರೋಟಕ್‌ನಲ್ಲಿ ಬಿಜೆಪಿ ಎಲ್ಲಾ 10 ಸೀಟು ಗೆದ್ದಿತ್ತು

ಲೋಕಸಭಾ ಚುನಾವಣೆಯಲ್ಲಿ ರೋಟಕ್‌ನಲ್ಲಿ ಬಿಜೆಪಿ ಎಲ್ಲಾ 10 ಸೀಟು ಗೆದ್ದಿತ್ತು

ಕಳೆದ ಲೋಕಸಭಾ ಚುನಾವಣೆಯಲ್ಲಿ ರೋಟಕ್‌ನಲ್ಲಿ ಬಿಜೆಪಿ ಎಲ್ಲಾ 10 ಸೀಟುಗಳನ್ನು ಗೆದ್ದು ಭೂಪಿಂದರ್ ಹುಡಾ ಹಾಗೂ ಅವರ ಪುತ್ರ ದೀಪೇಂದ್ರ ಅವರನ್ನು ಮಣಿಸಿದ್ದರು.

 ಬಿಜೆಪಿಗೆ ಶಿವಸೇನೆ ದೊಡ್ಡ ಸವಾಲು

ಬಿಜೆಪಿಗೆ ಶಿವಸೇನೆ ದೊಡ್ಡ ಸವಾಲು

ಶಿವಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸುತ್ತಿರುವುದರಿಂದ ಬಿಜೆಪಿಗೆ ದೊಡ್ಡ ಸವಾಲು ಇದೆ.

English summary
If there is still confusion in the leadership of the Congress party, the BJP has loudly prepared for the three-state assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X