ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಬೆಂಬಲಿಗರನ್ನು ಬಂಧಿಸಿದ ಕಾಂಗ್ರೆಸ್‌ ವಿರುದ್ಧ ಅಮಿತ್ ಶಾ ವಾಗ್ದಾಳಿ

|
Google Oneindia Kannada News

ನವದೆಹಲಿ, ಮಾರ್ಚ್ 19: ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದ ವೇಳೆ ಮೋದಿ ಪರ ಘೋಷಣೆ ಕೂಗಿದ ಟೆಕಿಗಳನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಸಂವಾದ ಕಾರ್ಯಕ್ರಮದ ಹೊರಗೆ ಕೈ-ಬಿಜೆಪಿ ಕಾರ್ಯಕರ್ತರ ಗಲಾಟೆ ರಾಹುಲ್ ಸಂವಾದ ಕಾರ್ಯಕ್ರಮದ ಹೊರಗೆ ಕೈ-ಬಿಜೆಪಿ ಕಾರ್ಯಕರ್ತರ ಗಲಾಟೆ

'ಯುವಜನರು ಭವಿಷ್ಯಕ್ಕೆ ದಿಕ್ಕು ನೀಡುವವರು. ದೇಶದ ಯುವಜನತೆಯನ್ನು ಬೆದರಿಸುವುದನ್ನು ನಿಲ್ಲಿಸಿ. ಅದು ನಿಮ್ಮ ಬ್ರ್ಯಾಂಡ್ ರಾಜಕೀಯವನ್ನು ತಿರಸ್ಕರಿಸಿದೆ' ಎಂದು ಶಾ ಹೇಳಿದ್ದಾರೆ.

ಬೆಂಗಳೂರು ಟೆಕಿಗಳ ಜೊತೆ ರಾಹುಲ್ ಗಾಂಧಿ ದೇಶದ ಮಾತು ಬೆಂಗಳೂರು ಟೆಕಿಗಳ ಜೊತೆ ರಾಹುಲ್ ಗಾಂಧಿ ದೇಶದ ಮಾತು

'ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಅಪ್ಪುಗೆ ಮತ್ತು ಶಾಂತಿಯುತವಾಗಿ ಮೋದಿ ಪರ ಘೋಷಣೆ ಕೂಗಿದ ಯುವಜನರ ಬಂಧನ? ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಮಹಾನುಭಾವರೆಲ್ಲಿ? ಯುವಜನರು ಆಯ್ದುಕೊಂಡ ದಾರಿಯನ್ನು ಸಮಯ ಹಿಂಬಾಲಿಸುತ್ತದೆ ಎಂಬುದನ್ನು ಕಾಂಗ್ರೆಸ್ ಯುವರಾಜ ತಿಳಿದುಕೊಳ್ಳಬೇಕು' ಎಂದು ಕೆಣಕಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಮೋದಿ ಪರ ಘೋಷಣೆ ಕೂಗಿದ್ದಕ್ಕೆ ರಾಜ್ಯ ಪೊಲೀಸರು ಕೆಲವು ಟೆಕಿಗಳನ್ನು ಬಂಧಿಸಿದ್ದಾರೆ ಎಂದು ಕರ್ನಾಟಕದ ಬಿಜೆಪಿ ಟ್ವಿಟ್ಟರ್ ಖಾತೆ ಮಾಡಿರುವ ಟ್ವೀಟ್ ಅನ್ನು ಬಳಸಿಕೊಂಡು ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

BJP president Amit Shah slams congress for arrest techies in bengaluru

ಪ್ರಜಾಪ್ರಭುತ್ವ ಅಪಾಯದಲ್ಲಿದೆ. ರಾಜ್ಯದ ಕಾಂಗ್ರೆಸ್ ಜೆಡಿಎಸ್ ಆಡಳಿತದಲ್ಲಿನ ಪ್ರಜಾಪ್ರಭುತ್ವದ ನೈಜ ಮುಖವಿದು. ಪ್ರಜೆಗಳ ಆಯ್ಕೆಯ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆಯ ಘಟನೆಯಿದು ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ.

English summary
BJP president Amit Shah slams Congress, Hugs for ‘Tukde Tukde’ gang and arrest of peaceful youth raising pro-Modi slogans? Where are the champions of ‘Free Speech’? he asked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X