• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಮದುವೆಯ ಬಗ್ಗೆ ಈಗ ಭಾವಮೈದುನ ವಿವರಣೆ

By Srinath
|

ವಡೋದರಾ, ಏ.11: ಸೋ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿಚಾರ ಈ ಹಿಂದಿಗಿಂತಲೂ ಈಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ನರೇಂದ್ರ ಮೋದಿ ಅವರ ಅಣ್ಣ ಸೋಮಭಾಯ್ ದಾಮೋದರದಾಸ್ ಮೋದಿ ಅವರು ಜಶೋದಾಬೆನ್ ಜತೆಗಿನ ಮೋದಿ ಮದುವೆ ಬಗ್ಗೆ ಸ್ಪಷ್ಟನೆ ನೀಡಿರುವುದರ ಬೆನ್ನಿಗೆ ಖುದ್ದು ಜಶೋದಾಬೆನ್ ಅವರ ಸೋದರ ಮಾತನಾಡಿದ್ದಾರೆ.

1968ರಲ್ಲಿ ನರೇಂದ್ರ ಮೋದಿ ಮತ್ತು ನನ್ನ ಸೋದರಿಯ ನಡುವೆ ಔಪಚಾರಿಕ ವಿವಾಹ ನಡೆದಿತ್ತು. ಆದರೆ ಜಶೋದಾ ಮತ್ತು ನರೇಂದ್ರ ಒಂದು ದಿನವೂ ಜತೆಯಾಗಿರಲಿಲ್ಲ. ಆಕೆಯೀಗ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿದ್ದಾರೆ' ಎಂದು ಜಶೋದಾಬೆನ್ ಅವರ ಸಹೋದರ ಕಮಲೇಶ್ ಮೋದಿ ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರ ವಿರುದ್ಧ ನಮ್ಮ ಕುಟುಂಬಕ್ಕಾಗಲಿ, ಸೋದರಿ ಜಶೋದಾಗಾಗಲಿ ಯಾವುದೇ ದ್ವೇಷ, ಅಸಮಾಧಾನ, ಹಗೆತನ ಇಲ್ಲ. ವಾಸ್ತವವಾಗಿ ಮೋದಿ ಒಳಿತಿಗಾಗಿ ಜಶೋದಾ ದಿನವೂ ದೇವರ ಪೂಜೆ ಮಾಡುತ್ತಾರೆ. ಮತ್ತು ಆತ ಪ್ರಧಾನಿಯಾಗಲಿ ಎಂದು ದೇವರ ಪ್ರಾರ್ಥನೆ ಸಹ ಮಾಡುತ್ತಾರೆ ಎಂದು ಕಮಲೇಶ್ ಮೋದಿ ಹೇಳುತ್ತಾರೆ. ಅಂದಹಾಗೆ ಜಶೋದಾಬೆನ್ ಅವರು ಪ್ರಸ್ತುತ ಬ್ರಹ್ಮನವಾಡಾ ಗ್ರಾಮದಿಂದ 5 ಕಿಮೀ ದೂರದಲ್ಲಿರುವ ಉಂಝಾ ಗ್ರಾಮದಲ್ಲಿ ಇಬ್ಬರು ಸೋದರರ ಜತೆ ವಾಸವಾಗಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ 'ಮೋದಿ ಪ್ರಧಾನಿಯಾಗುವ ನಿಟ್ಟಿನಲ್ಲಿ ಜಶೋದಾ ವ್ರತ ಕೈಗೊಂಡಿದ್ದಾರೆ. ಮೋದಿ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತಿದ್ದು, ಸದ್ಯ ತೀರ್ಥ ಕ್ಷೇತ್ರಗಳ ಯಾತ್ರೆ ಕೈಗೊಂಡಿದ್ದಾರೆ. ಅವರು ಅನ್ನ ಸೇವಿಸುವುದನ್ನು ತ್ಯಜಿಸಿದ್ದಾರೆ. ಚಪ್ಪಲಿ ಹಾಕಿಕೊಳ್ಳದೆ ಬರಿಗಾಲಲ್ಲಿ ಸಂಚರಿಸುತ್ತಿದ್ದಾರೆ' ಎಂದೂ ಜಶೋದಾಬೆನ್ ಅವರ ಸಹೋದರ ಕಮಲೇಶ್ ಮೋದಿ ಹೇಳಿದ್ದಾರೆ.

ಈ ಮಧ್ಯೆ, ಮೋದಿ ತಮ್ಮ ವೈವಾಹಿಕ ಜೀವನವನ್ನು ಒಪ್ಪಿಕೊಂಡಿದ್ದಾರೆ. ಆದರೆ ಬೇರೊಬ್ಬ ಮಹಿಳೆಯನ್ನು ಕದ್ದುಮುಚ್ಚಿ ಹಿಂಬಾಲಿಸುವ, ಮತ್ತೊಂದೆಡೆ ಪತ್ನಿಗೆ ಆಕೆಯ ಹಕ್ಕನ್ನು ನಿರಾಕರಿಸುವ ವ್ಯಕ್ತಿಯನ್ನು ಈ ದೇಶದ ಮಹಿಳೆಯರು ನಂಬಬಹುದೇ? ಹಾಗಾಗಿ ಮೋದಿ ವಿರುದ್ಧ ಮತ ಹಾಕಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಮೋದಿ ವಿರುದ್ಧ ಎಂದಿನಂತೆ ಕಟಕಿಯಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha polls 2014 - BJP Prime Minister candidate Narendra Modi declared he is married to Jashodaben. In an affidavit submitted along with his nomination papers filed Wednesday for Vadodara Lok Sabha seat, Bharatiya Janata Party's prime ministerial nominee Narendra Modi declared himself as a married man and revealed that his wife's name is Jashodaben. In the meanwhile Kamleshbhai has issued a clarification on her sister's marriage saying she prays for Modi every day and wants to see him become the prime minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more