ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಬಿಜೆಪಿಗೆ ಮನಸ್ಸಿಲ್ಲ: ಓವೈಸಿ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 18: ಭಾರತೀಯ ಜನತಾ ಪಕ್ಷಕ್ಕೆ ನಿಜವಾದ ರಾಜಕೀಯ ಸುಧಾರಣೆಯಲ್ಲಿ ಮತ್ತು ಮುಸ್ಲಿಂ ಸಮುದಾಯದ ಅಭಿವೃದ್ಧಿ ಬಗ್ಗೆ ಆಸಕ್ತಿಯಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ದೂರಿದ್ದಾರೆ.

"ವಾಸ್ತವ ಅಂಶ ಏನು ಎಂದರೆ ಕರ್ನಾಟಕದಲ್ಲಿ ಬಿಜೆಪಿ ಒಬ್ಬರೇ ಒಬ್ಬರು ಮುಸ್ಲಿಮರಿಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ. ಬಿಜೆಪಿಯಿಂದ ಲೋಕಸಭೆಯಲ್ಲೂ ಯಾವುದೇ ಸಂಸದರಿಲ್ಲ. ಬಿಜೆಪಿಗೆ ನಿಜವಾದ ರಾಜಕೀಯ ಸುಧಾರಣೆಯ ಬಗ್ಗೆ ಮತ್ತು ಮುಸ್ಲಿಂ ಸಮುದಾಯದ ಅಭಿವೃದ್ಧಿ ಬಗ್ಗೆ ಆಸಕ್ತಿಯಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ," ಎಂದು ಓವೈಸಿ ಕಿಡಿಕಾರಿದ್ದಾರೆ.

BJP not interested in development of Muslim community: Owaisi

"ಕಾಂಗ್ರೆಸ್ ಪಕ್ಷವೂ ಇದೇ ರೀತಿಯಾಗಿದೆ. ಎರಡೂ ಪಕ್ಷಗಳು (ಬಿಜೆಪಿ ಮತ್ತು ಕಾಂಗ್ರೆಸ್) ಈಗ ಹಿಂದೂ ಮತ ಬ್ಯಾಂಕ್ ಗಾಗಿ ಬಡಿದಾಡುತ್ತಿವೆ. ಯಾವತ್ತೂ ಈ ದೇಶದಲ್ಲಿ ಮುಸ್ಲಿಂ ಮತ ಬ್ಯಾಂಕ್ ಎಂಬುದು ಇರಲಿಲ್ಲ ಎನ್ನುವುದು ಸತ್ಯ. ನಿಮಗೆ ವೋಟ್ ಬ್ಯಾಂಕ್ ಇದೆ ಎಂದು ಹೇಳಿ ಮುಸ್ಲಿಮರನ್ನು ಯಾವತ್ತೂ ವಂಚಿಸಲಾಗಿದೆ," ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

English summary
The reality is that in last Karnataka polls BJP did not give single Muslim ticket to contest for assembly elections. There's no Muslim MP in Lok Sabha from BJP. This clearly shows that BJP is not interested in real political empowerment and development of Muslim community," said MP Asaduddin Owaisi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X