ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸೋಲಿನ ಬೆನ್ನಲ್ಲೇ ಮೋದಿ ಬಗ್ಗೆ ಉಮಾ ಭಾರತಿ ಮಾಡಿದ ವಿಚಿತ್ರ ಟ್ವೀಟ್: ನಂತರ ಸ್ಪಷ್ಟನೆ

|
Google Oneindia Kannada News

ದೆಹಲಿ ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ.

ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಉಮಾ ಭಾರತಿ ಮಾಡಿರುವ ಟ್ವೀಟ್ ಮತ್ತು ಪ್ರಧಾನಿ ಮೋದಿಯವರನ್ನು ಅವರು ಸಂಭೋದಿಸಿದ ರೀತಿ, ಪಕ್ಷದೊಳಗೆ ಹೊಸ ಚರ್ಚೆಗೆ ಕಾರಣವಾಗಿದೆ.

ಹೀನಾಯ ಸೋಲಿನ ಮುನ್ಸೂಚನೆಯಿಂದಲೇ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಅಮಿತ್ ಶಾ?ಹೀನಾಯ ಸೋಲಿನ ಮುನ್ಸೂಚನೆಯಿಂದಲೇ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಅಮಿತ್ ಶಾ?

ತಾನು ಮಾಡಿರುವ ಟ್ವೀಟ್ ಪ್ರಧಾನಿಯನ್ನು ಅಣಕಿಸುವಂತೆ ಇರುವುದನ್ನು ಅರಿತ, ಉಮಾ ಭಾರತಿ, ಅದಕ್ಕೆ ಸ್ಪಷ್ಟನೆಯನ್ನು ಇನ್ನೊಂದು ಟ್ವೀಟ್ ಮೂಲಕ ನೀಡಿದ್ದಾರೆ.

ದೆಹಲಿ ಚುನಾವಣೆ: ಭಾರೀ ಅಂತರದಿಂದ ಗೆದ್ದ 7 ಅಭ್ಯರ್ಥಿಗಳು ಇವರೇದೆಹಲಿ ಚುನಾವಣೆ: ಭಾರೀ ಅಂತರದಿಂದ ಗೆದ್ದ 7 ಅಭ್ಯರ್ಥಿಗಳು ಇವರೇ

ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶ, "ಮೋದಿ ಒಬ್ಬರು ಅಸಾಧಾರಣ ನಾಯಕ ಎನ್ನುವುದು ಸಾಬೀತಾಗಿದೆ, ಛತ್ರಪತಿ ಮೋದಿ ಜಿಂದಾಬಾದ್" ಎಂದು ಉಮಾ ಭಾರತಿ ಟ್ವೀಟ್ ಮಾಡಿದ್ದರು. ಆದರೆ, ಇತ್ತೀಚಿನ ಎಲ್ಲಾ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿತ್ತು. ಉಮಾ ಭಾರತಿ ಹಿಂದಿಯಲ್ಲಿ ಮಾಡಿದ್ದ ಟ್ವೀಟ್ ಹೀಗಿತ್ತು:

ದೆಹಲಿ ವಿಧಾನಸಭಾ ಚುನಾವಣೆಯ ಸಂದೇಶ

ದೆಹಲಿ ವಿಧಾನಸಭಾ ಚುನಾವಣೆಯ ಸಂದೇಶ

"ದೆಹಲಿ ವಿಧಾನಸಭಾ ಚುನಾವಣೆಯ ಸಂದೇಶ. ಕಳೆದ ಒಂದೂವರೆ ವರ್ಷಗಳಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆ, ಇದಾದ ನಂತರದ ಲೋಕಸಭಾ ಚುನಾವಣೆ, ಪಾರ್ಲಿಮೆಂಟ್ ಚುನಾವಣೆಯ ನಂತರ ಮತ್ತೆ ಕೆಲವು ರಾಜ್ಯಗಳಲ್ಲಿನ ಚುನಾವಣೆಯ ಫಲಿತಾಂಶದಿಂದ ಒಂದಂತೂ ಸ್ಪಷ್ಟ. ಬಿಜೆಪಿ ಮತ್ತು ಭಾರತದಲ್ಲಿ ಮೋದಿಗೆ ಸರಿಸಾಟಿಯಾಗುವವರು ಯಾರೂ ಇಲ್ಲ" - ಉಮಾ ಭಾರತಿ ಟ್ವೀಟ್.

ಮೋದಿಜಿ ದೇಶಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ

ಮೋದಿಜಿ ದೇಶಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ

"ಇಡೀ ದೇಶ ಮೋದಿಜಿಗೆ ಮತ್ತು ಮೋದಿಜಿ ದೇಶಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಛತ್ರಪತಿ ಮೋದಿ ಜಿಂದಾಬಾದ್" ಇದು ಉಮಾಭಾರತಿ ಮಾಡಿದ್ದ ಟ್ವೀಟ್. ಇತ್ತೀಚೆಗೆ, ಅಂದರೆ ಕಳೆದೆರಡು ವರ್ಷಗಳಲ್ಲಿ ನಡೆದ ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಇನ್ನು, ದೆಹಲಿಯಲ್ಲೂ ಕಮಲ ಅರಳಲಿಲ್ಲ. ಹಾಗಾಗಿ, ಉಮಾ ಭಾರತಿ ಟ್ವೀಟ್ ವಿಢಂಬನೆ ರೀತಿಯಲ್ಲಿತ್ತು.

ಉಮಾ ಭಾರತಿ ಟ್ವೀಟ್ ಮೂಲಕ ಸ್ಪಷ್ಟನೆ

ಉಮಾ ಭಾರತಿ ಟ್ವೀಟ್ ಮೂಲಕ ಸ್ಪಷ್ಟನೆ

ತಮ್ಮ ಟ್ವೀಟ್ ಬೇರೆ ಸಂದೇಶ ರವಾನಿಸುತ್ತಿದೆ ಎನ್ನುವುದನ್ನು ಅರಿತ ಉಮಾ ಭಾರತಿ ಇದಕ್ಕೆ ಟ್ವೀಟ್ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ. "ನಿನ್ನೆ ದೆಹಲಿ ಚುನಾವಣೆಯ ಬಗ್ಗೆ ಮಾಡಿರುವ ಟ್ವೀಟ್ ಬಗ್ಗೆ ದೇಶದ ಪ್ರತಿಷ್ಠಿತ ಪತ್ರಿಕೆಯೊಂದು ನಾನು ಮೋದಿಜಿಯ ಬಗ್ಗೆ ವ್ಯಂಗ್ಯವಾಡಿದ್ದೇನೆ ಎಂದು ಬರೆದಿದೆ. ವರದಿ ಪ್ರಕಟ ಮಾಡುವ ಮೊದಲು, ನನ್ನ ಟ್ವೀಟ್ ಅನ್ನು ಆ ಪತ್ರಿಕೆಯವರು ಓದಲಿಲ್ಲವೇನೋ" - ಉಮಾ ಭಾರತಿ ಸ್ಪಷ್ಟನೆ.

ದೇಶದಲ್ಲಿ ಮೋದಿಗೆ ಸರಿಸಾಟಿಯಾಗುವ ಇನ್ನೊಬ್ಬ ನಾಯಕರಿಲ್ಲ

ದೇಶದಲ್ಲಿ ಮೋದಿಗೆ ಸರಿಸಾಟಿಯಾಗುವ ಇನ್ನೊಬ್ಬ ನಾಯಕರಿಲ್ಲ

"2014ರಿಂದ ಇದುವರೆಗೆ ಒಂದಂತೂ ಸ್ಪಷ್ಟ. ಇಡೀ ದೇಶದಲ್ಲಿ ಮೋದಿಗೆ ಸರಿಸಾಟಿಯಾಗುವ ಇನ್ನೊಬ್ಬ ನಾಯಕರಿಲ್ಲ. ಹೀಗಾಗಿಯೇ, ಕೆಲವು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ನಾವು ಸೋತರೂ, ಲೋಕಸಭಾ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ದೇಶದಲ್ಲಿ ಮೋದಿ ಅಲೆಯಿದೆ ಎನ್ನುವುದು ಸಾಬೀತಾಗಿದೆ. ಇದು ಇನ್ನೂ ಹತ್ತಿಪ್ಪತ್ತು ವರ್ಷ ಹೀಗೇ ಸಾಗಲಿದೆ" ಎಂದು ಉಮಾ ಭಾರತಿ ಸ್ಪಷ್ಟನೆಯನ್ನು ನೀಡಿದ್ದಾರೆ.

English summary
BJP National Vice President Uma Bharti Unusual Tweet On PM Modi After Delhi Assembly Election Defeat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X