ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ ಕಲಾಪಕ್ಕೆ ಚಕ್ಕರ್: ಬಿಜೆಪಿ ಸಂಸದರಿಗೆ ಪ್ರಧಾನಿ ಖಡಕ್ ಎಚ್ಚರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 07: ಸಂಸತ್ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ನಿರಂತರವಾಗಿ ಗೈರು ಹಾಜರಾಗುತ್ತಿದ್ದ ಭಾರತೀಯ ಜನತಾ ಪಕ್ಷದ ಸಂಸದರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. "ನಿಮ್ಮನ್ನು ನೀವು ಬದಲಿಸಿಕೊಳ್ಳಿರಿ, ಇಲ್ಲದಿದ್ದರೆ ಅಲ್ಲಿಯೇ ಬದಲಾವಣೆಗಳನ್ನು ತರಲಾಗುವುದು," ಎಂದು ಎಚ್ಚರಿಸಿದ್ದಾರೆ.

ಮಂಗಳವಾರ ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ತಮ್ಮ ಪಕ್ಷದ ಸಂಸದರು ಮತ್ತು ಮಂತ್ರಿಗಳಿಗೆ ಶಿಸ್ತು, ಸಮಯಪ್ರಜ್ಞೆ ಮತ್ತು ಸರದಿಯಲ್ಲಿ ಮಾತನಾಡಬೇಡಿ ಎಂದು ಸಲಹೆ ನೀಡಿದ ಪ್ರಧಾನಿ ಮೋದಿ, ಮಕ್ಕಳಂತೆ" ವರ್ತಿಸುವ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.

ಕ್ಷಮೆ ಕೇಳಿದರೆ ಸಂಸದರ ಅಮಾನತು ವಾಪಸ್: ಪ್ರಲ್ಹಾದ್ ಜೋಶಿಕ್ಷಮೆ ಕೇಳಿದರೆ ಸಂಸದರ ಅಮಾನತು ವಾಪಸ್: ಪ್ರಲ್ಹಾದ್ ಜೋಶಿ

"ದಯವಿಟ್ಟು ಸಂಸತ್ ಮತ್ತು ಸಭೆಗಳಿಗೆ ನಿರಂತರವಾಗಿ ಹಾಜರಾಗಬೇಕು. ಸಣ್ಣ ಮಕ್ಕಳ ರೀತಿಯಲ್ಲಿ ಇದರ ಬಗ್ಗೆ ಪದೇ ಪದೆ ನಿಮ್ಮ ಮೇಲೆ ಒತ್ತಡ ಹೇರುವುದಕ್ಕೆ ನನಗೆ ಸರಿ ಎನ್ನಿಸುವುದಿಲ್ಲ. ನಿಮ್ಮನ್ನು ನೀವು ಬದಲಾಯಿಸಿಕೊಳ್ಳದಿದ್ದರೆ ಸೂಕ್ತ ಸಮಯದಲ್ಲಿ ಬದಲಾವಣೆಗಳನ್ನು ತರಲಾಗುತ್ತವೆ,'' ಎಂದು ಹೇಳಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಿರಿಯ ಸಚಿವರು ಹಾಜರಾಗಿದ್ದರು.

BJP MPs Must Change Yourself Or Therell Be Changes, PM Warns

ಸಂಸತ್ ಅಧಿವೇಶನದಲ್ಲಿ ಆಡಳಿತ ಪಕ್ಷಕ್ಕೆ ಹೆಚ್ಚಿದ ಒತ್ತಡ:

ಸಂಸತ್ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಆಡಳತಿ ಪಕ್ಷ ಬಿಜೆಪಿಯು ತೀವ್ರ ವಿರೋಧವನ್ನು ಎದುರಿಸಬೇಕಾಗಿದೆ. ನಾಗಾಲ್ಯಾಂಡ್‌ನ ಸೋಮ್ ಜಿಲ್ಲೆಯಲ್ಲಿ ಶನಿವಾರ ನಡೆದ ಸೇನಾ ಕಾರ್ಯಾಚರಣೆಯಲ್ಲಿ 14 ನಾಗರಿಕರ ಹತ್ಯೆ ಸೇರಿದಂತೆ ಹಲವು ವಿಷಯಗಳನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಿದವು. ಈ ಹಂತದಲ್ಲಿ ಆಡಳಿತ ಪಕ್ಷ ಬಿಜೆಪಿಯು ಮೂಲೆಗುಂಪಾಯಿತು. ಇಂಥ ಬೆಳವಣಿಗೆ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಸದರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ರಾಜ್ಯಸಭೆ 12 ಸಂಸದರ ಅಮಾನತು ಆದೇಶಕ್ಕೆ ವಿರೋಧ:

ಕಳೆದ ಮುಂಗಾರು ಅಧಿವೇಶನದ ಕೊನೆಯ ದಿನ ರಾಜ್ಯಸಭೆ ಕಲಾಪ ಹಾಳು ಮಾಡಿದರು ಎಂಬ ಆರೋಪದ ಹಿನ್ನೆಲೆ 12 ಸಂಸದರನ್ನು ಈ ಬಾರಿ ಚಳಿಗಾಲ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಈ ನಿರ್ಧಾರವು ಪ್ರತಿಪಕ್ಷಗಳನ್ನು ಕೆರಳಿಸಿದ್ದು, ನವೆಂಬರ್ 29ರ ಸಂಸತ್ ಅಧಿವೇಶನ ಆರಂಭದ ಮೊದಲ ದಿನದಿಂದಲೂ ಸಂಸದರ ಅಮಾನತು ವಿರೋಧಿಸಿ ಪ್ರತಿಪಕ್ಷಗಳ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕ್ಷಮಾಪಣೆ ಕೇಳಿದರೆ ಅಮಾನತು ಆದೇಶ ವಾಪಸ್:

"ರಾಜ್ಯಸಭೆಯ 12 ಸಂಸದರನ್ನು ಅಮಾನತುಗೊಳಿಸುವುದಕ್ಕೆ ಈ ಹಿಂದೆ ಒತ್ತಡ ಹೆಚ್ಚಾಗಿದೆ. ಇದರ ಹೊರತಾಗಿಯೂ, ಆ ಸಂಸದರು ತಮ್ಮ ತಪ್ಪನ್ನು ಒಪ್ಪಿಕೊಂಡು ಸದನದಲ್ಲಿ ಕ್ಷಮೆಯಾಚಿಸಿದರೆ ಅಮಾನತು ಆದೇಶವನ್ನು ವಾಪಸ್ ಪಡೆದುಕೊಳ್ಳುವ ಬಗ್ಗೆ ಪರಿಗಣಿಸಲಾಗುವುದು ಎಂದು," ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಆದಾಗ್ಯೂ, ಸಂಸದರು ಹಿಂದೆ ಸರಿಯಲು ನಿರಾಕರಿಸಿದರು. ಇದು "ತಪ್ಪಾಗಿರುವುದು ಅಲ್ಲದೇ ಪ್ರಜಾಪ್ರಭುತ್ವ ವಿರೋಧಿಯಾಗಿದೆ, ಮತ್ತು ಸದನದ ನಿಯಮಗಳು ಮತ್ತು ಪೂರ್ವನಿದರ್ಶನಗಳಿಗೆ ವಿರುದ್ಧವಾಗಿದೆ," ಎಂದು ಕರೆದಿದ್ದಾರೆ. ಈ ಹಿಂದಿನ ಅಧಿವೇಶನದಲ್ಲಿ ಕ್ರಮಗಳಿಗಾಗಿ ಸಂಸದರನ್ನು ಶಿಕ್ಷಿಸಲಾಗುವುದಿಲ್ಲ ಎಂದು ಖಾತ್ರಿಪಡಿಸುವ ನಿಯಮಗಳ ಬಗ್ಗೆ ಸಂಸದರು ಉಲ್ಲೇಖಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ ಪ್ರತಿಪಕ್ಷಗಳ ಪಟ್ಟು:

ವಿವಾದಿತ ಕೃಷಿ ಕಾಯ್ದೆಗಳ ರದ್ಧತಿ ಹೊರತಾಗಿಯೂ ರೈತರು ನಡೆಸುತ್ತಿರುವ ಪ್ರತಿಭಟನೆಯು ಬಹುದೊಡ್ಡ ವಿಷಯವಾಗಿದೆ. ವಿರೋಧ ಪಕ್ಷದ ಸಂಸದರು ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಬಿಗಿ ಪಟ್ಟು ಹಿಡಿದಿದ್ದಾರೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮಂಗಳವಾರದವರೆಗೂ ಕಾಲಾವಕಾಶ ನೀಡಲಾಗಿತ್ತು, ಆದರೆ ಯಾವುದೇ ಪ್ರಸ್ತಾಪವನ್ನು ನೀಡದ ಕಾರಣ ಆಂತರಿಕ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರೈತರು ಹೇಳುತ್ತಿದ್ದಾರೆ.

ಕಳೆದ ನವೆಂಬರ್ 29 ರಿಂದ ಆರಂಭವಾಗಿರುವ ಸಂಸತ್ ಚಳಿಗಾಲ ಅಧಿವೇಶನವು ಡಿಸೆಂಬರ್ 23ರವರೆಗೂ ನಡೆಯಲಿದೆ. ಆದರೆ ಉಭಯ ಸದನಗಳು ಇಲ್ಲಿಯವರೆಗೂ ಚರ್ಚೆಗಳಿಗಿಂತ ಮುಂದೂಡಿಕೆ ಆಗುವಲ್ಲೇ ಹೆಚ್ಚು ಸಮಯ ಕಳೆದಿವೆ ಎಂದು ತಿಳಿದು ಬಂದಿದೆ.

English summary
"BJP MPs Must Change Yourself Or There'll Be Changes," PM Narendra Modi Warns. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X