ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜಸ್ವಿ ಸೂರ್ಯ ಮಾತಿಗೆ ರಾಘವ್ ಚಡ್ಡಾ ಪ್ರತಿಕ್ರಿಯೆ; ವಿಡಿಯೋ ವೈರಲ್

|
Google Oneindia Kannada News

ನವದೆಹಲಿ, ಜೂನ್ 19; "ಸೇನೆಯಲ್ಲಿ ನಾಲ್ಕು ವರ್ಷ ಕೆಲಸ ಮಾಡುವುದು ಜೆಎನ್‌ಯುನಲ್ಲಿ 8 ವರ್ಷ ಕಳೆಯುವುದಕ್ಕಿಂತ ಉತ್ತಮ" ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದು. ತೇಜಸ್ವಿ ಸೂರ್ಯಗೆ ಆಪ್ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ನೀಡಿರುವ ಉತ್ತರ ಈಗ ವೈರಲ್ ಆಗಿದೆ. ಖಾಸಗಿ ವಾಹಿನಿಯೊಂದರಲ್ಲಿ ಅಗ್ನಿಪಥ್ ಯೋಜನೆ ಮತ್ತು ನಿರುದ್ಯೋಗ ಸಮಸ್ಯೆ ಕುರಿತಂತೆ ಚರ್ಚೆ ಏರ್ಪಡಿಸಲಾಗಿತ್ತು.

ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ದಕ್ಷಿಣ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ನೇತೃತ್ವದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷವು ಚರ್ಚೆಯ ತುಣುಕನ್ನು ಹಂಚಿಕೊಂಡಿದೆ.

ಇಡಿ ತನಿಖೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ದೌರ್ಭಾಗ್ಯ: ತೇಜಸ್ವಿ ಸೂರ್ಯಇಡಿ ತನಿಖೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ದೌರ್ಭಾಗ್ಯ: ತೇಜಸ್ವಿ ಸೂರ್ಯ

ಚರ್ಚೆಯಲ್ಲಿ, ಎಎಪಿ ನಾಯಕ ರಾಘವ್ ಚಡ್ಡಾ, "ಬಿಜೆಪಿಯು ಜನರನ್ನು ನಿರುದ್ಯೋಗಿಗಳಾಗಿ ಮಾಡಲು ಮತ್ತು ಅವರನ್ನು ಬಿಜೆಪಿಯ ಸೈನ್ಯಕ್ಕೆ ಸೇರಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಹೇಳಿದರು."

 ದೆಹಲಿ ಸಿಎಂ ಕೇಜ್ರಿವಾಲ್‌ ನಿವಾಸದ ಮೇಲಿನ ದಾಳಿ ಪ್ರಕರಣ, ಸಂಸದ ತೇಜಸ್ವಿ ಸೂರ್ಯಗೆ ನೋಟಿಸ್‌ ದೆಹಲಿ ಸಿಎಂ ಕೇಜ್ರಿವಾಲ್‌ ನಿವಾಸದ ಮೇಲಿನ ದಾಳಿ ಪ್ರಕರಣ, ಸಂಸದ ತೇಜಸ್ವಿ ಸೂರ್ಯಗೆ ನೋಟಿಸ್‌

ಮಾತನಾಡುವ ವೇಳೆ ಕಾರ್ಯಕ್ರಮ ಆಯೋಜಕರು ರಾಘವ್ ಚಡ್ಡಾ ಅವರಿಗೆ ಅಡ್ಡಿಪಡಿಸಿದರು, ಚರ್ಚೆಯ ವಿಷಯ ಅಗ್ನಿಪಥ್ ಆಗಿರುವುದರಿಂದ ನೀವು 'ಬಿಜೆಪಿಯ ಫೌಜ್' ಬಗ್ಗೆ ಮಾತನಾಡುತ್ತಿದ್ದೀರಾ ಎಂದು ಕೇಳಿದರು. ಇದಕ್ಕೆ ಉತ್ತರ ನೀಡಿದ ಚಡ್ಡಾ "ನಾನು ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದೇನೆ" ಎಂದು ಹೇಳಿದರು.

ಬಿಜೆಪಿ ದಾಳಿ ಬಗ್ಗೆ ಮಾತನಾಡಿದ ಚಡ್ಡಾ

ಬಿಜೆಪಿ ದಾಳಿ ಬಗ್ಗೆ ಮಾತನಾಡಿದ ಚಡ್ಡಾ

"ನೀವು ಒಪ್ಪದಿರಬಹುದು ಅಥವಾ ಕೋಪಗೊಳ್ಳಬಹುದು, ತೇಜಸ್ವಿ ಇಲ್ಲಿ ಕುಳಿತಿರುವುದರಿಂದ, ನಾನು ಅದನ್ನು ವಿವರಿಸಲು ಬಯಸುತ್ತೇನೆ. ತೇಜಸ್ವಿ ಮತ್ತು ಬಿಜೆಪಿ ಬೆಂಬಲಿಗರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಮಾಡಲು ಗುಂಪಿನ ನಾಯಕತ್ವ ವಹಿಸಿದ್ದರು, ಆದರೆ ಪೊಲೀಸರು ಎಫ್‌ಐಆರ್ ದಾಖಲಿಸಲಿಲ್ಲ, ಬದಲಾಗಿ ತೇಜಸ್ವಿ ಸೂರ್ಯ ಯಾರೆಂದು ಗೊತ್ತಿಲ್ಲ ಎಂದು ಹೇಳಿದರು. ದಾಳಿ ಘಟನೆಯಲ್ಲಿ ಬಂಧಿಸಲ್ಪಟ್ಟವರು ಜೈಲಿನಿಂದ ಹೊರಬಂದ ನಂತರ ಮೊದಲು ದೆಹಲಿ ಬಿಜೆಪಿ ಕಚೇರಿಗೆ ತೆರಳಿದರು. ಇದು ಇಂದಿನ ಬಿಜೆಪಿ ಪರಿಸ್ಥಿತಿಯಾಗಿದೆ, ಜನರು ನಿರುದ್ಯೋಗಿಗಳಾಗಿ ಉಳಿಯಬೇಕೆಂದು ಬಿಜೆಪಿ ಬಯಸುತ್ತಿದೆ" ಎಂದು ಹೇಳಿದರು.

ಪ್ರಶ್ನೆ ಕೇಳಲು ನೀವ್ಯಾರು ಎಂದ ತೇಜಸ್ವಿ ಸೂರ್ಯ

ಪ್ರಶ್ನೆ ಕೇಳಲು ನೀವ್ಯಾರು ಎಂದ ತೇಜಸ್ವಿ ಸೂರ್ಯ

"ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ನಡೆಸಿದ ಜನಸಮೂಹವನ್ನು ತಾವೇ ಮುನ್ನಡೆಸುತ್ತಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗೆ ತೇಜಸ್ವಿ ಸೂರ್ಯ ಉತ್ತರ ನೀಡಬಹುದೇ?" ರಾಘವ್ ಚಡ್ಡಾ ಕೇಳಿದರು.

ರಾಘವ್ ಚಡ್ಡಾಗೆ ಉತ್ತರಿಸಿದ ತೇಜಸ್ವಿ ಸೂರ್ಯ, ನಾನು ಅವರಿಗೆ ಉತ್ತರಿಸುವುದಿಲ್ಲ ಎಂದು ಹೇಳಿದರು. "ಸಾಂವಿಧಾನಿಕವಾಗಿ ಕಡ್ಡಾಯವಾಗಿರುವ ಅಧಿಕಾರಿಗಳಿಗೆ ನಾನು ಉತ್ತರಿಸುತ್ತೇನೆ. ನಾನು ನಿಮಗೆ ಏಕೆ ಉತ್ತರವನ್ನು ನೀಡಬೇಕು? ನೀವು ಯಾರು? ಈ ಪ್ರಶ್ನೆಯನ್ನು ನನ್ನಲ್ಲಿ ಕೇಳುವ ಅಧಿಕಾರ ನಿಮಗಿದೆಯೇ?" ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದರು.

ಜೆಎನ್‌ಯು ವಿಷಯ ಪ್ರಸ್ತಾಪಿಸಿದ ತೇಜಸ್ವಿ ಸೂರ್ಯ

ಜೆಎನ್‌ಯು ವಿಷಯ ಪ್ರಸ್ತಾಪಿಸಿದ ತೇಜಸ್ವಿ ಸೂರ್ಯ

ಅಗ್ನಿಪಥ್ ಯೋಜನೆ ಬಗ್ಗೆ ಚರ್ಚೆ ವೇಳೆ ಸಂಸದ ತೇಜಸ್ವಿ ಸೂರ್ಯ "ಜೆಎನ್‌ಯುನಲ್ಲಿ 8 ವರ್ಷಗಳನ್ನು ಕಳೆಯುವುದಕ್ಕಿಂತ 4 ವರ್ಷಗಳನ್ನು ಸೇನೆಯಲ್ಲಿ ಕಳೆಯುವುದು ಉತ್ತಮ" ಎಂದು ಹೇಳಿದರು.

ರಕ್ಷಣಾ ಬಜೆಟ್‌ನ ಅತ್ಯಧಿಕ ಪಾಲು ಸೈನಿಕರ ಪಿಂಚಣಿಗಾಗಿ ಖರ್ಚಾಗುತ್ತಿದೆ. ಜನಪ್ರಿಯ ಯೋಜನೆಗಳಿಂದ ನಾವು ದೇಶವನ್ನು ಮುನ್ನಡೆಸಲು ಸಾಧ್ಯವಾಗುವುದಿಲ್ಲ. ನಾಲ್ಕು ವರ್ಷ ಸೇನೆಯಲ್ಲಿ ಕೆಲಸ ಮಾಡಿ ಬಂದವರಿಗೆ ಸಶಸ್ತ್ರ ಮೀಸಲು ಪಡೆ, ಪೊಲೀಸ್ ಇಲಾಖೆಯಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಸಮರ್ಥನೆ ಮಾಡಿಕೊಂಡರು.

ತೇಜಸ್ವಿ ಮಾತಿಗೆ ಚಡ್ಡಾ ತಿರುಗೇಟು

ತೇಜಸ್ವಿ ಸೂರ್ಯ ಮಾತಿಗೆ ಪ್ರತಿಕ್ರಿಯೆ ನೀಡಿದ ರಾಘವ್ ಚಡ್ಡಾ, "ನಾನು ಜೆಎನ್‌ಯುನಲ್ಲಿ ಓದಿಲ್ಲ, ಅಥವಾ ನನ್ನ ಪಕ್ಷದ ಯಾವುದೇ ಸದಸ್ಯರು ಜೆಎನ್‌ಯುಗೆ ಹೋಗಿಲ್ಲ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅಲ್ಲಿ ಓದಿದ್ದಾರೆ" ಎಂದು ಕೇಳಿದರು. ಈ ವಿಡಿಯೋ ಈಗ ಟ್ವಿಟರ್ ನಲ್ಲಿ ವೈರಲ್ ಆಗಿದೆ.

English summary
BJP MP Tejasvi Surya said that spending four years in the army is better than spending 8 years in the JNU. A Rajya Sabha MP Raghav chadda's answer to Tejasvi Surya is now viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X