ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ವಿರುದ್ಧ ಹಕ್ಕುಚ್ಯುತಿ ನಿರ್ಣಯ

|
Google Oneindia Kannada News

ನವದೆಹಲಿ, ಫೆಬ್ರವರಿ 10: ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಯೊಬ್ಬರ ಕುರಿತು ಸಂಸತ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಬಿಜೆಪಿ ನಿರ್ಧರಿಸಿದೆ.

ಲೋಕಸಭೆಯಲ್ಲಿ ಮೋಯಿತ್ರಾ ನೀಡಿದ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಸಂಸತ್‌ನಿಂದ ಅವರನ್ನು ವಜಾಗೊಳಿಸಲು ಮುಂದಾಗಿದೆ ಎನ್ನಲಾಗಿದೆ. ರಾಜಸ್ಥಾನದ ಪಾಲಿಯ ಬಿಜೆಪಿ ಸಂಸದ ಮತ್ತು ಮಾಜಿ ಕಾನೂನು ಖಾತೆ ರಾಜ್ಯ ಸಚಿವ ಪಿಪಿ ಚೌಧರಿ ಅವರು ಮೋಯಿತ್ರಾ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಮನವಿ ಸಲ್ಲಿಸಿದ್ದಾರೆ.

ಐದು ವರ್ಷದಲ್ಲಿ ಭಾರತದ ಪೌರತ್ವ ತೊರೆದವರ ಸಂಖ್ಯೆ 6.76 ಲಕ್ಷ ಐದು ವರ್ಷದಲ್ಲಿ ಭಾರತದ ಪೌರತ್ವ ತೊರೆದವರ ಸಂಖ್ಯೆ 6.76 ಲಕ್ಷ

ಮಾಜಿ ಸಿಜೆಐ ರಂಜನ್ ಗೊಗೊಯ್ ಅವರನ್ನು ಗುರಿಯನ್ನಾಗಿಸಿ ಹೇಳಿಕೆ ನೀಡಿದ್ದಕ್ಕಾಗಿ ಮಹುವಾ ಮೋಯಿತ್ರಾ ಅವರು ಕ್ರಮ ಎದುರಿಸಲೇಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ಹೇಳಿದ್ದರು.

ಗಂಭೀರ ವಿಚಾರ- ಪ್ರಲ್ಹಾದ ಜೋಶಿ

ಗಂಭೀರ ವಿಚಾರ- ಪ್ರಲ್ಹಾದ ಜೋಶಿ

'ರಾಮ ಮಂದಿರ ತೀರ್ಪಿನ ವಿಚಾರವನ್ನು ಪ್ರಸ್ತಾಪಿಸಿ, ಆಗಿನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ಇತರೆ ವಿಚಾರಗಳನ್ನು ಎಳೆದು ತಂದಿರುವುದು ಗಂಭೀರ ವಿಚಾರವಾಗಿದೆ. ಈ ಕುರಿತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಚಿಂತನೆ ನಡೆಸಿದ್ದೇವೆ' ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದರು.

ಪವಿತ್ರ ಗೋವು ಪವಿತ್ರವಾಗಿ ಉಳಿದಿಲ್ಲ

ಪವಿತ್ರ ಗೋವು ಪವಿತ್ರವಾಗಿ ಉಳಿದಿಲ್ಲ

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಚರ್ಚೆಯ ವೇಳೆ ಲೋಕಸಭೆಯಲ್ಲಿ ಮಾತನಾಡಿದ್ದ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ, ಮಾಜಿ ಸಿಜೆಐ ವಿರುದ್ಧದ ಲೈಂಗಿಕ ದುರ್ನಡತೆ ಆರೋಪಗಳನ್ನು ಉಲ್ಲೇಖಿಸಿದ್ದರು. 'ನ್ಯಾಯಾಂಗ ಎಂಬ ಪವಿತ್ರ ಗೋವು ಈಗ ಪವಿತ್ರವಾಗಿ ಉಳಿದಿಲ್ಲ' ಎಂದು ಟೀಕಿಸಿದ್ದರು.

ಬದಲಾವಣೆ ಮಾಡದಿರಲು ಕೃಷಿ ಕಾಯ್ದೆ ಧಾರ್ಮಿಕ ಗ್ರಂಥವೇ?; ಅಬ್ದುಲ್ಲಾಬದಲಾವಣೆ ಮಾಡದಿರಲು ಕೃಷಿ ಕಾಯ್ದೆ ಧಾರ್ಮಿಕ ಗ್ರಂಥವೇ?; ಅಬ್ದುಲ್ಲಾ

ರಂಜನ್ ಗೊಗೊಯ್ ವಿರುದ್ಧ ಪರೋಕ್ಷ ವಾಗ್ದಾಳಿ

ರಂಜನ್ ಗೊಗೊಯ್ ವಿರುದ್ಧ ಪರೋಕ್ಷ ವಾಗ್ದಾಳಿ

'ಹಾಲಿ ಸಿಜೆಐ ಒಬ್ಬರು ಲೈಂಗಿಕ ಕಿರುಕುಳದ ಆರೋಪ ಎದುರಿಸಿದಾಗ, ತಮ್ಮ ವಿಚಾರಣೆಯನ್ನು ತಾವೇ ಮಾಡಿದಾಗ, ತಮ್ಮನ್ನು ತಾವೇ ದೋಷಮುಕ್ತರನ್ನಾಗಿಸಿದಾಗ ಮತ್ತು ನಿವೃತ್ತರಾದ ಮೂರು ತಿಂಗಳೊಳಗೆ ಝೆಡ್ ಪ್ಲಸ್ ಭದ್ರತಾ ಸೌಲಭ್ಯದೊಂದಿಗೆ ಮೇಲ್ಮನೆಯ ನಾಮನಿರ್ದೇಶನವನ್ನು ಒಪ್ಪಿಕೊಂಡಾಗ ಅದು ಪವಿತ್ರವಾಗಿ ಉಳಿಯುವುದನ್ನು ನಿಲ್ಲಿಸಿತು' ಎಂದಿದ್ದರು.

ಸೌಗತ ರಾಯ್ ಬೆಂಬಲ

ಸೌಗತ ರಾಯ್ ಬೆಂಬಲ

ಮೋಯಿತ್ರಾ ಅವರು ಆರೋಪಗಳನ್ನು ಉಲ್ಲೇಖಿಸಿದ್ದರೇ ವಿನಾ, ಯಾವುದೇ ವ್ಯಕ್ತಿಯನ್ನು ಅವರ ಹೆಸರಿನಿಂದ ಸೂಚಿಸಿರಲಿಲ್ಲ. ಅಲ್ಲದೆ, ಮಹುವಾ ಅವರ ಹೇಳಿಕೆಯು ಮಾಜಿ ಸಿಜೆಐ ಕುರಿತಾಗಿದ್ದೇ ವಿನಾ ಹಾಲಿ ಸಿಜೆಐ ಬಗ್ಗೆ ಅಲ್ಲ ಎಂದು ಟಿಎಂಸಿ ಸಂಸದ ಸೌಗತ ರಾಯ್ ಬೆಂಬಲಕ್ಕೆ ನಿಂತಿದ್ದರು.

ದೇಣಿಗೆ ಸಂಗ್ರಹಿಸುವವರು 'ಚಂದಾ ಜೀವಿ'ಗಳೇ?: ಸರ್ಕಾರಕ್ಕೆ ಅಖಿಲೇಶ್ ಯಾದವ್ ಪ್ರಶ್ನೆದೇಣಿಗೆ ಸಂಗ್ರಹಿಸುವವರು 'ಚಂದಾ ಜೀವಿ'ಗಳೇ?: ಸರ್ಕಾರಕ್ಕೆ ಅಖಿಲೇಶ್ ಯಾದವ್ ಪ್ರಶ್ನೆ

English summary
BJP MP PP Chowdhary seeks to move a privilege motion against TMC MP Mahua Moitra for her remark on Ex CJI Ranjan Gogoi in parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X