ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರತೆ ಬೇಕೆಂದರೆ ಬಾಯ್ ಫ್ರೆಂಡ್ಸ್ ಸಂಸ್ಕೃತಿ ನಿಲ್ಲಿಸಿ: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

|
Google Oneindia Kannada News

ಗುನಾ, ಮಾರ್ಚ್ 26: ಮಹಿಳೆಯರ ಸುರಕ್ಷತೆಯ ಕುರಿತು ಮಧ್ಯಪ್ರದೇಶದ ಸ್ಥಳೀಯ ಶಾಸಕರೊಬ್ಬರು ನೀಡಿದ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.

ಮಧ್ಯಪ್ರದೇಶದ ಗುನಾ ಕ್ಷೇತ್ರದ ಶಾಸಕರಾಗಿರುವ ಪನ್ನಾಲಾಲ್ ಶಕ್ಯ, ಇಲ್ಲಿನ ಕಾಲೇಜೊಂದರಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ"ಹುಡುಗಿಯರು ಬಾಯ್ ಫ್ರೆಂಡ್ ಗಳನ್ನು ಮಾಡಿಕೊಳ್ಳುವುದರಿಂದಲೇ ಸಮಸ್ಯೆಗಳು ಆಗುತ್ತಿರುವುದು" ಎಂಬ ಹೇಳಿಕೆ ನೀಡಿದ್ದರು.

ಇಟಲಿಯಲ್ಲಿ ಮದುವೆಯಾದ ವಿರಾಟ್ ಕೊಹ್ಲಿ ದೇಶಭಕ್ತನಲ್ಲ: ಬಿಜೆಪಿ ಶಾಸಕ ಇಟಲಿಯಲ್ಲಿ ಮದುವೆಯಾದ ವಿರಾಟ್ ಕೊಹ್ಲಿ ದೇಶಭಕ್ತನಲ್ಲ: ಬಿಜೆಪಿ ಶಾಸಕ

"ಇತ್ತೀಚೆಗೆ ಟಿವಿ ಚಾನೆಲ್ ನವರು ನನ್ನನ್ನು 'ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ'ದ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದರು. ನಾನು ಅವರಿಗೂ ಹಾಗೆಯೇ ಹೇಳಿದ್ದೇನೆ. ಹುಡುಗಿಯರ ಮೇಲೆ ನಡೆಯುವ ದೌರ್ಜನ್ಯಗಳು ನಿಲ್ಲಬೇಕೆಂದರೆ ಅವರು ಬಾಯ್ ಫ್ರೆಂಡ್ಸ್ ಸಂಸ್ಕೃತಿಯನ್ನು ಬಿಡಬೇಕು" ಎಂದು ಅವರು ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿಯರಿದ್ದ ಸಭೆಯಲ್ಲಿ ಮಾಡುತ್ತಿದ್ದ ಭಾಷಣದಲ್ಲಿ ಹೇಳಿದ್ದಾರೆ.

BJP MLAs safety advice for girls becomes controversial now.

2017 ರ ಡಿಸೆಂಬರ್ ತಿಂಗಳಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಇಟಲಿಯಲ್ಲಿ ವಿವಾಹವಾಗಿದ್ದನ್ನೂ ಶಕ್ಯ ವಿರೋಧಿಸಿದ್ದರು. ವಿದೇಶಕ್ಕೆ ಹೋಗಿ ಮದುವೆಯಾಗುವ ಇವರಿಗೆ ದೇಶಭಕ್ತಿಯಿಲ್ಲ ಎಂದಿದ್ದರು.

English summary
"Why do girls make boyfriends? If they stop doing this, the atrocities against them will stop," Local BJP MLA Pannalal Shakya said. His advice for safety of girls becomes controversial now
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X