ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bypolls: ಉಪಚುನಾವಣೆ: ಬಿಜೆಪಿಗೆ 5-0 ಸೋಲಿನ ಮುಖಭಂಗ

|
Google Oneindia Kannada News

ನವದೆಹಲಿ, ಏ. 16: ಪಶ್ಚಿಮ ಬಂಗಾಳದ ಬಾಲಿಗಂಜ್ ವಿಧಾನಸಭಾ ಕ್ಷೇತ್ರ ಸಹಿತ ನಾಲ್ಕು ರಾಜ್ಯಗಳಲ್ಲಿನ ನಾಲ್ಕು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಬಿಜೆಪಿಗೆ ಒಂದೂ ಗೆಲ್ಲಲು ಸಾಧ್ಯವಾಗಿಲ್ಲ. ಟಿಎಂಸಿ ಮತ್ತು ಕಾಂಗ್ರೆಸ್ ಪಕ್ಷ ತಲಾ ಎರಡು ಕ್ಷೇತ್ರಗಳು ಮತ್ತು ಆರ್‌ಜೆಡಿ ಒಂದು ಕ್ಷೇತ್ರವನ್ನು ಗೆದ್ದಿವೆ.

ಪಶ್ಚಿಮ ಬಂಗಾಳದ ಆಸನ್ಸೋಲ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಎಂಸಿ ಪಕ್ಷದ ಶತ್ರುಘ್ನ ಸಿನ್ಹಾ ಅವರು ಬಿಜೆಪಿಯ ಅಗ್ನಿಮಿತ್ರಾ ಪೌಲ್ ಅವರನ್ನ ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಶತ್ರುಘ್ನ ಸಿನ್ಹಾ ಅವರು ಮಾಜಿ ಬಿಜೆಪಿ ನಾಯಕರಷ್ಟೇ ಅಲ್ಲ ಮಾಜಿ ಕೇಂದ್ರ ಸಚಿವರೂ ಹೌದು. ಇದು ಮೂರನೇ ಬಾರಿ ಲೋಕಸಭೆ ಪ್ರವೇಶಿಸುತ್ತಿರುವುದು. ಹಿಂದೆ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು.

ಕೆಪಿಸಿಸಿಗೆ ಇದ್ದಾರೆ 'ಬೇನಾಮಿ ಅಧ್ಯಕ್ಷೆ': ಏನಿದು ಬಿಜೆಪಿ ಹೊಸ ಹೇಳಿಕೆ?ಕೆಪಿಸಿಸಿಗೆ ಇದ್ದಾರೆ 'ಬೇನಾಮಿ ಅಧ್ಯಕ್ಷೆ': ಏನಿದು ಬಿಜೆಪಿ ಹೊಸ ಹೇಳಿಕೆ?

ಬಾಲಿಗಂಜ್: ಟಿಎಂಸಿ ಗೆಲುವು
ಪಶ್ಚಿಮ ಬಂಗಾಳದ ಬಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಬಿಜೆಪಿ ನಾಯಕ ಬಾಬುಲ್ ಸುಪ್ರಿಯೋ ಅವರು ಜಯ ಸಾಧಿಸಿದ್ದಾರೆ. ಎಡಪಕ್ಷದಿಂದ ತೀವ್ರ ಪೈಪೋಟಿ ನಡುವೆಯೂ ಬಾಬುಲ್ ಅವರು ಗೆಲುವಿನ ನಗೆ ಬೀರಲು ಯಶಸ್ವಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಕೇಯಾ ಘೋಷ್ ಮೂರನೇ ಸ್ಥಾನ ಪಡೆದರೂ 13 ಸಾವಿರ ಮತಗಳನ್ನ ಪಡೆದು ನಿರೀಕ್ಷೆಮೀರಿದ ಸಾಧನೆ ಮಾಡಿದ್ದಾರೆ.

BJP loses all five bypolls in 4 states

ಖೇರಾಗಡ್: ಕೈ ಗೆಲುವು:
ಛತ್ತೀಸ್‌ಗಡ ರಾಜ್ಯದ ಖೇರಾಗಡ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಯಶೋದಾ ವರ್ಮಾ ಅವರು ಬಿಜೆಪಿ ಅಭ್ಯರ್ಥಿಯನ್ನು 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.

Asansol Bypoll Result: ಬಿಜೆಪಿಯ ಹೊಸ ಭದ್ರಕೋಟೆ ಛಿದ್ರ: ಆಸನ್ಸೋಲ್‌ನಲ್ಲಿ ಶತ್ರುಘ್ನಗೆ ಗೆಲುವಿನ ನಗೆAsansol Bypoll Result: ಬಿಜೆಪಿಯ ಹೊಸ ಭದ್ರಕೋಟೆ ಛಿದ್ರ: ಆಸನ್ಸೋಲ್‌ನಲ್ಲಿ ಶತ್ರುಘ್ನಗೆ ಗೆಲುವಿನ ನಗೆ

ಬೋಚಹದಲ್ಲಿ ಆರ್‌ಜೆಡಿ
ಬಿಹಾರ ರಾಜ್ಯದ ಬೋಚಹ ವಿಧಾನಸಭಾ ಕ್ಷೇತ್ರವನ್ನು ಆರ್‌ಜೆಡಿ ಗೆದ್ದುಕೊಂಡಿದೆ. ಬಿಜೆಪಿಯ ಬೇಬಿ ಕುಮಾರಿ ವಿರುದ್ಧ ಆರ್‌ಜೆಡಿಯ ಅಮರ್ ಪಾಸ್ವಾನ್ ಅವರು 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ವಿಐಪಿ ಪಕ್ಷದ ಅಭ್ಯರ್ಥಿ ಗೀತಾ ಕುಮಾರಿ ಮೂರನೇ ಸ್ಥಾನ ಪಡೆದಿದ್ದಾರೆ. ಅಚ್ಚರಿ ಎಂದರೆ ಕಾಂಗ್ರೆಸ್ ಅಭ್ಯರ್ಥಿ ತರುಣ್ ಚೌಧರಿ ಅವರಿ ಶೇ. 1ಕ್ಕಿಂತಲೂ ಕಡಿಮೆ ಮತ ಸಿಕ್ಕಿದೆ. ನೋಟಾಗೆ ಬಿದ್ದ ಮತಗಳ ಅರ್ಧಭಾಗವೂ ಕೈ ಅಭ್ಯರ್ಥಿಗೆ ಸಿಗಲಿಲ್ಲ.

ಉತ್ತರ ಕೊಲ್ಹಾಪುರ ಕೈ ವಶ:
ಮಹಾರಾಷ್ಟ್ರದ ಉತ್ತರ ಕೊಲ್ಹಾಪುರ ವಿಧಾನಸಭಾ ಕ್ಷೇತದಲ್ಲಿ ಬಿಜೆಪಿ ಸೋತಿದೆ. ಮಹಾರಾಷ್ಟ್ರ ವಿಕಾಸ ಆಘಾಡಿ ಮೈತ್ರಿಕೂಟದ ಜಂಟಿ ಅಭ್ಯರ್ಥಿಯಾಗಿ ನಿಂತಿದ್ದ ಕಾಂಗ್ರೆಸ್‌ನ ಜಯಶ್ರೀ ಜಾದವ್ ಅವರು ಬಿಜೆಪಿ ಅಭ್ಯರ್ಥಿಯನ್ನ 19,500 ಮತಗಳ ಅಂತರದಿಂದ ಮಣಿಸಿದ್ದಾರೆ. ಜಯಶ್ರೀ ಅವರು ಕೊಲ್ಹಾಪುರ ಕ್ಷೇತ್ರದಲ್ಲಿ ಶಾಸಕರಾದ ಮೊದಲ ಮಹಿಳೆ ಎನಿಸಿದ್ದಾರೆ.

BJP loses all five bypolls in 4 states

ಈ ಮೇಲಿನ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಒಂದೂ ಗೆಲುವು ಸಿಕ್ಕಿಲ್ಲ. ಪಶ್ಚಿಮ ಬಂಗಾಳದ ಆಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಹಿಂದಿನ ಎರಡು ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಬಾಬುಲ್ ಸುಪ್ರಿಯೋ ಅವರೇ ಎರಡೂ ಬಾರಿ ಗೆದ್ದಿದ್ದರು. ಆದರೆ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಟಾಲಿಗಂಜ್ ಕ್ಷೇತ್ರದಲ್ಲಿ ಕಣಕ್ಕಿಳಿದ ನಂತರ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಅದು ತೆರವುಗೊಂಡಿತ್ತು. ಈಗ ಶತ್ರುಘ್ನ ಸಿನ್ಹಾ ಅವರನ್ನ ಕಣಕ್ಕಿಳಿಸಿ ಬಿಜೆಪಿಯಿಂದ ಆಸನ್ಸೋಲ್ ಕ್ಷೇತ್ರವನ್ನ ಟಿಎಂಸಿ ಕಿತ್ತುಕೊಂಡಿದೆ.

ಇನ್ನು, ಬಾಲಿಗಂಜ್ ಕ್ಷೇತ್ರದಲ್ಲಿ ಬಾಬುಲ್ ಸುಪ್ರಿಯೋ ಗೆಲುವು ಅನಿರೀಕ್ಷಿತವಲ್ಲವಾದರೂ ಕಠಿಣ ಪೈಪೋಟಿ ನಿರೀಕ್ಷಿಸಲಾಗಿತ್ತು. ಬಾಬುಲ್ ಬಿಜೆಪಿಯಲ್ಲಿದ್ದಾಗ ಇಲ್ಲಿನ ಸಾಕಷ್ಟು ಮುಸ್ಲಿಮ್ ಸಮುದಾಯದವರ ವಿರೋಧ ಕಟ್ಟಿಕೊಂಡಿದ್ದರು. ಈಗ ಬಿಜೆಪಿ ತೊರೆದು ಟಿಎಂಸಿ ಸೇರಿದ್ದರೂ ಬಾಬುಲ್ ಬಗ್ಗೆ ಕೆಲ ಮುಸ್ಲಿಮ್ ವರ್ಗಗಳಿಗೆ ಅಸಮಾಧಾನ ಮನೆಮಾಡಿತ್ತು. ಕ್ಷೇತ್ರದಲ್ಲಿ ಮುಸ್ಲಿಮರು ಅರ್ಧಕ್ಕಿಂತ ಹೆಚ್ಚು ಸಂಖ್ಯೆ ಹೊಂದಿರುವ ಹಿನ್ನೆಲೆಯಲ್ಲಿ ಬಾಬುಲ್ ಗೆಲುವು ಕಷ್ಟ ಎನ್ನಲಾಗುತ್ತಿತ್ತು. ಆದರೆ ಕೊನೆಗೂ ಅವರು ಗೆದ್ದು ಬೀಗಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
BJP lost all 5 constituencies that went to bypolls this month. West Bengal's Asansol Lok Sabha seat and Bollygunge assembly seat, Chhattisgarh's Khairagarh, Maharashtra's North Kolhapur, Bihars Bochaha seats were lied vacant before bypolls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X