ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

|
Google Oneindia Kannada News

ನವದೆಹಲಿ, ಫೆಬ್ರವರಿ 24: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ಹಿರಿಯ ನಾಯಕತ್ವ ತೀವ್ರ ವಾಗ್ದಾಳಿ ನಡೆಸಿದೆ. ಅವರು ಉತ್ತರ-ದಕ್ಷಿಣವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಅವಕಾಶವಾದಿ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸೇರಿದಂತೆ ಅನೇಕರು ರಾಹುಲ್ ಗಾಂಧಿ ವಿರುದ್ಧ ಏಕಾಏಕಿ ಮುಗಿಬಿದ್ದಿರುವುದು ಕುತೂಹಲ ಮೂಡಿಸಿದೆ.

"ಖಾಲಿ ಬಲೆಯೊಂದಿಗೆ ವಾಪಸ್ಸಾಗುವ ನಿಮ್ಮ ನಿರಾಸೆ ಈಗ ಅರ್ಥವಾಯ್ತು"

ತಮ್ಮ ಈಗಿನ ಲೋಕಸಭಾ ಕ್ಷೇತ್ರ ಕೇರಳದ ವಯನಾಡನ್ನು ಹಿಂದಿನ ಲೋಕಸಭಾ ಕ್ಷೇತ್ರ ಅಮೇಥಿಗೆ ಹೋಲಿಸಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಸಿರುವ ಬಿಜೆಪಿ ನಾಯಕರು, ರಾಹುಲ್ ಅವರದು ವಿಭಜನೆಯ ಮನಸ್ಥಿತಿ ಎಂದು ಟೀಕಿಸಿದ್ದಾರೆ.

ಉತ್ತರದ ವಿರುದ್ಧ ನಂಜು

ಉತ್ತರದ ವಿರುದ್ಧ ನಂಜು

'ಉತ್ತರದ ವಿರುದ್ಧ ದ್ವೇಷ ಕಾರುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಈಶಾನ್ಯ ಭಾರತದಲ್ಲಿದ್ದಾಗ ಪಶ್ಚಿಮ ಭಾಗದ ಕಡೆಗೆ ನಂಜು ಕಾರುತ್ತಿದ್ದರು. ಇಂದು ಅವರು ದಕ್ಷಿಣದಲ್ಲಿದ್ದಾರೆ. ಉತ್ತರದೆಡೆಗೆ ನಂಜು ಹೊರಹಾಕುತ್ತಿದ್ದಾರೆ. ರಾಹುಲ್ ಗಾಂಧಿ ಅವರೇ, ಒಡೆದು ಆಳುವ ರಾಜಕೀಯ ಕೈಗೂಡುವುದಿಲ್ಲ' ಎಂದು ಜೆಪಿ ನಡ್ಡಾ ಹೇಳಿದ್ದಾರೆ.

ಕೇರಳದಲ್ಲಿ ತಾಜಾತನ ಸಿಕ್ಕಿದೆ

ಕೇರಳದಲ್ಲಿ ತಾಜಾತನ ಸಿಕ್ಕಿದೆ

ವಿಧಾನಸಭೆ ಚುನಾವಣೆ ಸನ್ನಿಹಿತವಾಗಿರುವ ಕೇರಳದಲ್ಲಿ ಐಶ್ವರ್ಯಾ ಕೇರಳ ಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಉತ್ತರದಲ್ಲಿ ತಾವು 15 ವರ್ಷ ಸಂಸದರಾಗಿದ್ದು ವಿಭಿನ್ನ ಬಗೆಯ ರಾಜಕಾರಣ ಮಾಡಿದ್ದೆ. ಕೇರಳಕ್ಕೆ ಬಂದಿರುವುದು ತಾಜಾತನ ನೀಡುತ್ತಿದೆ. ಇಲ್ಲಿ ಇದ್ದಕ್ಕಿದ್ದಂತೆ ನನಗೆ ವಿಚಾರಗಳ ಬಗ್ಗೆ ವಿವರವಾಗಿ ಚರ್ಚಿಸುವ ಜನರು ಸಿಕ್ಕಿದ್ದಾರೆ ಎಂದಿದ್ದರು.

ರೈತರಿಗೆ ಹಾನಿಕಾರಕ: ವಿವಾದಿತ 3 ಕೃಷಿ ಕಾಯ್ದೆಗಳ ಬಗ್ಗೆ ವಿವರಣಾತ್ಮಕ ಪಾಠರೈತರಿಗೆ ಹಾನಿಕಾರಕ: ವಿವಾದಿತ 3 ಕೃಷಿ ಕಾಯ್ದೆಗಳ ಬಗ್ಗೆ ವಿವರಣಾತ್ಮಕ ಪಾಠ

ರಾಹುಲ್ ಹೋದಲ್ಲಿ ನೆಲಕಚ್ಚುತ್ತದೆ

ರಾಹುಲ್ ಹೋದಲ್ಲಿ ನೆಲಕಚ್ಚುತ್ತದೆ

ರಾಹುಲ್ ಗಾಂಧಿ ಎಲ್ಲಿ ಕಾಲಿಡುತ್ತಾರೋ ಅಲ್ಲಿ ಕಾಂಗ್ರೆಸ್ ನೆಲಕಚ್ಚುತ್ತದೆ. ರಾಹುಲ್ ಅವರು ಈ ಮೊದಲು ಉತ್ತರ ಭಾರತವನ್ನು ಕಾಂಗ್ರೆಸ್ ಮುಕ್ತವನ್ನಾಗಿಸಿದ್ದರು. ಈಗ ಅವರು ದಕ್ಷಿಣದತ್ತ ಸಾಗುತ್ತಿದ್ದಾರೆ. ನಮಗೆ ಮತ್ತು ಜನರಿಗೆ ಇಡೀ ದೇಶ ಒಂದು. ಕಾಂಗ್ರೆಸ್ ದೇಶವನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸಲು ಬಯಸಿದೆ. ಇಂತಹ ಪ್ರಯತ್ನ ಯಶಸ್ಚಿಯಾಗಲು ಜನರು ಬಿಡುವುದಿಲ್ಲ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ನಮ್ಮನ್ನು ವಿಭಜಿಸಬೇಡಿ

ನಮ್ಮನ್ನು ವಿಭಜಿಸಬೇಡಿ

'ನಾನು ದಕ್ಷಿಣದಿಂದ ಬಂದವನು. ನಾನು ಪಶ್ಚಿಮ ರಾಜ್ಯದ ಸಂಸದ. ನಾನು ಹುಟ್ಟಿದ್ದು, ಶಿಕ್ಷಣ ಪಡೆದಿದ್ದು, ಕೆಲಸ ಮಾಡಿದ್ದು ಉತ್ತರದಲ್ಲಿ. ನಾನು ಜಗತ್ತಿನ ಮುಂದೆ ಭಾರತವನ್ನು ಪ್ರತಿನಿಧಿಸಿದ್ದೇನೆ. ನನಗೆ ಭಾರತ ಒಂದು. ಒಂದು ಪ್ರಾದೇಶವನ್ನು ಕಡೆಗಣಿಸಬೇಡಿ. ನಮ್ಮನ್ನು ವಿಭಜಿಸಬೇಡಿ' ಎಂದು ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

English summary
BJP leaders attacks Rahul Gandhi for comparing South and North experience accused him of creating north-south divide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X