ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೇಂದ್ರ ಬಜೆಟ್ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ನಿರಾಸೆ'

|
Google Oneindia Kannada News

ಬೆಂಗಳೂರು, ಫೆ. 1: ದೇಶದ ಜನರಿಗೆ ನಾವೇನೂ ಮಾಡಿಲ್ಲ. ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ಆಗಿಲ್ಲ ಎಂಬ ನಿರಾಸೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಹಾಗಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅತ್ಯಂತ ಸುದೀರ್ಘ ಬಜೆಟ್ ಮಂಡನೆ ಮಾಡುವಾಗ ಸ್ವತಃ ಬಿಜೆಪಿ ನಾಯಕರೇ ಮೇಜು ತಟ್ಟಿ ಉತ್ಸಾಹವನ್ನು ತೋರಿಸಲಿಲ್ಲ. ಬಿಜೆಪಿಯವರಿಗೇ ಕೇಂದ್ರ ಬಜೆಟ್ ನಿರಾಸೆಯನ್ನುಂಟು ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಕೇಂದ್ರ ಬಜೆಟ್ ಸಂದರ್ಭ ವಿಶ್ಲೇಷಣೆ ಮಾಡಿದ್ದಾರೆ.

2020-21ನೇ ಸಾಲಿನ ಕೇಂದ್ರ ಬಜೆಟ್ ಕುರಿತು ವಿರೋಧ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಾಯಕರು ಎತ್ತಿರುವ ಪ್ರಶ್ನೆಗಳು ಸರಿಯಾಗಿವೆ ಎಂದು ಜನಸಾಮನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಬಡವರ ವಿರೋಧಿ, ಮುನ್ನೋಟವಿಲ್ಲದ, ರೈತರ ಮೂಗಿಗೆ ತುಪ್ಪ ಹಚ್ಚುವ ಬಜೆಟ್ ಇದಾಗಿದೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ.

ಪ್ರಧಾನಿ ಮೋದಿ, ಬಿಜೆಪಿ ನಾಯಕರ ಮುಖದಲ್ಲಿ 'ಬಜೆಟ್' ನಿರಾಸೆ

ಪ್ರಧಾನಿ ಮೋದಿ, ಬಿಜೆಪಿ ನಾಯಕರ ಮುಖದಲ್ಲಿ 'ಬಜೆಟ್' ನಿರಾಸೆ

ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರಧಾನಿಮಂತ್ರಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ಮುಖದಲ್ಲೂ ನಿರಾಸೆ ಮೂಡಿತ್ತು. ದೇಶದ ಜನರಿಗೆ ನಾವೇನೂ ಮಾಡಿಲ್ಲ ಎಂಬ ನಿರಾಸೆ ಅವರಲ್ಲಿ ಕಂಡು ಬಂದಿದೆ. ಪ್ರತಿ ಸಲದಂತೆ ಈ ಬಾರಿ ಮೇಜು ಕುಟ್ಟಿ ಉತ್ಸಾಹ ತೋರಿಸಿದ್ದು ಕಂಡು ಬರಲೇ ಇಲ್ಲ. ಹಾಗಾಗಿ ಬಿಜೆಪಿಯವರಿಗೆ ಈ ಬಜೆಟ್ ಮೂಡಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುಜ ಖರ್ಗೆ ಹೇಳಿದ್ದಾರೆ.

ಕೇಂದ್ರ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ?ಕೇಂದ್ರ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ?

ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಬಜೆಟ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ ಅನ್ನೋದನ್ನ ಬಜೆಟ್ ತೋರಿಸಿದೆ. ಕೆಲ ಕಾರ್ಪೋರೇಟ್ ವಯಲಗಳಿಗೆ ಟ್ಯಾಕ್ಸ್‌ ಕಡಿಮೆ ಮಾಡಿದ್ದಾರೆ.

ಇತಿಹಾಸದಲ್ಲೇ ಇದು ದೊಡ್ಡ, ಉದ್ದದ ಬಜೆಟ್. ಹೆಚ್ಚಿಗೆ ಮಾತನಾಡಿ, ಕಡಿಮೆ ಕೆಲಸ ಮಾಡಿದ ಬಜೆಟ್ ಇದು. ಇದು ಬೆಟ್ಟ ಕೆದರಿ ಇಲಿ ಹಿಡಿದ ಬಜೆಟ್. ಆಯುಷ್ಮಾನ್ ಭಾರತ್ ಯೋಜನೆ ಜಾರಿಯಲ್ಲಿದೆ ಅಂದ್ರು, ಆದ್ರೆ ಆ ಯೋಜನೆಯಡಿ ರೋಗಿಗಳು ಆಸ್ಪತ್ರೆಗೆ ಹೋದ್ರೆ ತಿರಸ್ಕರಿಸ್ತಿದ್ದಾರೆ. ಈ ಬಜೆಟ್ ನಿಂದ ಜನರಿಗೆ ಉಪಯೋಗವೂ ಆಗಿಲ್ಲ, ಜನ ಪರವೂ ಇಲ್ಲ. 2 ಗಂಟೆ 46 ನಿಮಿಷಗಳ ಕಾಲ ನಿರಾಶೆಯ ಹೇಳಿಕೆ ಕೊಟ್ಟಿದ್ದಾರೆ ಎಂದು ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

16 ಅಂಶಗಳ ಪೈಕಿ 9 ಕಾರ್ಪೊರೇಟ್ ಪರವಾಗಿದೆ

16 ಅಂಶಗಳ ಪೈಕಿ 9 ಕಾರ್ಪೊರೇಟ್ ಪರವಾಗಿದೆ

ದೇಶಕ್ಕೆ ಬಂಡವಾಳ ಹರಿದು ಬರುವ ವಾತಾವರಣ ಇರಬೇಕು, ಅದಕ್ಕೆ‌ ಪೂರಕ ವಾತಾವರಣ ಇಲ್ಲದೇ ಹೋದ್ರೆ ಹೂಡಿಕೆ ಮಾಡೋಕೆ ಯಾರೂ ಬರಲ್ಲ. ಸಧ್ಯ ದೇಶಕ್ಕೆ ಬಂಡವಾಳ ಹರಿದು ಬರುವ ಸ್ಥಿತಿಯಿಲ್ಲ. ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿರುವುದರಿಂದ ಏನೂ ಉಪಯೋಗ? ಅಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.

ಜನರು ಹೂಡಿಕೆ ಮಾಡಿರುವ ಎಲ್.ಐ.ಸಿ. ಶೇರುಗಳನ್ನು ಮಾರಾಟ ಮಾಡಿದ್ದಾರೆ. ಇದು ದೇಶದ ಆರ್ಥಿಕ ದುಸ್ಥಿತಿಯ ಪ್ರತೀಕ. ಆರನೇ ವರ್ಷಕ್ಕೆ ಪ್ರಧಾನಿ ಮೋದಿ ದೇಶವನ್ನು ಅಧೋಗತಿಗೆ ಇಳಿದಿದೆ.ಕೇಂದ್ರ ಬಜೆಟ್‌ನಲ್ಲಿಯ 16 ಅಂಶಗಳ ಪೈಕಿ 9 ಕಾರ್ಪೊರೇಟ್ ಪರವಾಗಿದೆ.

ಬೆಂಗಳೂರು ಸಬರ್ಬನ್ ರೈಲು ಕಳೆದ ವರ್ಷವೇ ಘೋಷಣೆ ಆಗಿತ್ತು. ಒಂದು ಕಿ.ಮೀ ಹಳಿ ಹಾಕುವ ಕೆಲಸ ಕೂಡ ಆಗಿಲ್ಲ. ಈ ಬಾರಿ ಅದೇ ಘೋಷಣೆ ಮಾಡಿರೋದು ನಗೆಪಾಟಿಲು. ಕಳೆದ ಐದು ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ಸ್‌ಗೆ ಆರ್ಥಿಕತೆ ಕೊಂಡೊಯ್ತುತ್ತೇವೆಂದು ಭರವಸೆ ಕೊಟ್ಟಿದ್ರು. ಮನಮೋಹನ್ ಸಿಂಗ್ ಕಾಲದಲ್ಲಿ ಜಿಡಿಪಿ ಶೇಕಡಾ 9ಕ್ಕೇರಿತ್ತು. ಆದ್ರೆ ಈಗ ಶೇಕಡಾ 4.5ಕ್ಕೆ ಇಳಿದಿದೆ. ಇದನ್ನು ಸರಿದೂಗಿಸಲು ಹೆಚ್ಚು ಸಾಲ ಮಾಡಬೇಕಾಗಿದೆ. ಈಗ ಜಿಡಿಪಿಯನ್ನು ಶೇಕಡಾ 6ಕ್ಕೆ ಒಯ್ಯುತ್ತೇವೆ ಅಂತಾ ಭರವಸೆ ಕೊಟ್ಟಿದ್ದಾರೆ. 10 ಲಕ್ಷ ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ರು. ಆದರೆ ಇದ್ದ ಉದ್ಯೋಗಗಳೇ ಕಡಿಮೆಯಾಗಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಏರ್ ಇಂಡಿಯಾ ಮಾರಾಟಕ್ಕಿಟ್ಟು ಕಿಸಾನ್ ಉಡಾನ್ ಹೇಗೆ ಮಾಡ್ತಾರೆ?

ಏರ್ ಇಂಡಿಯಾ ಮಾರಾಟಕ್ಕಿಟ್ಟು ಕಿಸಾನ್ ಉಡಾನ್ ಹೇಗೆ ಮಾಡ್ತಾರೆ?

ಬಡವರ ವಿರೋಧಿ ಕೇಂದ್ರ ಬಜೆಟ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್‌ ಟೀಕಿಸಿದ್ದಾರೆ. ಬಜೆಟ್ ನೋಡಿದ್ರೆ ವಿದೇಶಿ ಬಂಡವಾಳ ಹೂಡಿಕೆ ಬರುವಂತೆ ಕಾಣುತ್ತಿಲ್ಲ. ಮಹಿಳೆಯರು, ಕರ್ಮಿಕರು ಹಾಗೂ ರೈತರಿಗೆ ಏನೂ ಅನುಕೂಲ ಮಾಡದ ನಿರಾಶಾದಾಯಕ ಬಜೆಟ್. ಏರ್ ಇಂಡಿಯಾ ಸಂಸ್ಥೆ ಮಾರಾಟಕ್ಕಿಟ್ಟು ಕಿಸಾನ್ ಉಡಾನ್ ಹೇಗೆ ಮಾಡುತ್ತಾರೆಯೋ ಗೊತ್ತಿಲ್ಲ. ಲಾಭದಾಯಕ ಸಾರ್ವಜನಿಕ ಕಂಪನಿಯನ್ನು ಖಾಸಗಿಕರಣ ಮಾಡುತ್ತಿರುವುದು ದುರದೃಷ್ಟಕರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆತಂಕ ವ್ಯಕ್ತಪಡಿಸಿದ್ದಾರೆ.

ಯಾವ ಇಲಾಖೆಗೆ ಎಷ್ಟು ಕೊಟ್ಟರು ನಿರ್ಮಲಾ ಸೀತಾರಾಮನ್ಯಾವ ಇಲಾಖೆಗೆ ಎಷ್ಟು ಕೊಟ್ಟರು ನಿರ್ಮಲಾ ಸೀತಾರಾಮನ್

ಅಧೋಗತಿಗೆ ಇಳಿದ ಮೋದಿ ಆಡಳಿತ

ಅಧೋಗತಿಗೆ ಇಳಿದ ಮೋದಿ ಆಡಳಿತ

ವಿತ್ತೀಯ ಕೊರತೆ ಹೆಚ್ಚಾಗಿರುವುದು, ತಲಾ ವರಮಾನ ಶೇಡಕಾ 5ಕ್ಕೆ ಕುಸಿತ ಕಂಡಿರುವುದು, ಷೇರು ಪೇಟೆ ಸೂಚ್ಯಂಕ 500 ಪಾಯಿಂಟ್ಸ್‌ಗಳಷ್ಟು ಕುಸಿತ ಕಂಡಿರುವುದು ಬಜೆಟ್ ಹೇಗಿದೆ ಎಂಬುದನ್ನೂ ಸೂಚಿಸಿದೆ. ಆರನೇ ವರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ದೇಶವನ್ನು ಅಧೋಗತಿಗೆ ಇಳಿಸಿದೆ. ಬಜೆಟ್‌ನ 16 ಅಂಶಗಳ ಪೈಕಿ 9 ಕಾರ್ಪೊರೇಟ್ ವಯಲದ ಪರವಾಗಿವೆ. ಯುಪಿಎ ಸರ್ಕಾರದಲ್ಲಿ ಶೇಕಡಾ 9ರಷ್ಟಿದ್ದ ದೇಶದ ತಲಾ ವರಮಾನ ಪ್ರಧಾನಿ ಮೋದಿ ಆಡಳಿತದಲ್ಲಿ ಶೇಕಡಾ 4.5ಕ್ಕೆ ಕುಸಿದಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.

ಇತಿಹಾಸದಲ್ಲೇ ಸುದೀರ್ಘ ಬಜೆಟ್ ಮಂಡನೆ, ಇದು ಹೊಗಳಿಕೆಯಲ್ಲ!ಇತಿಹಾಸದಲ್ಲೇ ಸುದೀರ್ಘ ಬಜೆಟ್ ಮಂಡನೆ, ಇದು ಹೊಗಳಿಕೆಯಲ್ಲ!

English summary
BJP leaders, including Prime Minister Narendra Modi, were let down during the Union Budget. Congress leaders have criticized the Union Budget, saying they had a feeling the country had nothing to do with them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X