ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ಭೂಮಿಪೂಜೆಗೆ ಮುನ್ನ ಸುಬ್ರಮಣಿಯನ್ ಸ್ವಾಮಿ ವಿವಾದಾತ್ಮಕ ಟ್ವೀಟ್

|
Google Oneindia Kannada News

ನವದೆಹಲಿ, ಜುಲೈ 21: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿಪೂಜೆ ಆಗಸ್ಟ್ ಐದರಂದು ನಡೆಯಲಿದೆ. ಈ ಸಂಬಂಧ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬರದಿಂದ ಸಿದ್ದತೆಯನ್ನು ನಡೆಸುತ್ತಿದೆ.

ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದ ಸಿಎಂ ಆದಿಯಾಗಿ, ಸುಮಾರು ಮುನ್ನೂರು ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ರಾಮ ಮಂದಿರ ನಿರ್ಮಿಸಿದರೆ ಕೊವಿಡ್-19 ಹೋಗಲಾಡಿಸಲು ಸಾಧ್ಯವೆ?ರಾಮ ಮಂದಿರ ನಿರ್ಮಿಸಿದರೆ ಕೊವಿಡ್-19 ಹೋಗಲಾಡಿಸಲು ಸಾಧ್ಯವೆ?

ಇವೆಲ್ಲದರ ನಡುವೆ ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ವಿವಾದಾತ್ಮಕ ಟ್ವೀಟ್ ಒಂದನ್ನು ಮಾಡಿ, ಪ್ರಧಾನಿಯವರು ಈ ಬಗ್ಗೆ ಗಮನಹರಿಸಬೇಕೆಂದು ಕೇಳಿಕೊಂಡಿದ್ದಾರೆ.

BJP Senior Leader Subramanian Swamy Controversial Tweet On Ayodhya

"ಆಡ್ವಾಣಿ, ಜೋಷಿ ಮುಂತಾದವರನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವ ಮೊದಲು, ಬಾಬ್ರಿ ಮಸೀದಿ ಧ್ವಂಸ ಸಂಬಂಧ, ಅವರ ಮೇಲಿರುವ ಕ್ಷುಲ್ಲಕ ಕೇಸ್ ಅನ್ನು ಇತ್ಯರ್ಥಗೊಳಿಸಲು ಮೋದಿಯವರು ಸೂಚಿಸಬೇಕು".

"ಆಡ್ವಾಣಿ ಮತ್ತು ಜೋಷಿ ಮಸೀದಿಯನ್ನು ನೆಲಸಮ ಮಾಡಿಲ್ಲ, ಬದಲಿಗೆ, ಮಂದಿರ ನಿರ್ಮಾಣಕ್ಕಾಗಿ ಧ್ವಂಸ ಮಾಡಿದ್ದಾರೆ"ಎಂದು ಸುಬ್ರಮಣಿಯನ್ ಸ್ವಾಮಿ, ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.

ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ನೆರವೇರಿಸಲು ಪ್ರಧಾನಿಗೆ ಆಹ್ವಾನಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ನೆರವೇರಿಸಲು ಪ್ರಧಾನಿಗೆ ಆಹ್ವಾನ

ಬಾಬ್ರಿ ಮಸೀದಿ ಧ್ವಂಸ ಸಂಬಂಧ, ಜುಲೈ 23ರಂದು ಜೋಷಿಯವರನ್ನು, ಆಡ್ವಾಣಿಯವರನ್ನು ಜುಲೈ 24 ರಂದು, ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಲಿದೆ.

English summary
BJP Senior Leader Subramanian Swamy Controversial Tweet On Ayodhya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X