ಪ್ರತಿಭಟನಾಕಾರರ ವಿರುದ್ಧ ಖಡ್ಗ ಝಳಪಿಸಿದ ಬಿಜೆಪಿ ನಾಯಕ

Subscribe to Oneindia Kannada

ಅಹಮದಾಬಾದ್, ಡಿಸೆಂಬರ್ 13: ವಿಧಾನಸಭೆ ಚುನಾವಣೆಯ ಕಾವು ಜೋರಾಗಿರುವ ಗುಜರಾತ್ ನಲ್ಲಿ ಬಿಜೆಪಿ ನಾಯಕರೊಬ್ಬರು ಬಹಿರಂಗವಾಗಿ ಖಡ್ಗ ಹಿಡಿದು ಓಡಾಡಿದ ಘಟನೆ ನಡೆದಿದೆ.

ಪಂಚೋಟ್ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ರಜ್ನಿ ಪಟೇಲ್ ವಿರುದ್ಧ ಜನರು ಪ್ರತಿಭಟನೆಗೆ ಇಳಿದಿದ್ದರು. ಈ ಪ್ರತಿಭಟನೆ ಕಂಡು ದಂಗಾದ ಮೆಹ್ಸಾನ ಜಿಲ್ಲಾ ಬಿಜೆಪಿ ಐಟಿ ಸೆಲ್ ಅಧ್ಯಕ್ಷ ಚಂದ್ರೇಶ್ ಪಟೇಲ್ ಪ್ರತಿಭಟನಾಕಾರರ ವಿರುದ್ಧ ಖಡ್ಗ ಝಳಪಿಸಿದ್ದಾರೆ.

BJP leader ran with sword after people's protest

ಚಂದ್ರೇಶ್ ಪಟೇಲ್ ತನ್ನ ಓರೆಯಿಂದ ಖಡ್ಗ ತೆಗೆದರೂ ಜನರ ಆಕ್ರೋಶ ಕಡಿಮೆ ಆಗಿರಲಿಲ್ಲ. ಇದರಿಂದ ಬೆದರಿದ ಚಂದ್ರೇಶ್ ಖಡ್ಗ ಝಳಪಿಸುತ್ತಲೇ ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಚಂದ್ರೇಶ್ ಪಟೇಲ್ ಖಡ್ಗ ಹಿಡಿದು ಜನರನ್ನು ಬೆದರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಜೆಪಿ ಈ ನಾಯಕನನ್ನು ಉಚ್ಛಾಟನೆ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಗುಜರಾತ್ ನಲ್ಲಿ ನಾಳೆ ಅಂದರೆ ಡಿಸೆಂಬರ್ 14ರಂದು ಮೊದಲ ಹಂತದ ಮತದಾನ ನಡೆಯಲಿದೆ. ಇದೇ ಡಿಸೆಂಬರ್ 18ರಂದು ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mehsana district BJP IT cell president Chandresh Patel ran with open sword as people staged protest against BJP candidate Rajni Patel in Pachot village.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ