ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಯು ಮುಂದೆ ಮಂಡಿ ಊರಿದ ಬಿಜೆಪಿ: 50:50 ಸೀಟು ಹಂಚಿಕೆ

|
Google Oneindia Kannada News

ಪಾಟ್ನಾ, ಅಕ್ಟೋಬರ್ 26: ಲೋಕಸಭೆ ಚುನಾವಣೆ 2019 ಕ್ಕೆ ಬಿಹಾರದಲ್ಲಿ ಜಿಡಿಯು ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿದ್ದು. ಇಂದು ಸೀಟು ಹಂಚಿಕೆ ಸಹ ಪೂರ್ಣಗೊಂಡಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿಯು 50:50 ಅನುಪಾತದಲ್ಲಿ ಸೀಟುಗಳನ್ನು ಹಂಚಿಕೊಳ್ಳಲಿದೆ. ಎರಡೂ ಪಕ್ಷಗಳು ಸಮ ಸೀಟುಗಳಲ್ಲಿ ಪರಸ್ಪರ ಸ್ಪರ್ಧೆ ಮಾಡಲಿವೆ.

ಬಿಹಾರದಲ್ಲಿ 40 ಲೋಕಸಭೆ ಕ್ಷೇತ್ರಗಳಿದ್ದು. ನಿತೇಶ್ ನಾಯಕತ್ವದ ಜೆಡಿಯು 20 ಸೀಟುಗಳಲ್ಲಿ ಸ್ಪರ್ಧಿಸಿದರೆ ಬಿಜೆಪಿ ಉಳಿಕೆ 20 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಆರ್‌ಜೆಡಿ ಮತ್ತು ಕಾಂಗ್ರೆಸ್‌ಗೆ ಹಿನ್ನಡೆ ಮಾಡಲೆಂದು ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಅಮಿತ್ ಶಾ ಮತ್ತು ನಿತೀಶ್ ಕುಮಾರ್ ಇಂದು ಹೇಳಿದ್ದಾರೆ.

ಮೋದಿ ಗೆಲುವಿನ ಹಿಂದಿದ್ದ 'ಆ ವ್ಯಕ್ತಿ' ನಿತೀಶ್ ಕುಮಾರ್ ಜೆಡಿಯು ಸೇರ್ಪಡೆ ಮೋದಿ ಗೆಲುವಿನ ಹಿಂದಿದ್ದ 'ಆ ವ್ಯಕ್ತಿ' ನಿತೀಶ್ ಕುಮಾರ್ ಜೆಡಿಯು ಸೇರ್ಪಡೆ

ಬಿಜೆಪಿಯ ಇತರೆ ಮಿತ್ರ ಪಕ್ಷಗಳಿಗೂ ಗೌರವಾನ್ವಿತ ಸಂಖ್ಯೆಯ ಸೀಟುಗಳನ್ನು ನೀಡಲಾಗುವುದು. ಮಿತ್ರ ಪಕ್ಷಗಳಿಗೆ ಸೀಟು ನೀಡಿದ್ದಾಗ್ಯೂ ಬಿಜೆಪಿ ಮತ್ತು ಜೆಡಿಯು ಸಮಪ್ರಮಾಣದ ಸೀಟುಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಅವರು ಹೇಳಿದರು.

2014ರಲ್ಲಿ ಯಾವುದು ಎಷ್ಟು ಗೆದ್ದಿತ್ತು

2014ರಲ್ಲಿ ಯಾವುದು ಎಷ್ಟು ಗೆದ್ದಿತ್ತು

ಕಳೆದ 2014ರ ಚುನಾವಣೆಯಲ್ಲಿ ಈ ಎರಡು ಪಕ್ಷಗಳು ಮೈತ್ರಿ ಮುರಿದುಕೊಂಡಿದ್ದವು ಆಗ ಜೆಡಿಯು ಪಕ್ಷವು ಕೇವಲ ಎರಡು ಲೋಕಸಭೆ ಸೀಟುಗಳನ್ನು ಗೆದ್ದಿದ್ದರೆ ಬಿಜೆಪಿಯು 28 ಸೀಟುಗಳಲ್ಲಿ ಗೆದ್ದಿತ್ತು. ಅದಾಗ್ಯೂ ಸಹ ಜೆಡಿಯು ಪಕ್ಷವು ಹೆಚ್ಚಿನ ಸೀಟುಗಳಿಗಾಗಿ ಬೇಡಿಕೆ ಇಟ್ಟಿತ್ತು.

ಲೋಕಸಭೆ ಚುನಾವಣೆ: ಬಿಹಾರದಲ್ಲಿ ಮತ್ತೆ ಒಂದಾದ ನಿತೀಶ್-ಅಮಿತ್ ಶಾ ಜೋಡಿಲೋಕಸಭೆ ಚುನಾವಣೆ: ಬಿಹಾರದಲ್ಲಿ ಮತ್ತೆ ಒಂದಾದ ನಿತೀಶ್-ಅಮಿತ್ ಶಾ ಜೋಡಿ

ಮೈತ್ರಿ ಸರ್ಕಾರ ರಚಿಸಿರುವ ಜೆಡಿಯು, ಬಿಜೆಪಿ

ಮೈತ್ರಿ ಸರ್ಕಾರ ರಚಿಸಿರುವ ಜೆಡಿಯು, ಬಿಜೆಪಿ

ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ನಿತೇಶ್ ಕುಮಾರ್ ಮೊದಲಿಗೆ ಆರ್‌ಜೆಡಿ ಜೊತೆ ಸರ್ಕಾರ ರಚಿಸಿದ್ದರು ಆದರೆ ಆ ನಂತರ ಆ ಮೈತ್ರಿ ಮುರಿದುಕೊಂಡು ಬಿಜೆಪಿ ಜೊತೆ ಕೈಜೋಡಿಸಿದರು. ಹಾಗಾಗಿ ಬಿಜೆಪಿಯು ಜೆಡಿಯುಗೆ ಹೆಚ್ಚಿನ ಸೀಟು ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.

'ನಿತೀಶ್ ಮಹಾಘಟಬಂಧನ್ ಸೇರಿದರೆ ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ''ನಿತೀಶ್ ಮಹಾಘಟಬಂಧನ್ ಸೇರಿದರೆ ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ'

ಜೆಡಿಯು ಮುಂದೆ ಮಂಡಿ ಊರಿದ ಬಿಜೆಪಿ

ಜೆಡಿಯು ಮುಂದೆ ಮಂಡಿ ಊರಿದ ಬಿಜೆಪಿ

ನಾವು ಯಾವುದೇ ಕಾರಣಕ್ಕೂ ಕಡಿಮೆ ಸೀಟಿಗೆ ಸ್ಪರ್ಧಿಸುವುದಿಲ್ಲ ಎಂದು ನಿತೀಶ್ ಕುಮಾರ್ ಈ ಮೊದಲೇ ಹೇಳಿದ್ದರು. ಸೀಟು ಹಂಚಿಕೆಯಲ್ಲಿ ತಾರತಮ್ಯ ಆದರೆ ಬಿಹಾರದಲ್ಲಿನ ಮೈತ್ರಿ ಸರ್ಕಾರ ಉರುಳುವ ಅಪಾಯವೂ ಇತ್ತು ಹಾಗಾಗಿ ರಾಷ್ಟ್ರೀಯ ಪಕ್ಷ ಬಿಜೆಪಿ ಜೆಡಿಯು ಮುಂದೆ ಮಂಡಿ ಊರಿದೆ.

ಏಮ್ಸ್ ಆಸ್ಪತ್ರೆಯಲ್ಲಿ ಲಾಲೂ ಪ್ರಸಾದ್-ರಾಹುಲ್ ಗಾಂಧಿ ಭೇಟಿ ಏಮ್ಸ್ ಆಸ್ಪತ್ರೆಯಲ್ಲಿ ಲಾಲೂ ಪ್ರಸಾದ್-ರಾಹುಲ್ ಗಾಂಧಿ ಭೇಟಿ

ಕಾಂಗ್ರೆಸ್‌-ಆರ್‌ಜೆಡಿ ಮೈತ್ರಿ

ಕಾಂಗ್ರೆಸ್‌-ಆರ್‌ಜೆಡಿ ಮೈತ್ರಿ

ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೆ. ಇತ್ತ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸಹ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಮಾತುಕತೆಗಳು ನಡೆಯುತ್ತಿವೆ.

English summary
BJP-JDU sharing equal number of seats in Bihar Lok Sabha elections 2019. Amit Shah and Nitesh Kumar today announce this news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X