ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಮತಾ ಸರ್ಕಾರ ಬುಡಮೇಲು ಮಾಡಿಯೇ ತೀರುತ್ತೇನೆ: ಅಮಿತ್ ಶಾ ಅಬ್ಬರ

|
Google Oneindia Kannada News

ಕೊಲ್ಕತ್ತ, ಆಗಸ್ಟ್ 11: ಇತ್ತೀಚೆಗಿನ ಎನ್‌ಸಿಆರ್‌ (ರಾಷ್ಟ್ರೀಯ ಪೌರತ್ವ ನೊಂದಾವಣಿ) ಸೇರಿದಂತೆ ಹಲವು ಕಾರಣಗಳಿಗಾಗಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ಟೀಕಿಸುತ್ತಲೇ ಬಂದಿರುವ ಮಮತಾ ಬ್ಯಾನರ್ಜಿ ವಿರುದ್ಧ ಇಂದು ಅಮಿತ್ ಶಾ ಶಕ್ತಿ ಪ್ರದರ್ಶಿಸಿದರು.

ಮಮತಾ ಬ್ಯಾನರ್ಜಿ ಅವರ ಆಡಳಿತದ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತದಲ್ಲಿ ಭಾರಿ ಬಿಜೆಪಿ rally ನಡೆಸಿದ ಅವರು, ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟುವಂತೆ ಮಾಡಿದರು.

ಕೊಲ್ಕತ್ತಾದಲ್ಲಿ ಅಮಿತ್ ಶಾ ರ‍್ಯಾಲಿ : ಮಮತಾ ಬ್ಯಾನರ್ಜಿ ಮಾಡಿಕೊಂಡ ಸಿದ್ದತೆಕೊಲ್ಕತ್ತಾದಲ್ಲಿ ಅಮಿತ್ ಶಾ ರ‍್ಯಾಲಿ : ಮಮತಾ ಬ್ಯಾನರ್ಜಿ ಮಾಡಿಕೊಂಡ ಸಿದ್ದತೆ

ಯುವ ಬಿಜೆಪಿ ಆಯೋಜಿಸಿದ್ದ ಯುವ ಸ್ವಾಭಿಮಾನಿ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಸಿದ್ದರು. ಬಿಜೆಪಿ ಸಮಾವೇಶವೊಂದಕ್ಕೆ ಈ ಮಟ್ಟಿಗಿನ ಜನ ಸೇರಿದ್ದು ಪ.ಬಂಗಾಳದ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.

ಮಮತಾ ವಿರುದ್ದ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ: ಅಮಿತ್ ಶಾ ರ‍್ಯಾಲಿಗೆ ಜನಸಾಗರಮಮತಾ ವಿರುದ್ದ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ: ಅಮಿತ್ ಶಾ ರ‍್ಯಾಲಿಗೆ ಜನಸಾಗರ

ನಾವು ಬಾಂಗ್ಲಾ ವಿರುದ್ಧ ಇಲ್ಲ

ನಾವು ಬಾಂಗ್ಲಾ ವಿರುದ್ಧ ಇಲ್ಲ

ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, 'ನಾವು ಬಂಗ್ಲಾದೇಶದ ವಿರುದ್ಧ ಅಲ್ಲ ನಾವು ಬಂಗಾಳದ ಮಮತಾ ಬ್ಯಾನರ್ಜಿ ವಿರುದ್ಧ' ಎಂದು ಹೇಳಿದರು.

ಎನ್‌ಸಿಆರ್ ಪ್ರಕ್ರಿಯೆ ನಿಲ್ಲದು: ಶಾ

ಎನ್‌ಸಿಆರ್ ಪ್ರಕ್ರಿಯೆ ನಿಲ್ಲದು: ಶಾ

ಎನ್‌ಸಿಆರ್ ಪ್ರಕ್ರಿಯೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದ ಅವರು, ನಾವು ಅದನ್ನು ಶಾಂತಿಯುತವಾಗಿ ನಡೆಸಿಯೇ ಸಿದ್ಧ ಮಮತಾ ಬ್ಯಾನರ್ಜಿ ಆಗಲಿ ರಾಹುಲ್ ಗಾಂಧಿ ಆಗಲಿ ಅದನ್ನು ತಡೆಯಲು ಸಾಧ್ಯವಿಲ್ಲ ಎಂದರು.

ಎನ್‌ಸಿಆರ್‌ಗೆ ಮಮತಾ ವಿರೋಧ

ಎನ್‌ಸಿಆರ್‌ಗೆ ಮಮತಾ ವಿರೋಧ

ಅಸ್ಸಾಂನಲ್ಲಿ ನಡೆಯುತ್ತಿರುವ ಎನ್‌ಸಿಆರ್‌ ಪ್ರಕ್ರಿಯೆಗೆ ಮಮತಾ ಬ್ಯಾನರ್ಜಿ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿಯು ಇದು ಅತ್ಯಂತ ಅವಶ್ಯಕವಾಗಿದ್ದು, ಅಕ್ರಮ ವಲಸಿಗರನ್ನು ಭಾರತದಿಂದ ಹೊರಗಟ್ಟಲು ಇದು ಅವಶ್ಯಕ ಎಂದು ಹೇಳಿದೆ.

ಮತಗಳಿಗಿಂತಲೂ ದೇಶ ಮುಖ್ಯ

ಮತಗಳಿಗಿಂತಲೂ ದೇಶ ಮುಖ್ಯ

'ನಮಗೆ ಮತಗಳಿಗಿಂತಲೂ ದೇಶವೇ ಮುಖ್ಯ ಎಂದ ಅಮಿತ್ ಶಾ, ಬಾಂಗ್ಲಾದ ಅಕ್ರಮ ವಲಸಿಗರನ್ನು ಮಮತಾ ಬ್ಯಾನರ್ಜಿ ಏಕೆ ಪೋಷಿಸುತ್ತಿದ್ದಾರೆ ಮತ್ತು ಅವರ ಬೆಂಬಲ ಏಕೆ ಮಾಡುತ್ತಿದ್ದಾರೆ, ರಾಹಲ್ ಗಾಂಧಿ ಕೂಡ ಈ ಬಗ್ಗೆ ಸ್ಪಷ್ಟ ನಿಲವು ತೆದಿಲ್ಲ ಅವರೂ ಈ ವಿಷಯವನ್ನು ರಾಜಕೀಯಕ್ಕೆ ಬಳಸಲು ಚಿಂತಿಸಿದ್ದಾರೆ ಎಂದರು.

ಅಮಿತ್‌ ಶಾಗೆ ಕಪ್ಪು ಬಾವುಟ ಪ್ರದರ್ಶನ

ಅಮಿತ್‌ ಶಾಗೆ ಕಪ್ಪು ಬಾವುಟ ಪ್ರದರ್ಶನ

ಅಮಿತ್ ಶಾ ಭಾಷಣದ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಈ ಬಗ್ಗೆ ಮಾತನಾಡಿದ ಅವರು ಬಿಜೆಪಿ ಪಕ್ಷದ ಸ್ಥಾಪಕ ಶ್ಯಾಮ್ ಪ್ರಸಾದ್ ಸಹ ಬಗಾಳದವರು ಹಾಗಿದ್ದಮೇಲೆ ನಾನು ಬಂಗಾಳ ವಿರುದ್ಧ ಹೇಗೆ ಆಗುತ್ತೇನೆ ಎಂದರು.

English summary
BJP president Amit Shah did big BJP rally in West Bengal's Kolkatta. He said 'BJP is against Mamta Banerjee, not against Bangladesh. He also said Mamta or Rahul Gandhi could not stop NCR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X