ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ವರ್ಷದಲ್ಲಿ ದ್ವಿಗುಣಗೊಂಡ ಬಿಜೆಪಿ ಆದಾಯ

By Sachhidananda Acharya
|
Google Oneindia Kannada News

ನವದೆಹಲಿ, ಏಪ್ರಿಲ್ 11: ಬಿಜೆಪಿ ಪಕ್ಷದ ಆದಾಯ ಒಂದೇ ವರ್ಷದಲ್ಲಿ ದ್ವಿಗುಣಗೊಂಡಿದೆ. 2015-16ರಲ್ಲಿ ಬಿಜೆಪಿ ಆದಾಯ 570 ಕೋಟಿ ರೂಪಾಯಿ ಆಗಿತ್ತು. ಇದೀಗ 2016-17ರ ಅಂತ್ಯಕ್ಕೆ ಪಕ್ಷದ ಆದಾಯ 1,034 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾದ ವಾರ್ಷಿಕ ಲೆಕ್ಕಪತ್ರಗಳ ಪ್ರಕಾರ, ದೇಶದಲ್ಲಿ ಒಟ್ಟು 7 ರಾಷ್ಟ್ರೀಯ ಪಕ್ಷಗಳು ಇದ್ದು ಅವುಗಳ ಒಟ್ಟು ಆದಾಯಕ್ಕಿಂತ ಬಿಜೆಪಿ ಆದಾಯ ದುಪ್ಪಟ್ಟಾಗಿದೆ. ಕಾಂಗ್ರೆಸ್, ಬಿಎಸ್ಪಿ, ತೃಣಮೂಲ ಕಾಂಗ್ರೆಸ್, ಸಿಪಿಎಂ, ಸಿಪಿಐ ಮತ್ತು ಎನ್.ಸಿ.ಪಿ ಗಳು ಗಳಿಸಿದ ಆದಾಯಕ್ಕಿಂತ ಎರಡು ಪಟ್ಟು ಹೆಚ್ಚಿನ ಆದಾಯವನ್ನು ಬಿಜೆಪಿ ಸಂಪಾದಿಸಿದೆ.

ದ. ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆಯಾದ ಅನುದಾನವೆಷ್ಟು?ದ. ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆಯಾದ ಅನುದಾನವೆಷ್ಟು?

ಬಿಜೆಪಿಗೆ 997 ಕೋಟಿ ರೂಪಾಯಿ ದೇಣಿಗೆಗಳಿಂದ ಬಂದಿದೆ. ಇದರಲ್ಲಿ 533 ಕೋಟಿ ರೂಪಾಯಿ 20,000 ರೂಪಾಯಿಗೂ ಹೆಚ್ಚಿನ ಮೊತ್ತದ ದೇಣಿಗೆ ನೀಡಿದವರದ್ದಾಗಿದೆ. ಇದೇ ವೇಳೆ ಬಿಜೆಪಿ 710 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಒಟ್ಟಾರೆ 324 ಕೋಟಿ ರೂಪಾಯಿ ಉಳಿಸಿದೆ. ಒಟ್ಟಾರೆ 2016-17ರಲ್ಲಿ ಕಾಂಗ್ರೆಸ್ 225 ಕೋಟಿ ಆದಾಯ ಗಳಿಸಿದರೆ ಬಿಜೆಪಿ ಇದಕ್ಕಿಂತ ಹೆಚ್ಚು ಹಣವನ್ನು ಉಳಿಕೆ ಮಾಡಿದೆ.

BJP income doubles in a year

ಕಾಂಗ್ರೆಸ್ ಪಕ್ಷದ ಖರ್ಚು ಆದಾಯಕ್ಕಿಂತ 96 ಕೋಟಿ ರೂಪಾಯಿ ಹೆಚ್ಚಾಗಿದೆ. ಇನ್ನು ಬಿಎಸ್ಪಿ 2016-17ರಲ್ಲಿ 173.6 ಕೋಟಿ ಆದಾಯ ಗಳಿಸಿದೆ. 2015-16ರಲ್ಲಿ ಬಿಎಸ್ಪಿಯ ಆದಾಯ ಕೇವಲ 47.4 ಕೋಟಿ ರೂಪಾಯಿ ಆಗಿತ್ತು ಎಂಬುದು ಗಮನಾರ್ಹ. ವಿಶೇಷ ಎಂದರೆ ಇದರಲ್ಲಿ ಯಾರೂ ರೂ. 20,000 ಕ್ಕೂ ಹೆಚ್ಚಿನ ದೇಣಿಗೆ ನೀಡಿಲ್ಲ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಇನ್ನು ಸಿಪಿಎಂ 2015-16ರಲ್ಲಿ 107 ಕೋಟಿ ರೂಪಾಯಿ ಘೋಷಿಸಿಕೊಂಡಿದ್ದರ, 2016-17ರ ಹೊತ್ತಿಗೆ ಇದು 100 ಕೋಟಿ ರೂಪಾಯಿಗೆ ಇಳಿಕೆಯಾಗಿದೆ.

ಇನ್ನೂ ವಿಚಿತ್ರವೆಂದರೆ ತೃಣಮೂಲ ಕಾಂಗ್ರೆಸ್ 2015-16ರಲ್ಲಿ 34.5 ಕೋಟಿ ಆದಾಯ ಘೋಷಿಸಿತ್ತು. ಇದೀಗ 2016-17ರ ಹೊತ್ತಿಗೆ ಇದು 6.3 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಇದೇ ವೇಳೆ ಪಕ್ಷ 24 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಸಿಪಿಐ 2015-16ರಲ್ಲಿ 10.2 ಕೋಟಿ ಆದಾಯ ಗಳಿಸಿದ್ದರೆ 2016-17ರಲ್ಲಿ ಈ ಪ್ರಮಾಣ 2.1 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಎನ್ ಸಿಪಿ ಆದಾಯ 9.1 ಕೋಟಿಯಿಂದ 2016-17ರ ಹೊತ್ತಿಗೆ 17.2 ಕೋಟಿಗೆ ಏರಿಕೆಯಾಗಿದೆ.

English summary
There is still no clarity on whether Karnataka Chief Minister, Siddaramaiah would contest from the Chamundeshwari assembly constituency. While the CM is keen on contesting the seat, the high command is however against it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X