ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಘಾಲಯದಲ್ಲಿ ಚುನಾವಣೋತ್ತರ ಮೈತ್ರಿಯ ಸುಳಿವು ನೀಡಿದ ಬಿಜೆಪಿ!

|
Google Oneindia Kannada News

Recommended Video

ಮೇಘಾಲಯ : ಚುನಾವಣೋತ್ತರ ಮೈತ್ರಿಯ ಸುಳಿವು ನೀಡಿದ ಬಿಜೆಪಿ | Oneindia Kannada

ಶಿಲ್ಲಾಂಗ್, ಮಾರ್ಚ್ 03: ಇಂದು ಹೊರಬಿದ್ದ ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ತ್ರಿಪುರ, ನಾಗಾಲ್ಯಾಂಡ್ ಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಮರೆಯಾಗಿದೆ. ಮೇಘಾಲಯದಲ್ಲಿ ಒಂಚೂರು ಚಿಗುರಿಕೊಂದಿರುವ ಕಾಂಗ್ರೆಸ್ ಗೆ ಅಲ್ಲೂ ಆಘಾತ ನೀಡಲು ಬಿಜೆಪಿ ಮುಂದಾಗಿದೆ!

ಫಲಿತಾಂಶದ ಹಿನ್ನೆಲೆಯಲ್ಲಿ ಮಾತನಾಡಿದ ಮೇಘಾಲಯ ಬಿಜೆಪಿ ಉಸ್ತುವಾರಿ, ನಳಿನ್ ಕೋಹ್ಲಿ, 'ಮೇಘಾಲಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರವನ್ನು ಅಧಿಕಾರಕ್ಕೆ ತರು ಪ್ರಯತ್ನ ನಡೆಯುತ್ತಿದೆ. ಇಲ್ಲಿನ ಎನ್ ಪಿಪಿ(ನ್ಯಾಶ್ನಲ್ ಪೀಪಲ್ಸ್ ಪಾರ್ಟಿ), ಯುಡಿಪಿ(ಯುನೈಟೆಡ್ ಡೆಮಾಕ್ರೆಟಿಕ್ ಪಾರ್ಟಿ) ಮತ್ತು ಬಿಜೆಪಿ, ಎನ್ ಡಿಎ ಮೈತ್ರಿಕೂಟದ ಇತರ ಪಕ್ಷಗಳು ಸೇರಿ ಸರ್ಕಾರ ರಚಿಸಲು ಕೈಜೋಡಿಸುವ ಯತ್ನ ನಡೆಯುತ್ತಿದೆ' ಎಂದರು.

LIVE: ಮೇಘಾಲಯ : ಸಿಎಂ ಮುಕುಲ್ ಸಂಗ್ಮಾಗೆLIVE: ಮೇಘಾಲಯ : ಸಿಎಂ ಮುಕುಲ್ ಸಂಗ್ಮಾಗೆ

'ಮೇಘಾಲಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಚುನಾವಣೋತ್ತರ ಮೈತ್ರಿಯನ್ನು ಸಾಧಿಸಲು ನಾವು ಮುಂದಾಗುತ್ತಿದ್ದೇವೆ. ಕಾಂಗ್ರೆಸ್ ವಿರೋಧಿ ಮತಗಳು ಎನ್ ಪಿಪಿ, ಯುಡಿಪಿ, ಬಿಜೆಪಿಗಳಿಗೆ ಹಂಚಿಹೋಗಿವೆ. ಜನಾಭಿಪ್ರಾಯ ಸ್ಪಷ್ಟವಾಗಿದೆ. ಆದ್ದರಿಂದ ಚುನಾವಣೋತ್ತರ ಮೈತ್ರಿಯ ಕುರಿತು ಕೇಂದ್ರ ನಾಯಕರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ' ಎಂದು ಕೋಹ್ಲಿ ತಿಳಿಸಿದ್ದಾರೆ.

BJP hints post-poll alliance in Meghalaya

ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಗಳ ಫಲಿತಾಂಶ ಇಂದು ಹೊರಬಿದ್ದಿದ್ದು, ಮೇಘಾಲಯದಲ್ಲಿ ಕಾಂಗ್ರೆಸ್ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎನ್ ಪಿಪಿ 16, ಬಿಜೆಪಿ 4 ಮತ್ತು ಇತರರು 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ

English summary
As the Congress Party is leading with a low margin in the Meghalaya Assembly election mid trend, the Bharatiya Janata Party (BJP) is mulling forging alliance with other political parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X