ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯಾಕ್ ಆಗಿ 15 ದಿನಗಳಾದರೂ ಸರಿಯಾಗದ ಬಿಜೆಪಿ ವೆಬ್‌ಸೈಟ್

|
Google Oneindia Kannada News

ನವದೆಹಲಿ, ಮಾರ್ಚ್ 21: ಹ್ಯಾಕರ್‌ಗಳ ಕೃತ್ಯಕ್ಕೆ ಬಲಿಯಾದ ಬಿಜೆಪಿಯ ಅಧಿಕೃತ ವೆಬ್‌ಸೈಟ್ ಕಾರ್ಯಾಚರಣೆ ಸ್ಥಗಿತಗೊಳಿಸಿ ಹದಿನೈದು ದಿನ ಕಳೆದರೂ ಇನ್ನೂ ಸರಿಯಾಗಿಲ್ಲ.

ಇದೊಂದು ಸಣ್ಣ ಸಮಸ್ಯೆ ಎಂದು ಬಿಜೆಪಿ ಹೇಳಿಕೊಂಡಿದ್ದರೂ, ಹ್ಯಾಕರ್ ದಾಳಿಯಿಂದ ವೆಬ್‌ಸೈಟ್‌ನಲ್ಲಿದ್ದ ಅಪಾರ ಪ್ರಮಾಣದ ಮಾಹಿತಿ ನಷ್ಟವಾಗಿದೆ. ಈ ಕಾರಣದಿಂದ ವೆಬ್‌ಸೈಟ್‌ಅನ್ನು ಸರಿಪಡಿಸಿ ಮತ್ತೆ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದು ಸೈಬರ್ ಭದ್ರತಾ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ವೆಬ್ಸೈಟಿಗೆ ಕನ್ನ ಹಾಕಿ, ಮೋದಿ ಮೀಮ್ಸ್ ಬಿಟ್ಟ ಹ್ಯಾಕರ್ಸ್ ಬಿಜೆಪಿ ವೆಬ್ಸೈಟಿಗೆ ಕನ್ನ ಹಾಕಿ, ಮೋದಿ ಮೀಮ್ಸ್ ಬಿಟ್ಟ ಹ್ಯಾಕರ್ಸ್

ಬಿಜೆಪಿಯ ವೆಬ್‌ಸೈಟ್ ಮಾರ್ಚ್ 5ರಂದು ಹ್ಯಾಕ್ ಆಗಿತ್ತು. ಆಗ ವೆಬ್‌ಸೈಟ್‌ನ ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಚಾನ್ಸೆಲರ್ ಆಂಜೆಲಾ ಮರ್ಕೆಲ್ ಅವರ ಮೀಮ್ ಅನ್ನು ತೋರಿಸುತ್ತಿತ್ತು.

bjp hacked website is still not working after 15 days

ಬಳಿಕ ವೆಬ್‌ಸೈಟ್‌ನಲ್ಲಿದ್ದ ಚಿತ್ರವನ್ನು ತೆಗೆದುಹಾಕಿ ಪಕ್ಷವು ವೆಬ್‌ಸೈಟ್‌ನ ನಿರ್ವಹಣಾ ಕಾರ್ಯ ನಡೆಸುತ್ತಿದ್ದು, ಶೀಘ್ರದಲ್ಲಿಯೇ ವೆಬ್‌ಸೈಟ್ ಮರಳಲಿದೆ ಎಂಬ ಸಂದೇಶ ಪ್ರಕಟಿಸಲಾಗಿದೆ.

ಪ್ರಧಾನಿ ಮೋದಿ ವೆಬ್ ಸೈಟಿನ ಹುಳುಕು ತೋರಿಸಿದ ಹ್ಯಾಕರ್ಪ್ರಧಾನಿ ಮೋದಿ ವೆಬ್ ಸೈಟಿನ ಹುಳುಕು ತೋರಿಸಿದ ಹ್ಯಾಕರ್

ಇದುವರೆಗೂ ಯಾವುದೇ ಹ್ಯಾಕರ್‌ಗಳ ಗುಂಪು ಇದಕ್ಕೆ ತಾನೇ ಕಾರಣ ಎಂದು ಹೊಣೆಗಾರಿಕೆ ವಹಿಸಿಕೊಂಡಿಲ್ಲ. ವೆಬ್‌ಸೈಟ್‌ಅನ್ನು ಕೆಲವೇ ನಿಮಿಷಗಳ ಕಾಲ ಹ್ಯಾಕ್ ಮಾಡಲಾಗಿತ್ತು ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿದ್ದರು.

ಇದನ್ನು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಲು ಬಳಸಿಕೊಂಡಿವೆ.

'ಹದಿನೈದು ದಿನಗಳಾಗಿವೆ. ಬಿಜೆಪಿಯ ವೆಬ್‌ಸೈಟ್ ಇನ್ನೂ ಸರಿಹೋಗಿಲ್ಲ. ಅವರದೇ ಸ್ವಂತ ವೆಬ್‌ಸೈಟ್ ಕಾಯುವುದರಲ್ಲಿ ಯಾರು ವಿಫಲರಾಗಿದ್ದಾರೆ ಊಹಿಸಿ? 'ಚೌಕಿದಾರರು' ಈ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆಯೇ?' ಎಂದು ಎಎಪಿ ಲೇವಡಿ ಮಾಡಿದೆ.

English summary
The BJP website was hacked on March 5 is still non functional.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X