ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಜನತಾ ಪಕ್ಷ ಚುನಾವಣಾ ಲೋಗೊ ಬದಲಾಯ್ತು!

By Srinath
|
Google Oneindia Kannada News

BJP gets modified poll symbol Election Commission of India
ನವದೆಹಲಿ, ನ. 8: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಪೂರ್ವ ಯಶಸ್ಸು ಸಾಧಿಸಲು ಹಾತೊರೆಯುತ್ತಿರುವ ಭಾರತೀಯ ಜನತಾ ಪಕ್ಷವು ಆಮೂಲಾಗ್ರ ಬದಲಾವಣೆಯ ಹಾದಿಯಲ್ಲಿದೆ.

ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಕೊಂಡು ದೇಶಾದ್ಯಂತ ಸಂಚಲವನ್ನುಂಟುಮಾಡುತ್ತಿರುವ ಬಿಜೆಪಿ ಹೊಸ ಚುನಾವಣಾ ಚಿಹ್ನೆ ಬಯಸಿದೆ. ಮತ್ತು ಕೇಂದ್ರ ಚುನಾವಣಾ ಆಯೋಗವು ಅದಕ್ಕೆ ಅಸ್ತು ಎಂದೂ ಹೇಳಿದೆ.

Bold and Beautiful!: ಹಾಗಂತ ಚಿಹ್ನೆಯಲ್ಲಿ ಭಾರಿ ಬದಲಾವಣೆಯೇನೂ ಇಲ್ಲ. ಪ್ರಸ್ತುತ ಬಿಜೆಪಿ ಚುನಾವಣಾ ಚಿಹ್ನೆ ಕಮಲ ಇದೆಯಲ್ಲಾ. ಆ ಕಮಲದ ಹೂವಿನ ಬಾಹ್ಯ ರೇಖೆಯನ್ನು ಮತ್ತಷ್ಟು ಬೋಲ್ಡ್ ಅಂಡ್ ಬ್ಯೂಟಿ ಫುಲ್ ಅಂದರೆ ದಪ್ಪವಾಗಿಸುವುದಕ್ಕೆ ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡಿದೆ. ಅದು ಬಿಟ್ಟರೆ ರಚನೆ/ ಸ್ವರೂಪದ ಸೇರಿದಂತೆ ಮತ್ತೇನೂ ಬದಲಾವಣೆಯಿಲ್ಲ.

ಬ್ಯಾಲೆಟ್‌ ಪೇಪರಿನಲ್ಲಿ ಉಳಿದ ಪಕ್ಷಗಳ ಚಿಹ್ನೆಗಳಿಗೆ ಹೋಲಿಸಿದರೆ, ಕಮಲದ ಗುರುತಿನ ಚಿಹ್ನೆಯ ಬಾಹ್ಯ ಗೆರೆಗಳು ಮಂಕಾಗಿ ಕಾಣುವುದರಿಂದ ಚಿಹ್ನೆಯಲ್ಲಿ ಬದಲಾವಣೆ ಮಾಡುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಆಯೋಗ ತಥಾಸ್ತು ಅಂದಿದೆ.

ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಮತ್ತು ಸಾರ್ವಜನಿಕ ಪ್ರಚಾರಕ್ಕೆ ನವೀಕೃತ ಚಿಹ್ನೆಯನ್ನು ಬಿಜೆಪಿ ಬಳಸಿಕೊಳ್ಳಹುದಾಗಿದೆ. ಈ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಲು ಬಿಜೆಪಿ ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಲಿದೆ ಎಂದು ಪಕ್ಷ ತಿಳಿಸಿದೆ.

ವಿದ್ಯುನ್ಮಾನ ಮತದಾನ ಯಂತ್ರದಲ್ಲಿ (EVM) ಕಪ್ಪು-ಬಿಳುಪಿನಲ್ಲಿ ಪಕ್ಷದ ಹೊಸ ಮಾದರಿಯ ಚುನಾವಣಾ ಲೋಗೋವನ್ನು ಗಾಢವಾಗಿ ಛಾಪಿಸಿ, ಪ್ರಚಾರದಲ್ಲಿ ತೊಡಗಲಾಗುವುದು ಎಂದು ಬಿಜೆಪಿ ಉಪಾಧ್ಯಕ್ಷ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.

English summary
BJP gets modified poll symbol Election Commission of India. The Election Commission has allowed the BJP to change the outline of its election symbol “Lotus” to make it look bolder and the party will use the revamped version in all its publicity material for the upcoming polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X