ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷಕ್ಕೆ ಹರಿದು ಬರುತ್ತಿರುವ ಪಾರ್ಟಿ ಫಂಡ್: ಬಿಜೆಪಿ ಎಲ್ಲೋ, ಕಾಂಗ್ರೆಸ್ ಇನ್ನೆಲ್ಲೋ!

|
Google Oneindia Kannada News

ಕಳೆದ ಲೋಕಸಭಾ ಚುನಾವಣೆಯ ನಂತರ, ಅದಾದ ಮೇಲೆ ಸಾಲುಸಾಲು ಅಸೆಂಬ್ಲಿ ಚುನಾವಣೆಯನ್ನು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಬಹುತೇಕ ಗೆಲ್ಲುತ್ತಾ ಬರುತ್ತಿರುವುದರಿಂದ ಬಿಜೆಪಿಗೆ ಹರಿದು ಬರುತ್ತಿರುವ ಪಾರ್ಟಿ ಫಂಡ್ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಕಾಂಗ್ರೆಸ್ ಹೈಕಮಾಂಡ್ ಅಳಿಯ ರಾಬರ್ಟ್ ವಾಧ್ರಾ ಅವರ 'ಡಿಎಲ್ಎಫ್ ಭೂಹಗರಣ'ದ ವಿಚಾರದಲ್ಲಿ ದೇಶಾದ್ಯಂತ ಭಾರೀ ಪ್ರತಿಭಟೆನೆ ಮಾಡಿದ್ದ ಬಿಜೆಪಿ, ಈಗ ಅದೇ ಸಂಸ್ಥೆ ನೀಡಿರುವ ಪಾರ್ಟಿ ಫಂಡ್ ಅನ್ನು ಮುಕ್ತ ಮನಸ್ಸಿನಿಂದ ತಮ್ಮ ಪಕ್ಷದ ಬ್ಯಾಂಕ್ ಅಕೌಂಟಿಗೆ ಸೇರಿಸಿಕೊಂಡಿದೆ.

ಎಡಿಆರ್ (ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್) 2016-17ರ ಸಾಲಿನಲ್ಲಿ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಬಂದಿದೆ, ಯಾರು ಎಷ್ಟು ದೇಣಿಗೆ ನೀಡಿದರು ಎನ್ನುವ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯ ಪ್ರಕಾರ, ಬಿಜೆಪಿಯ ಹತ್ತಿರಕ್ಕೂ ಯಾವುದೇ ಪಕ್ಷಗಳು ಬರದೇ ಇರುವುದು ವಿಶೇಷ.

16-17ರ ಸಾಲಿನಲ್ಲಿ ವಿವಿಧ ಪಕ್ಷಗಳಿಗೆ ಹರಿದು ಬಂದ ಒಟ್ಟು ದೇಣಿಗೆಯಲ್ಲಿ ಶೇ.89 ಬಿಜೆಪಿಗೆ ಬಂದಿದ್ದರೆ ಶೇ.11 ಇತರ ಒಂಬತ್ತು ಪಕ್ಷಗಳಿಗೆ ಬಂದಿದೆ. ಪ್ರುಡೆಂಟ್ ಎಲೆಕ್ಟೊರಲ್ ಟ್ರಸ್ಟ್ ಮೂಲಕ ಸಂಗ್ರಹವಾದ ದೇಣಿಗೆಯಲ್ಲಿ ಸಿಂಹಪಾಲು ಮತ್ತು ಜನತಾ ನಿರ್ವಾಚಕ ಟ್ರಸ್ಟ್ ಮೂಲಕ ಸಂಗ್ರಹವಾದ ಎಲ್ಲಾ ದೇಣಿಗೆಗಳು ಬಿಜೆಪಿ ಪಾಲಾಗಿವೆ.

ವಿವಿಧ ಕಾರ್ಪೋರೇಟ್ ಸಂಸ್ಥೆಗಳು,ಎಲೆಕ್ಟೊರಲ್ ಸಂಸ್ಥೆಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಮೊತ್ತ, ಪ್ರತೀ ವರ್ಷ ಹೆಚ್ಚಾಗುತ್ತಿರುವುದು ಗಮನಿಸಬೇಕಾದ ವಿಚಾರ. ಕೇಂದ್ರದಲ್ಲಿ ಆಡಳಿತ ಪಕ್ಷದ ಮೇಲೆ, ಸಂಸ್ಥೆಗಳು ಪರೋಕ್ಷವಾಗಿ ದೇಣಿಗೆ ಎನ್ನುವ ಮೂಲಕ 'ಬಂಡವಾಳ' ಹೂಡುವುದು ಹೊಸದೇನಲ್ಲ. 2016-17ರ ಸಾಲಿನಲ್ಲಿ, ಪ್ರಮುಖವಾಗಿ ಒಂಬತ್ತು ಸಂಸ್ಥೆ ಎಷ್ಟು ಹಣ ರಾಜಕೀಯ ಪಕ್ಷಗಳಿಗೆ ನೀಡಿದೆ, ಮುಂದೆ ಓದಿ..

2016-17ರ ಸಾಲಿನಲ್ಲಿ 325.27 ಕೋಟಿ ರೂಪಾಯಿ

2016-17ರ ಸಾಲಿನಲ್ಲಿ 325.27 ಕೋಟಿ ರೂಪಾಯಿ

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಮೂಲಕ ನೊಂದಾಯಿಸಿಕೊಂಡಿರುವ 21 ಎಲೆಕ್ಟೊರಲ್ ಟ್ರಸ್ಟ್ ಗಳ ಮೂಲಕ, 2016-17ರ ಸಾಲಿನಲ್ಲಿ 325.27 ಕೋಟಿ ರೂಪಾಯಿ ವಿವಿಧ ಪಕ್ಷಗಳಿಗೆ ಹರಿದು ಬಂದಿದೆ. ಇದರಲ್ಲಿ, 290.22 ಕೋಟಿ ರೂಪಾಯಿ ಬಿಜೆಪಿ ಪಾರ್ಟಿ ಫಂಡಿಗೆ ಬಂದಿದೆ. ಕಾಂಗ್ರೆಸ್ಸಿಗೆ 16.5 ಕೋಟಿ, ಶಿರೋಮಣಿ ಅಕಾಲಿದಳಕ್ಕೆ 9 ಕೋಟಿ, ಸಮಾಜವಾದಿ ಪಕ್ಷಕ್ಕೆ 6.5 ಕೋಟಿ, ಆಮ್ ಆದ್ಮಿ ಮತ್ತು ಶಿವಸೇನೆಗೆ 1ಕೋಟಿ ದೇಣಿಗೆ ಹರಿದುಬಂದಿದೆ.

ಡಿಎಲ್ಎಫ್ ಒಂದೇ ಸಂಸ್ಥೆಯಿಂದ 52 ಕೋಟಿ

ಡಿಎಲ್ಎಫ್ ಒಂದೇ ಸಂಸ್ಥೆಯಿಂದ 52 ಕೋಟಿ

ಡಿಎಲ್ಎಫ್ - 28 ಕೋಟಿ
ಡಿಎಲ್ಎಫ್ ಸೈಬರ್ ಸಿಟಿ ಡೆವಲಪರ್ಸ್ - 15 ಕೋಟಿ
ಡಿಎಲ್ಎಫ್ ಕಮರ್ಷಿಯಲ್ ಡೆವಲಪರ್ಸ್ - 9 ಕೋಟಿ
ಒಟ್ಟು - 52 ಕೋಟಿ

ಹರಿದುಬಂದ ಹಣದಲ್ಲಿ ಬಹುಪಾಲು ಬಿಜೆಪಿಗೆ

ಹರಿದುಬಂದ ಹಣದಲ್ಲಿ ಬಹುಪಾಲು ಬಿಜೆಪಿಗೆ

ಸಜ್ಜನ್ ಜಿಂದಾಲ್ ಒಡೆತನದ JSW ಎನರ್ಜಿ - 25 ಕೋಟಿ
ಶ್ರೋಫ್ ಮನೆತನದ ಫೋಸ್ಫೋರಸ್ ಲಿಮಿಟೆಡ್ - 25 ಕೋಟಿ
ಪಿರಾಮಲ್ ಎಂಟರ್ಪ್ರೈಸಸ್ - 21.1 ಕೋಟಿ
(ಚಿತ್ರದಲ್ಲಿ - ಸಜ್ಜನ್ ಜಿಂದಾಲ್)

290.22 ಕೋಟಿ ರೂಪಾಯಿ ಬಿಜೆಪಿ ಪಾರ್ಟಿ ಫಂಡಿಗೆ

290.22 ಕೋಟಿ ರೂಪಾಯಿ ಬಿಜೆಪಿ ಪಾರ್ಟಿ ಫಂಡಿಗೆ

ಕೋಟಕ್ ಗ್ರೂಪ್ - 18.5 ಕೋಟಿ
ಭಾರ್ತಿ ಏರ್ಟೆಲ್ ಲಿಮಿಟೆಡ್ - 17.01 ಕೋಟಿ
ಎಸ್ಸಾರ್ ಗ್ರೂಪ್ - 15 ಕೋಟಿ

ಗ್ರಾಸಿಂ ಇಂಡಸ್ಟ್ರೀಸ್ - 13 ಕೋಟಿ

ಗ್ರಾಸಿಂ ಇಂಡಸ್ಟ್ರೀಸ್ - 13 ಕೋಟಿ

ಅಲ್ಟ್ರಾಟೆಕ್ ಸಿಮೆಂಟ್ಸ್ - 13 ಕೋಟಿ
ಗ್ರಾಸಿಂ ಇಂಡಸ್ಟ್ರೀಸ್ - 13 ಕೋಟಿ

2013-14 ರಿಂದ 2016-17 ನಡುವೆ ವಿವಿದ ಕಾರ್ಪೋರೇಟ್ ಸಂಸ್ಥೆಗಳು 637.54 ಕೋಟಿ ರೂಪಾಯಿಯನ್ನು ವಿವಿಧ ಪಕ್ಷಗಳಿಗೆ ನೀಡಿದೆ.

English summary
Twenty-one electoral trusts heavily funded by the country’s top corporates gave more than Rs 290 crore to the BJP in 2016-17, and a mere Rs 16.5 crore to the Congress, according to a new data assessment by electoral watchdog Association of Democratic Reforms (ADR).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X