ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ್‌ನ 30 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿಗೆ ಆಡಳಿತ ವಿರೋಧಿ ಅಲೆ

|
Google Oneindia Kannada News

ಡೆಹ್ರಾಡೂನ್, ಡಿಸೆಂಬರ್ 08: ಉತ್ತರಾಖಂಡದಲ್ಲಿ ನಿರಂತರವಾಗಿ ಮುಖ್ಯಮಂತ್ರಿಯನ್ನು ಬದಲಾಯಿಸುತ್ತಿರುವ ಬಿಜೆಪಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸ್ಪರ್ಧೆ ಸಿಗಲಿದೆ ಎನ್ನಲಾಗಿದೆ.
ಮುಂಬರುವ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 70 ವಿಧಾನಸಭಾ ಕ್ಷೇತ್ರಗಳಲ್ಲಿ 30 ಕ್ಷೇತ್ರಗಳನ್ನು ಗುರುತಿಸಿದೆ. ಅಲ್ಲಿ ಆಡಳಿತ ವಿರೋಧಿ ಅಲೆ ಪ್ರಬಲವಾಗಿದೆ. ಈ 30 ಕ್ಷೇತ್ರಗಳ ಪೈಕಿ 11 ಕಾಂಗ್ರೆಸ್ ಹಾಗೂ 19 ಕ್ಷೇತ್ರ ಬಿಜೆಪಿಗೆ ದಕ್ಕುವ ಸಾಧ್ಯತೆ ಇದೆ.

ಉತ್ತರಾಖಂಡ ಚುನಾವಣೆ; 7 ಸಮಾವೇಶ ನಡೆಸಲಿದ್ದಾರೆ ಪ್ರಧಾನಿ ಮೋದಿಉತ್ತರಾಖಂಡ ಚುನಾವಣೆ; 7 ಸಮಾವೇಶ ನಡೆಸಲಿದ್ದಾರೆ ಪ್ರಧಾನಿ ಮೋದಿ

ಸಮೀಕ್ಷೆಯೊಂದರ ಪ್ರಕಾರ, ಶೇ. 60 ರಷ್ಟು ಬಿಜೆಪಿ ಶಾಸಕರ ವಿರುದ್ಧ ಅಧಿಕಾರ ವಿರೋಧಿ ಅಲೆ ಇದೆ. ಕೇವಲ ಶೇ. 28 ರಷ್ಟು ಜನರು ಶಾಸಕರು ಈ ಪ್ರದೇಶದಲ್ಲಿ ವಿರೋಧಿ ಅಲೆ ಹೊಂದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಶೇ 12 ರಷ್ಟು ಜನರು ಯಾವುದೇ ಉತ್ತರವನ್ನು ನೀಡಲಿಲ್ಲ. ಸಮೀಕ್ಷೆಯಲ್ಲಿ ಈ ಬಾರಿ ಟಿಕೆಟ್ ಹಂಚಿಕೆ ಬಿಜೆಪಿಗೆ ಅತ್ಯಂತ ಕಠಿಣ ನಿರ್ಧಾರವಾಗಲಿದೆ, ಏಕೆಂದರೆ ಶೇ 60ರಷ್ಟು ಶಾಸಕರು ಈ ಪ್ರದೇಶದಲ್ಲಿ ವಿರೋಧವನ್ನು ಹೊಂದಿದ್ದಾರೆ.

BJP Faces Massive Anti-Incumbency In Uttarakhand

ಉತ್ತರಾಖಂಡ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಚುನಾವಣಾ ಮೇಲ್ವಿಚಾರಕ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂಸದರ ಜತೆ ಸಭೆ ನಡೆಸಿದ್ದಾರೆ. ಯಾವ ಭಾಗದಲ್ಲಿ ಪಕ್ಷ ದುರ್ಬಲವಾಗಿದೆ ಎಂಬುದನ್ನು ಗುರುತಿಸಲು ಕೇಳಲಾಗಿದೆ.

ಬಿಜೆಪಿಯು ಉತ್ತರಾಖಂಡದಲ್ಲಿ 60ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತಿದೆ. 'ಅಬ್‌ ಕಿ ಬಾರ್ 60 ಪಾರ್' ಎಂದು ಹೇಳುತ್ತಾ ಪ್ರಯತ್ನ ಮುಂದುವರೆಸಿದೆ. 2017ರ ಚುನಾವಣೆಯಲ್ಲಿ ಬಿಜೆಪಿ 57 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ, ಶೇ.45 ರಷ್ಟು ಮತದಾರರು ಇಂದು ಚುನಾವಣೆ ನಡೆದರೆ, ಬಿಜೆಪಿ ಮತ್ತೆ ಸರ್ಕಾರ ರಚಿಸಬಹುದು ಎಂಬ ಅಭಿಪ್ರಾಯ ಕೊಟ್ಟಿದ್ದಾರೆ. ಆಮ್ ಆದ್ಮಿ ಪಕ್ಷದ ಸ್ಪರ್ಧೆ, ಕಾಂಗ್ರೆಸ್‌ಗೆ ನಷ್ಟವುಂಟು ಮಾಡಲಿದೆ ಎಂದು ಜನರು ತಿಳಿಸಿದ್ದಾರೆ. ಸಮೀಕ್ಷೆಯ ವರದಿಯ ಪ್ರಕಾರ, ಹರೀಶ್ ರಾವತ್ ಅವರು ಸಿಎಂ ಸ್ಥಾನಕ್ಕಾಗಿ ಬಿಜೆಪಿಯ ಅತ್ಯಂತ ಜನಪ್ರಿಯ ಮುಖ ಎನ್ನಲಾಗಿದೆ. ಶೇ. 60ರಷ್ಟು ಜನರು ಬಿಜೆಪಿ ಶಾಸಕರ ವಿರುದ್ಧ ಅಧಿಕಾರ ವಿರೋಧಿ ಮತದಾನ ನಡೆಯಬಹುದು ಎಂದಿದ್ದಾರೆ.

ಉತ್ತರಾಖಂಡದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜನ್ ಕಿ ಬಾತ್ ಮೂಲಕ ಜನರ ನಾಡಿಮಿಡಿತ ಅರಿಯುವ ಯತ್ನ ನಡೆಸಿದೆ. ಸಮೀಕ್ಷೆಯನ್ನು 20 ಸೆಪ್ಟೆಂಬರ್ ನಿಂದ 26 ಸೆಪ್ಟೆಂಬರ್ ವರೆಗೆ ನಡೆಸಲಾಯಿತು. ಈ ಸಮೀಕ್ಷೆಯಲ್ಲಿ ಜನರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು.

ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ, ಉತ್ತರಾಖಂಡದಲ್ಲಿ ಶೇ. 45ರಷ್ಟು ಜನರು ಬಿಜೆಪಿ ಸರ್ಕಾರ ರಚಿಸಲಿದೆ ಎಂದರೆ, ಶೇ. 43ರಷ್ಟು ಮಂದಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದಿದ್ದಾರೆ. ಇನ್ನು ಶೇ. 12 ರಷ್ಟು ಮಂದಿ ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾಗಲಿದೆ ಎಂದಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇಕಡಾ 45 ರಷ್ಟು ಜನರು ಇಂದು ಚುನಾವಣೆ ನಡೆದರೆ, ಬಿಜೆಪಿ ಸರ್ಕಾರ ರಚಿಸಬಹುದು ಎಂದು ಹೇಳಿದ್ದಾರೆ.

ಆದರೆ ಶೇ 43 ರಷ್ಟು ಜನರು ಈ ಬಾರಿ ಬಿಜೆಪಿಯ ಹಾದಿಯಲ್ಲಿ ಹಲವು ತೊಂದರೆಗಳಿವೆ ಹಿಗಾಗಿ ಕಾಂಗ್ರೆಸ್ ಕೂಡ ಸರ್ಕಾರ ರಚಿಸಬಹುದು ಎಂದಿದ್ದಾರೆ. ಅದೇ ಸಮಯದಲ್ಲಿ, ಶೇ. 12 ರಷ್ಟು ಜನರು ಉತ್ತರಾಖಂಡದಲ್ಲಿ ಸ್ಪರ್ಧೆಯು ತ್ರಿಕೋನವಾಗಿದೆ ಮತ್ತು ಆಮ್ ಆದ್ಮಿ ಪಕ್ಷವು ಸರ್ಕಾರವನ್ನು ರಚಿಸಬಹುದು ಎಂದಿದ್ದಾರೆ.

ಸಮೀಕ್ಷೆಯ ಪ್ರಕಾರ, ಉತ್ತರಾಖಂಡದ ಶೇ. 45 ರಷ್ಟು ಜನರು ಪ್ರಸ್ತುತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯ ವಿರುದ್ಧ ಅಧಿಕಾರ ವಿರೋಧಿ ಅಲೆ ಇಲ್ಲ ಎಂದು ನಂಬಿದ್ದಾರೆ. ಶೇ 36ರಷ್ಟು ಜನರು ಸಿಎಂಗೆ ವಿರೋಧವಿದೆ ಎಂದು ನಂಬುತ್ತಾರೆ. ಅದೇ ಸಮಯದಲ್ಲಿ, ಶೇಕಡಾ 19 ರಷ್ಟು ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಸಮೀಕ್ಷೆಯ ಪ್ರಕಾರ, ಶೇಕಡ 55 ರಷ್ಟು ಜನರು ಬಿಜೆಪಿಯ ಉತ್ತರಾಖಂಡ ಸರ್ಕಾರದ ವಿರುದ್ಧ ಅಧಿಕಾರ ವಿರೋಧಿ ಅಲೆ ಇಲ್ಲ ಎಂದು ಹೇಳಿದ್ದಾರೆ. ಶೇ. 32 ರಷ್ಟು ಜನರು ಬಿಜೆಪಿ ಸರ್ಕಾರದ ವಿರುದ್ಧ ಎಂದು ಹೇಳಿದ್ದಾರೆ.

ಶೇ 13 ರಷ್ಟು ಜನರು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ, ಉತ್ತರಾಖಂಡದಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ಮೂರು ಬಾರಿ ಬದಲಾಯಿಸಿದೆ, ಆದರೆ ಜನರ ಕೋಪದ ಹೊರತಾಗಿಯೂ, ಮೋದಿ ಅಲೆ ಮೇಲುಗೈ ಸಾಧಿಸಲಿದೆ.

Recommended Video

AK-203 rifles to be manufactured in India | Oneindia Kannada

English summary
The BJP in Uttarakhand has identified at least 30 Assembly seats out of 70, where anti-incumbency is strong. Of these 30, 11 are with the Congress and 19 with the saffron outfit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X