ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಪರಿಕ್ಕರ್ ರಾಜೀನಾಮೆಗೆ ಬಿಜೆಪಿ ಅನಗತ್ಯ ಒತ್ತಡ ಹೇರುತ್ತಿದೆ"

|
Google Oneindia Kannada News

ಪಣಜಿ, ಅಕ್ಟೋಬರ್ 25: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅನಾರೋಗ್ಯದ ವಿಷಯ ಇಟ್ಟುಕೊಂಡು ಅವರ ಮೇಲೆ ರಾಜೀನಾಮೆಯ ಒತ್ತಡ ಹೇರಲಾಗುತ್ತಿದೆ ಎಂದು ಗೋವಾ ಆರೆಸ್ಸೆಸ್ ನ ಮಾಜಿ ಮುಖಂಡ ಸುಭಾಶ್ ವೆಲಿಂಗ್ಕರ್ ಆರೋಪಿಸಿದ್ದಾರೆ.

ಗೋವಾದಲ್ಲಿ ಮನೋಹರ್ ಬದಲಿಗೆ ಹೊಸ ಸಿಎಂ ಯಾರಾಗಬಹುದು? ಗೋವಾದಲ್ಲಿ ಮನೋಹರ್ ಬದಲಿಗೆ ಹೊಸ ಸಿಎಂ ಯಾರಾಗಬಹುದು?

ಅವರನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಲೇಬೇಕು ಎಂಬ ಒತ್ತಡದಲ್ಲಿರುವ ಕೇಂದ್ರ ಸರ್ಕಾರ ಅವರ ಮೇಲೆ ಅನಗತ್ಯ ಒತ್ತಡ ಹೇರುತ್ತಿದೆ ಎಂದು ವೆಲಿಂಗ್ಕರ್ ಹೇಳಿದ್ದಾರೆ.

ಗೋವಾ: ಮತ್ತೊಮ್ಮೆ ಸರ್ಕಾರ ರಚನೆಗೆ ಮುಂದಾದ ಕಾಂಗ್ರೆಸ್ ಗೋವಾ: ಮತ್ತೊಮ್ಮೆ ಸರ್ಕಾರ ರಚನೆಗೆ ಮುಂದಾದ ಕಾಂಗ್ರೆಸ್

ಅವರು ಅನಾರೋಗ್ಯಕ್ಕೀಡಾಗಿರುವುದು ನಿಜ. ಆದರೆ ಆವರ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿರುವುದರಿಂದ ಅವರ ಆರೋಗ್ಯ ಮತ್ತಷ್ಟು ಹದಗೆಡುವಂತೆ ಬಿಜೆಪಿಯೇ ಮಾಡುತ್ತಿದೆ ಎಂದು ಅವರು ದೂರಿದರು.

BJP demanding Manohar Parrikars resignation: Ex RSS chief

'ಪರಿಕ್ಕರ್ ಅವರ ಆರೋಗ್ಯ ಸದ್ಯಕ್ಕೆ ಸುಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಬದಲಿ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಬಿಜೆಪಿ ಯೋಚಿಸುವುದು ಸರಿಯಲ್ಲ. ಪರಿಕ್ಕರ್ ಅವರ ಸೇವೆ ಗೋವಾಕ್ಕೆ ಎಷ್ಟು ದಿನ ಸಿಗುತ್ತದೆಯೋ ಸಿಗಲಿ' ಎಂದು ಅವರು ಹೇಳಿದ್ದಾರೆ. ಪರಿಕ್ಕರ್ ಅವರ ಮೇಲೆ ಹೀಗೆಯೇ ಒತ್ತಡ ಹೇರುತ್ತಿದ್ದರೆ ಗೋವಾ ವಿಧಾನಸಭೆಯೇ ವಿಸರ್ಜನೆಯಾದರೆ ಅಚ್ಚರಿಯಿಲ್ಲ ಎಂದು ಸಹ ಅವರುಹೇಳಿದ್ದಾರೆ.

ದೆಹಲಿಯ ಏಮ್ಸ್ ನಿಂದ ಗೋವಾದತ್ತ ಮನೋಹರ್ ಪರಿಕರ್ ದೆಹಲಿಯ ಏಮ್ಸ್ ನಿಂದ ಗೋವಾದತ್ತ ಮನೋಹರ್ ಪರಿಕರ್

ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಪರಿಕ್ಕರ್ ಕಳೆದ ಅಕ್ಟೋಬರ್ ನಿಂದ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

English summary
Former Goa Rashtriya Swayamsevak Sangh(RSS) chief Subhash Velingkar said, CM Parrikar's sickness is taking a turn for the worse as unwarranted pressure is being put on him by centre to resume office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X