ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ನಾಮಪತ್ರ ಸಲ್ಲಿಕೆ

By Mahesh
|
Google Oneindia Kannada News

ವಡೋದರಾ,ಏ.9: 'ವಡೋದರಾ ನನ್ನ ಕರ್ಮಭೂಮಿ ನಾನು ಇಲ್ಲಿ ಅನೇಕ ವರ್ಷಗಳ ಕಾಲ ನೆಲೆಸಿದ್ದೇನೆ. ಈಗ ಇಲ್ಲಿನ ಜನರ ಸೇವೆ ಮಾಡುವ ಸದವಕಾಶ ಸಿಕ್ಕಿದೆ' ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನರೇಂದ್ರ ಮೋದಿ ಅವರಿಗೆ ಅನುಮೋದಕ ಬೆಂಬಲಿಗರಾಗಿ ಜನಸಮಾನ್ಯರ ಪ್ರತಿನಿಧಿಯಾಗಿ ಕಿರಣ್ ಮಹೀದಾ ಎಂಬ ಸ್ಥಳೀಯ ಚಾಹ್ ವಾಲ ಹಾಗೂ ರಾಜಮನೆತನ ಸದಸ್ಯರೊಬ್ಬರು ಬಂದಿದ್ದರು. ಮೋದಿ ಅವರ ನಾಮಪತ್ರಕ್ಕೆ ಇಬ್ಬರು ಸಹಿ ಹಾಕಿ ಹರಿಸಿದರು.

ಗುಜರಾತಿನ ಮುಖ್ಯಮಂತ್ರಿ ಅವರ ಈ ನಡೆ ಪಕ್ಷದ ಪ್ರಚಾರಕ್ಕೆ ಇಂಬು ನೀಡಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೋದಿ ಅವರೊಂದಿಗೆ ಬಿಜೆಪಿಯ ಅನಂದಿಬೇನ್ ಪಟೇಲ್ ಅವರು ರೋಡ್ ಶೋ ನಲ್ಲಿ ಪಾಲ್ಗೊಂಡಿದ್ದರು. ಏ.30ರಂದು ನಡೆಯಲಿರುವ ಮತದಾನದಂದು ಎಲ್ಲಾ ಮತದಾರರು ಕಮಲಕ್ಕೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದು ಮೋದಿ ಹೇಳಿದರು.

ವಡೋದರಾದಲ್ಲಿ ಕಾಂಗ್ರೆಸ್ ನಿಂದ ಮದುಸೂಧನ್ ಮಿಸ್ತ್ರಿ, ಆಮ್ ಆದ್ಮಿ ಪಕ್ಷದಿಂದ ಸುನಿಲ್ ಕುಲಕರ್ಣಿ ಕಣದಲ್ಲಿದ್ದಾರೆ. ಮೋದಿ ಅವರು ವಡೋದರಾ ಅಲ್ಲದೆ ವಾರಣಾಸಿಯಿಂದಲೂ ಸ್ಪರ್ಧೆಗಿಳಿದಿದ್ದಾರೆ. ಅಲ್ಲಿ ಕಾಂಗ್ರೆಸ್ಸಿನಿಂದ ಅಜಯ್ ರೈ ಹಾಗೂ ಎಎಪಿಯಿಂದ ಅರವಿಂದ್ ಕೇಜ್ರಿವಾಲ್ ಪೈಪೋಟಿ ನೀಡಲಿದ್ದಾರೆ.

ಮೋದಿ ಬ್ಯಾನರ್ ತೆರವು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗುಜರಾತಿನ ವಡೋದರಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ನಗರದ ವಿವಿಧೆಡೆ ಅಳವಡಿಸಲಾಗಿರುವ ಅವರ ಭಾವಚಿತ್ರವಿರುವ ಸಾವಿರಕ್ಕೂ ಅಧಿಕ ಬ್ಯಾನರ್ ‌ಗಳು ಹಾಗೂ ಪೋಸ್ಟರ್ ಗಳನ್ನು ಬಿಜೆಪಿ ತಾನಾಗಿಯೇ ತೆರವುಗೊಳಿಸಿದೆ.

ಮೋದಿ ಭಾವಚಿತ್ರವಿರುವ ಪೋಸ್ಟರ್ ‌ಗಳು

ಮೋದಿ ಭಾವಚಿತ್ರವಿರುವ ಪೋಸ್ಟರ್ ‌ಗಳು

ಮೋದಿ ಭಾವಚಿತ್ರವಿರುವ ಪೋಸ್ಟರ್ ‌ಗಳು ಪಕ್ಷದ ಸಂದೇಶಗಳನ್ನು ಹೊಂದಿರುವುದರಿಂದ, ಅವರು ನಾಮಪತ್ರ ಸಲ್ಲಿಸಿದ ಬಳಿಕವೂ ಅವುಗಳನ್ನು ಪ್ರದರ್ಶಿಸುವುದನ್ನು ಮುಂದುವರಿಸಿದಲ್ಲಿ, ಅವೆಲ್ಲವನ್ನೂ ಅವರ ವೈಯಕ್ತಿಕ ವೆಚ್ಚವಾಗಿ ಚುನಾವಣಾ ಆಯೋಗವು ಪರಿಗಣಿಸುವ ಸಾಧ್ಯತೆ ಇರುವುದರಿಂದ ಗುಜರಾತಿನ ಬಿಜೆಪಿ ಘಟಕ ಈ ಕ್ರಮ ಕೈಗೊಂಡಿದೆ.

 ಚುನಾವಣಾ ಪ್ರಚಾರದ ವೆಚ್ಚದ ಗರಿಷ್ಠ ಮಿತಿ

ಚುನಾವಣಾ ಪ್ರಚಾರದ ವೆಚ್ಚದ ಗರಿಷ್ಠ ಮಿತಿ

ಲೋಕಸಭೆ ಚುನಾವಣಾ ಕಣದಲ್ಲಿರುವ ಓರ್ವ ಅಭ್ಯರ್ಥಿಯ ಚುನಾವಣಾ ಪ್ರಚಾರದ ವೆಚ್ಚದ ಗರಿಷ್ಠ ಮಿತಿಯನ್ನು ಚುನಾವಣಾ ಆಯೋಗವು 70 ಲಕ್ಷ ರೂ.ಗೆ ನಿಗದಿಪಡಿಸಿದೆ.

ಬಿಜೆಪಿಯು ವಡೋದರಾದಲ್ಲಿ ಮೋದಿ ಪೋಸ್ಟರ್

ಬಿಜೆಪಿಯು ವಡೋದರಾದಲ್ಲಿ ಮೋದಿ ಪೋಸ್ಟರ್

ಬಿಜೆಪಿಯು ವಡೋದರಾದ ಪ್ರಮುಖ ಸ್ಥಳಗಳಲ್ಲಿ 1 ಸಾವಿರಕ್ಕೂ ಅಧಿಕ ಮೋದಿಯ ಭಾವಚಿತ್ರವಿರುವ ಫಲಕಗಳನ್ನು ಅಳವಡಿಸಿದೆ. ಇದಕ್ಕೆ ಬೇಕಾದ ಜಾಗಗಳನ್ನು ಬಿಜೆಪಿಯು 15 ದಿನ ಮುಂಚಿತವಾಗಿಯೇ ಬುಕ್ ಮಾಡಿತ್ತು.

ಮೋದಿ ನಡೆಸಿದ ರೋಡ್ ಶೋ

ವಡೋದರಾದ ಪ್ರಮುಖ ಸ್ಥಳಗಳಲ್ಲಿ ಬಿಜೆಪಿಯು ಪ್ರಧಾನಿ ಅಭ್ಯರ್ಥಿ ಮೋದಿ ನಡೆಸಿದ ರೋಡ್ ಶೋ

English summary
BJP’s Prime Ministerial candidate Narendra Modi has filed nomination from the Vadodara Lok Sabha seat on Wednesday(Apr.9). A tea vendor and member of royal family accompanied Modi during nomination filing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X