ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ ಬಿಜೆಪಿ ಅಭ್ಯರ್ಥಿ ಘೋಷಣೆ ಸಾಧ್ಯತೆ

|
Google Oneindia Kannada News

ನವದೆಹಲಿ, ಜೂ. 21: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಲು ಬಿಜೆಪಿ ಸಂಸದೀಯ ಮಂಡಳಿ ಸಭೆ ಮಂಗಳವಾರ ಸಂಜೆ ದೆಹಲಿಯಲ್ಲಿ ನಡೆಯಲಿದೆ.

ಸದ್ಯ ಬಿಜೆಪಿ ಇನ್ನೂ ರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಬಲ್ಲ ಮೂಲಗಳ ಪ್ರಕಾರ ನವದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿಯ ಹೆಸರನ್ನು ಚರ್ಚಿಸಲಾಗುವುದು ಮತ್ತು ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡಲಾಗುವುದು.

ರಾಷ್ಟ್ರಪತಿ ಚುನಾವಣೆ 2022: ಮೊದಲ ದಿನ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ- ಒಬ್ಬರು ತಿರಸ್ಕಾರರಾಷ್ಟ್ರಪತಿ ಚುನಾವಣೆ 2022: ಮೊದಲ ದಿನ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ- ಒಬ್ಬರು ತಿರಸ್ಕಾರ

ನಾಮನಿರ್ದೇಶನದ ಕೊನೆಯ ದಿನಾಂಕ ಜೂನ್ 29 ಆಗಿದೆ. ಕರ್ನಾಟಕ ಪ್ರವಾಸದ ಎರಡನೇ ದಿನವಾದ ಮಂಗಳವಾರ ಯೋಗ ದಿನಾಚರಣೆಗಾಗಿ ಮೈಸೂರಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಮಂಗಳವಾರ ಸಂಜೆ ವೇಳೆಗೆ ದೆಹಲಿಗೆ ಮರಳಲಿದ್ದಾರೆ. ಯೋಗ ದಿನಾಚರಣೆಗಾಗಿ ಗೃಹ ಸಚಿವ ಅಮಿತ್ ಶಾ ನಾಸಿಕ್‌ಗೆ ಭೇಟಿ ನೀಡಬೇಕಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಸಭೆಯ ಹಿನ್ನೆಲೆಯಲ್ಲಿ ಶಾ ಈಗ ದೆಹಲಿಯಲ್ಲಿರುತ್ತಾರೆ ಎಂದು ತಿಳಿದು ಬಂದಿದೆ.

 Oneindia Explainer: ಹೊಸ ರಾಷ್ಟ್ರಪತಿ ಆಯ್ಕೆ ಹೇಗೆ? ಏನಿದು electoral-college? Oneindia Explainer: ಹೊಸ ರಾಷ್ಟ್ರಪತಿ ಆಯ್ಕೆ ಹೇಗೆ? ಏನಿದು electoral-college?

ನೋಯ್ಡಾ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆಯಲ್ಲಿ ನಡ್ಡಾ

ನೋಯ್ಡಾ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆಯಲ್ಲಿ ನಡ್ಡಾ

ಪಕ್ಷದ ಸಂಸದೀಯ ಮಂಡಳಿಯ ಏಳು ಸದಸ್ಯರಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ. ಎಲ್. ಸಂತೋಷ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಇದ್ದಾರೆ. ನಡ್ಡಾ ಅವರು ಮಂಗಳವಾರ ನೋಯ್ಡಾ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದ ನಂತರ ಅವರು ದೆಹಲಿಯಲ್ಲಿರುತ್ತಾರೆ.

ಚುನಾವಣಾ ನಿರ್ವಹಣಾ ಸಮಿತಿ ಗಜೇಂದ್ರ ಶೇಖಾವತ್ ಅಧ್ಯಕ್ಷ

ಚುನಾವಣಾ ನಿರ್ವಹಣಾ ಸಮಿತಿ ಗಜೇಂದ್ರ ಶೇಖಾವತ್ ಅಧ್ಯಕ್ಷ

ಯೋಗ ದಿನದಂದು ಶಿವರಾಜ್ ಸಿಂಗ್ ಚೌಹಾಣ್‌ ಕಡ ಕಾರ್ಯಕ್ರಮಗಳನ್ನು ಹೊಂದಿದ್ದು, ಮಧ್ಯಾಹ್ನದ ನಂತರ ದೆಹಲಿಗೆ ಬರುವ ಸಾಧ್ಯತೆಯಿದೆ. ಮಧ್ಯಾಹ್ನದ ನಂತರ ಇತರ ನಾಯಕರು ದೆಹಲಿಗೆ ಬರುವ ನಿರೀಕ್ಷೆಯಿದೆ. ಬಿಜೆಪಿ ಈಗಾಗಲೇ 14 ಸದಸ್ಯರ ಅಧ್ಯಕ್ಷೀಯ ಚುನಾವಣಾ ನಿರ್ವಹಣಾ ಸಮಿತಿಯನ್ನು ರಚಿಸಿದ್ದು, ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಅವರು ಸಂಚಾಲಕರಾಗಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸಿ. ಟಿ. ರವಿ ಮತ್ತು ವಿನೋದ್ ತಾವ್ಡೆ ಸಹ ಸಂಚಾಲಕರಾಗಿದ್ದಾರೆ. ಸಮಿತಿಯು ಭಾನುವಾರ ತನ್ನ ಮೊದಲ ಸಭೆ ನಡೆಸಿದ್ದು, ಸಂಸದೀಯ ಮಂಡಳಿ ಸಭೆಯ ನಂತರ ಸಮಿತಿಯ ಮುಂದಿನ ಸಭೆ ಜೂನ್ 22 ರಂದು ನಡೆಯಲಿದೆ.

ಸಂಸದ ಇಮ್ತಿಯಾಜ್ ಜಲೀಲ್‌ಗೆ ನಿಯೋಜನೆ

ಸಂಸದ ಇಮ್ತಿಯಾಜ್ ಜಲೀಲ್‌ಗೆ ನಿಯೋಜನೆ

ಮುಂಬರುವ ರಾಷ್ಟ್ರಪತಿ ಚುನಾವಣೆಯ ಕುರಿತು ಚರ್ಚಿಸಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿಯನ್ನು ಮಂಗಳವಾರ ದೆಹಲಿಯಲ್ಲಿ ಸಭೆಗೆ ಆಹ್ವಾನಿಸಿದ್ದಾರೆ. ಈ ರೀತಿಯ ಆಹ್ವಾನಕ್ಕಾಗಿ ಓವೈಸಿ ಪವಾರ್ ಅವರಿಗೆ ಧನ್ಯವಾದ ಅರ್ಪಿಸಿರುವ ಒವೈಸಿ ಸಭೆಯಲ್ಲಿ ಎಐಎಂಐಎಂ ಪ್ರತಿನಿಧಿಸಲು ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್ ಅವರನ್ನು ನಿಯೋಜಿಸಿದ್ದಾರೆ. ಮುಂಬರುವ ರಾಷ್ಟ್ರಪತಿ ಚುನಾವಣೆಯ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಎನ್‌ಸಿಪಿ ಜೂನ್ 21ರಂದು ವಿರೋಧ ಪಕ್ಷಗಳ ಸಭೆಯನ್ನು ಕರೆದಿದೆ.

ನವದೆಹಲಿಯಲ್ಲಿ ವಿರೋಧ ಪಕ್ಷಗಳ ಸಭೆ

ನವದೆಹಲಿಯಲ್ಲಿ ವಿರೋಧ ಪಕ್ಷಗಳ ಸಭೆ

ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳು ತನ್ನ ಆಯ್ಕೆಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಮಂಗಳವಾರ ಕೊಠಡಿ- 1, ಸಂಸತ್ ಭವನದ ಅನೆಕ್ಸ್ ಎಕ್ಸ್ಟೆನ್ಸ್‌ ನವದೆಹಲಿಯಲ್ಲಿ 2.30 ಗಂಟೆಗೆ ಎನ್‌ಸಿಪಿ ವಿರೋಧ ಪಕ್ಷಗಳ ಸಭೆಯನ್ನುಕರೆಯಲಾಗಿದೆ. ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ. ಕಾಕಾತಾಳಿಯ ಎಂಬಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಇಲ್ಲಿ ತನ್ನ ಸಂಸದೀಯ ಮಂಡಳಿ ಸಭೆಯನ್ನೂ ನಡೆಸಲಿದೆ.

Recommended Video

ಮೋದಿ ಮತ್ತು ಮಹಿಳೆ ನಡುವಿನ ಮಾತುಕತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ | Oneindia Kannada

English summary
The BJP Parliamentary Board Meeting will be held in Delhi on Tuesday evening to announce the candidate in the wake of the presidential election on July 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X