ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ರಾಜ್ಯಗಳ ಉಸ್ತುವಾರಿಗಳ ಸಭೆ ಕರೆದ ಬಿಜೆಪಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25; ಬಿಜೆಪಿ ಎಲ್ಲಾ ರಾಜ್ಯಗಳ ಉಸ್ತುವಾರಿಗಳ ಸಭೆಯನ್ನು ಸೆಪ್ಟೆಂಬರ್ 27ರಂದು ಆಯೋಜನೆ ಮಾಡಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಈ ಸಭೆಗೂ ಮುನ್ನ ಎಲ್ಲಾ ರಾಜ್ಯಗಳ ಉಸ್ತುವಾರಿಗಳು, ಕೆಲವು ರಾಷ್ಟ್ರೀಯ ನಾಯಕರು ತಮಗೆ ಉಸ್ತುವಾರಿ ವಹಿಸಿರುವ ರಾಜ್ಯಗಳಿಗೆ ಭೇಟಿ ನೀಡಿ, ಸಂಘಟನಾತ್ಮಕ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದ್ದಾರೆ.

ಒಬಿಸಿ ಮತಬುಟ್ಟಿಗೆ ಕೈಹಾಕಲು ಸಿದ್ದವಾದ ಬಿಜೆಪಿ- ಹಾಲಿ ಮಾಜಿ ಸಚಿವರಿಗೆ ಹೊಣೆ ಒಬಿಸಿ ಮತಬುಟ್ಟಿಗೆ ಕೈಹಾಕಲು ಸಿದ್ದವಾದ ಬಿಜೆಪಿ- ಹಾಲಿ ಮಾಜಿ ಸಚಿವರಿಗೆ ಹೊಣೆ

ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಉಸ್ತುವಾರಿಗಳ ಜೊತೆ ಬಿ. ಎಲ್. ಸಂತೋಷ್ ಮಾತುಕತೆ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ಇತರ ನಾಯಕರು ಸಭೆಯಲ್ಲಿ ಪಾಳ್ಗೊಳ್ಳುವ ನಿರೀಕ್ಷೆಯೂ ಇದೆ.

ಲೋಕಸಭಾ ಚುನಾವಣೆ: ಕೇರಳದಲ್ಲಿ ಬಿಜೆಪಿ ಪ್ರಚಾರಕ್ಕೆ ಜೆಪಿ ನಡ್ಡಾ ಅಡಿಗಲ್ಲು ಲೋಕಸಭಾ ಚುನಾವಣೆ: ಕೇರಳದಲ್ಲಿ ಬಿಜೆಪಿ ಪ್ರಚಾರಕ್ಕೆ ಜೆಪಿ ನಡ್ಡಾ ಅಡಿಗಲ್ಲು

ಜೆ. ಪಿ. ನಡ್ಡಾ ತಮಿಳುನಾಡಿಗೆ ಭೇಟಿ ನೀಡಿದ್ದರು. ಎರಡು ದಿನದ ಭೇಟಿಯ ವೇಳೆ ಅವರು ಪಕ್ಷದ ವಿವಿಧ ನಾಯಕರನ್ನು ಭೇಟಿಯಾಗಿದ್ದರು. ಬೇರೆ-ಬೇರೆ ಕ್ಷೇತ್ರದ ಗಣ್ಯರನ್ನು ಸಹ ಭೇಟಿ ಮಾಡಿ ಸಂವಾದ ನಡೆಸಿದ್ದರು. ಕೆಲವು ಕಡೆ ಸಮಾವೇಶವನ್ನು ಉದ್ದೇಶಿಸಿ ಸಹ ಅವರು ಮಾತನಾಡಿದ್ದರು.

'ಮೋದಿಯನ್ನು ಟೀಕಿಸಿದರೆ ರಾಷ್ಟ್ರವನ್ನೇ ಟೀಕಿಸಿದಂತೆ' ಜೆಪಿ ನಡ್ಡಾ'ಮೋದಿಯನ್ನು ಟೀಕಿಸಿದರೆ ರಾಷ್ಟ್ರವನ್ನೇ ಟೀಕಿಸಿದಂತೆ' ಜೆಪಿ ನಡ್ಡಾ

ಚುನಾವಣಾ ರಾಜ್ಯಗಳಿಗೆ ಆದ್ಯತೆ

ಚುನಾವಣಾ ರಾಜ್ಯಗಳಿಗೆ ಆದ್ಯತೆ

2024ರ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಈ ಸಭೆಯನ್ನು ಆಯೋಜನೆ ಮಾಡಲಾಗುತ್ತಿದೆ. ಆದರೆ ಈ ವರ್ಷದಲ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗುತ್ತದೆ. ಡಿಸೆಂಬರ್ ವೇಳೆಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.

ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೆಪ್ಟೆಂಬರ್ 20 ರಿಂದ ಎರಡು ದಿನ ಗುಜರಾತ್ ಪ್ರವಾಸ ಕೈಗೊಂಡಿದ್ದರು. ವಿಧಾನಸಭೆ ಚುನಾವಣೆಗೆ ಪಕ್ಷದ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದ್ದರು. ಗುಜರಾತ್‌ ಚುನಾವಣೆಯಲ್ಲಿ ಎಎಪಿ ಬಿಜೆಪಿಗೆ ಪ್ರಮುಖ ಎದುರಾಳಿಯಾಗುವ ಸಾಧ್ಯತೆಯೂ ಇದೆ.

ವಿವಿಧ ಉದ್ಯಮದ ಗಣ್ಯರ ಭೇಟಿ

ವಿವಿಧ ಉದ್ಯಮದ ಗಣ್ಯರ ಭೇಟಿ

ಎಲ್ಲಾ ರಾಜ್ಯಗಳ ಉಸ್ತುವಾರಿಗಳು ರಾಜ್ಯಗಳಿಗೆ ಭೇಟಿ ನೀಡಿದಾಗ ಪಕ್ಷದ ಪದಾಧಿಕಾರಿಗಳ ಜೊತೆ ಮಾತ್ರ ಸಭೆಯನ್ನು ನಡೆಸುವುದಿಲ್ಲ. ರೈತರು, ಕಾರ್ಮಿಕರು, ಬುಡಕಟ್ಟು ಸಮುದಾಯದವರು, ವಿವಿಧ ಉದ್ಯಮಗಳ ಗಣ್ಯರ ಜೊತೆ ಸಹ ಸಭೆಯನ್ನು ನಡೆಸಿ ಸಂವಾದ ನಡೆಸಲಿದ್ದಾರೆ.

ಗುಜರಾತ್ ಪ್ರವಾಸ ಕೈಗೊಂಡಿದ್ದ ಜೆ. ಪಿ. ನಡ್ಡಾ ರೈತರು, ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜಯಗಳಿಸಿದ ಹಲವು ಅಭ್ಯರ್ಥಿಗಳ ಜೊತೆ ಸಭೆ ನಡೆಸಿದ್ದರು. ಅಲ್ಲದೇ ಸರ್ಕಾರದ ಯೋಜನೆಗಳ ಫಲಾನುಭವಿಗಳ ಜೊತೆಗೂ ಮಾತುಕತೆ ನಡೆಸಿದ್ದರು.

ಸಂಘಟನಾತ್ಮಕ ಬದಲಾವಣೆ ಮಾಡಿದ್ದ ಪಕ್ಷ

ಸಂಘಟನಾತ್ಮಕ ಬದಲಾವಣೆ ಮಾಡಿದ್ದ ಪಕ್ಷ

ಸಂಘಟನಾತ್ಮಕವಾಗಿ ಬಿಜೆಪಿ ಹಲವು ಬದಲಾವಣೆಗಳನ್ನು ಮಾಡಿತ್ತು. 14 ರಾಜ್ಯಗಳಿಗೆ ಪಕ್ಷದ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ಬದಲಾವಣೆ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಆದೇಶ ಹೊರಡಿಸಿದ್ದರು.

ಬಿಹಾರ, ಛತ್ತೀಸ್‌ಗಢ, ಹರ್ಯಾಣ, ಜಾರ್ಖಂಡ್, ಕೇರಳ, ಮಧ್ಯ ಪ್ರದೇಶ, ಪಂಜಾಬ್, ತೆಲಂಗಾಣ, ಚಂಢೀಗಢ್, ರಾಜಸ್ಥಾನ, ತ್ರಿಪುರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು. ಇವುಗಳಲ್ಲಿ ಕೆಲವು ರಾಜ್ಯಗಳಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಕೇಂದ್ರ ಚುನಾವಣಾ ಸಮಿತಿಯಲ್ಲೂ ಬದಲಾವಣೆ

ಕೇಂದ್ರ ಚುನಾವಣಾ ಸಮಿತಿಯಲ್ಲೂ ಬದಲಾವಣೆ

ಕಳೆದ ತಿಂಗಳು ಬಿಜೆಪಿ ಪಕ್ಷದ ಅತ್ಯುನ್ನತ ಸಮಿತಿಯಾದ ಕೇಂದ್ರ ಚುನಾವಣಾ ಮಂಡಳಿಯಲ್ಲಿಯೂ ಹಲವು ಬದಲಾವಣೆ ಮಾಡಿತ್ತು. ಕೇಂದ್ರ ಸಚಿವ ನಿತಿನ ಗಡ್ಕರಿ ಮುಂತಾದವರನ್ನು ಸಮಿತಿಯಿಂದ ಕೈ ಬಿಡಲಾಗಿತ್ತು. ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಹೊಸಬರಿಗೆ ಸಮಿತಿಯ ಸದಸ್ಯರಾಗಿ ಅವಕಾಶ ನೀಡಲಾಗಿತ್ತು.

ಈ ವರ್ಷದ ಅಂತ್ಯ ಮತ್ತು ಮುಂದಿನ ವರ್ಷ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಆದ್ದರಿಂದ ರಾಜ್ಯಗಳ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ.

English summary
The Bharatiya Janata Party (BJP) called party state in-charges meeting on September 27th. Meeting chaired by B. L. Santhosh national general secretary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X