ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವರು ಒಪ್ಪುವುದಿಲ್ಲ, ಅವರು ಬಿಡುವುದಿಲ್ಲ ಏನಿದು CAA-NRC ಹೋರಾಟ?

|
Google Oneindia Kannada News

ದೆಹಲಿ, ಜನವರಿ.04: ಭಾರತದಲ್ಲಿ ಸದ್ಯಕ್ಕೆ ಸದ್ದು ಾಡುತ್ತಿರುವುದು ಇದೊಂದೇ ವಿಷಯ. ಕೇಂದ್ರ ಸರ್ಕಾರ ಬಿಡುತ್ತಿಲ್ಲ, ವಿರೋಧ ಪಕ್ಷಗಳು ಒಪ್ಪುತ್ತಿಲ್ಲ. ಇಬ್ಬರ ಕಿತ್ತಾಟದಲ್ಲಿ ಜನ ಸಾಮಾನ್ಯರಿಗೆ ಯಾವುದೂ ಅರ್ಥವೇ ಆಗುತ್ತಿಲ್ಲ.

ಇದು ಸದ್ಯಕ್ಕೆ ಭಾರತದಲ್ಲಿ ಸೃಷ್ಟಿಯಾಗಿರುವ ಗೊಂದಲದ ವಿಚಾರ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹಠಕ್ಕೆ ಬಿದ್ದಿದೆ. ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಿರುಗಿ ಬೀಳುತ್ತಿವೆ.

ನರೇಂದ್ರ ಮೋದಿ ಭಾರತದ ಪ್ರಧಾನಿಯೇ, ಪಾಕಿಸ್ತಾನದ ರಾಯಭಾರಿಯೇ?ನರೇಂದ್ರ ಮೋದಿ ಭಾರತದ ಪ್ರಧಾನಿಯೇ, ಪಾಕಿಸ್ತಾನದ ರಾಯಭಾರಿಯೇ?"

ದಿನ ಬೆಳಗಾದರೆ ಪ್ರತಿಭಟನೆ, ಹೋರಾಟ, ಧಿಕ್ಕಾರ, ಲಾಠಿಚಾರ್ಜ್, ಇಂಥ ವಿಷಯಗಳೇ ಸದ್ದು ಮಾಡುತ್ತಿವೆ. ಶನಿವಾರ ಕೂಡಾ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿಚಾರವೇ ತೀವ್ರ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಸಿಎಎ ಹಾಗೂ ಎನ್ಆರ್ ಸಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಹೊಸ ಅಭಿಯಾನವನ್ನೇ ನಡೆಸುತ್ತಿದೆ.

ಕೇಂದ್ರ ಸರ್ಕಾರದಿಂದ ಜನಜಾೃತಿ ಅಭಿಯಾನ ಆರಂಭ

ಕೇಂದ್ರ ಸರ್ಕಾರದಿಂದ ಜನಜಾೃತಿ ಅಭಿಯಾನ ಆರಂಭ

ದೇಶದಲ್ಲಿ ತೀವ್ರ ಗೊಂದಲಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ಕುರಿತು ಮಾಹಿತಿ ನೀಡಲು ಕೇಂದ್ರ ಸರ್ಕಾರವೇ ಅಭಿಯಾನವನ್ನು ಆರಂಭಿಸಿದೆ. ದೇಶಾದ್ಯಂತ 500 ಕಡೆಗಳಲ್ಲಿ ಸಿಎಎ ಹಾಗೂ ಎನ್ಆರ್ ಸಿ ಪರ ಜನಜಾಗೃತಿ ಮೂಡಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ಅಭಿಯಾನವನ್ನು ನಡೆಸಿತು.

ಎಲ್ಲ ರಾಜ್ಯಗಳಿಗೆ ಸಿಎಎ ಅನ್ವಯ ಎಂದ ಜೀತೇಂದ್ರ ಸಿಂಗ್

ಎಲ್ಲ ರಾಜ್ಯಗಳಿಗೆ ಸಿಎಎ ಅನ್ವಯ ಎಂದ ಜೀತೇಂದ್ರ ಸಿಂಗ್

ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ. ಜಮ್ಮು-ಕಾಶ್ಮೀರ ಸೇರಿದಂತೆ ಎಲ್ಲ ರಾಜ್ಯಗಳಿಗೂ ಸಿಎಎ ಅನ್ವಯವಾಗುತ್ತದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದ ಪ್ರಿಯಾಂಕಾ ವಾದ್ರಾ

ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದ ಪ್ರಿಯಾಂಕಾ ವಾದ್ರಾ

ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ನಿವಾಸಕ್ಕೆ ಪ್ರಿಯಾಂಕಾ ವಾದ್ರಾ ಭೇಟಿ ನೀಡಿದರು. ಮುಜಾಫರ್ ನಗರದ ನೂರಾ ಎಂಬ ವ್ಯಕ್ತಿಯ ಮನೆಗೆ ಭೇಟಿ ನೀಡಿದ ಪ್ರಿಯಾಂಕಾ, ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಇನ್ನೊಂದೆಡೆ ಪೊಲೀಸರು ನಡೆಸಿ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ರುಖೈಯಾ ಪರ್ವೀನಾ ಮನೆಗೂ ಪ್ರಿಯಾಂಕಾ ವಾದ್ರಾ ಭೇಟಿ ನೀಡಿದರು.

ಸಿಎಎ ಪ್ರತಿಭಟನೆಗೆ ಹೊರಟ ಅಧಿಕಾರಿ ಪೊಲೀಸ್ ವಶಕ್ಕೆ

ಸಿಎಎ ಪ್ರತಿಭಟನೆಗೆ ಹೊರಟ ಅಧಿಕಾರಿ ಪೊಲೀಸ್ ವಶಕ್ಕೆ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ ವಿರುದ್ಧ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ವಿರೋಧ ವ್ಯಕ್ತಪಡಿಸಿದ್ದರು. ಸಿಎಎ ವಿರುದ್ಧದ ಹೋರಾಟಕ್ಕೆ ತೆರಳುತ್ತಿದ್ದ ವೇಳೆ ಅವರನ್ನು ಉತ್ತರ ಪ್ರದೇಶದ ಗಡಿಭಾಗದಲ್ಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಎ-ಎನ್ಆರ್ ಸಿ ವಿರುದ್ಧ ಒಗ್ಗೂಡಲು ಪತ್ರ

ಸಿಎಎ-ಎನ್ಆರ್ ಸಿ ವಿರುದ್ಧ ಒಗ್ಗೂಡಲು ಪತ್ರ

ಒಂದು ಕಡೆ ಕೇಂದ್ರ ಸರ್ಕಾರ ಜನಜಾಗೃತಿ ನಡೆಸುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಸಿಎಎ ಹಾಗೂ ಎನ್ಆರ್ ಸಿ ವಿರುದ್ಧದ ಹೋರಾಟಕ್ಕೆ ಕೈಜೋಡಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 11 ರಾಜ್ಯಗಳ ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಿಹಾರ ಸಿಎಂ ನಿತೀಶ್ ಕುಮಾರ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಮಧ್ಯಪ್ರದೇಶ ಸಿಎಂ ಕಮಲ್ ನಾಥ್, ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಪುದುಚೇರಿ ಸಿಎಂ ನಾರಾಯಣ ಸ್ವಾಮಿ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ.

English summary
BJP Awareness Programme About Citizenship Amendment Act For Peoples. Other Side Leaders Rise A Voice To Oppose Central Government Decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X