ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ರಾಜ್ಯಗಳ ವಿಧಾನಸಭೆ ಚುನಾವಣೆ; ಬಿಜೆಪಿ ಉಸ್ತುವಾರಿಗಳ ಪಟ್ಟಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 08; ಬಿಜೆಪಿ 2022ರಲ್ಲಿ ನಡೆಯುವ 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ. ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನೇಮಕಗೊಂಡಿದ್ದಾರೆ.

ಬುಧವಾರ ಬಿಜೆಪಿ ವಿವಿಧ ಕೇಂದ್ರ ಸಚಿವರನ್ನು ವಿಧಾನಸಭೆ ಚುನಾವಣೆ ಉಸ್ತುವಾರಿ, ಸಹ ಉಸ್ತುವಾರಿಯಾಗಿ ನೇಮಕ ಮಾಡಿದೆ. ಈ ಮೂಲಕ ಅಧಿಕೃತವಾಗಿ ವಿಧಾನಸಭೆ ಚುನಾವಣೆ ಸಿದ್ಧತೆ ಆರಂಭಿಸಿದೆ. ಸಚಿವರಿಗೆ ಪಕ್ಷದ ಪರವಾಗಿ ಕೆಲಸ ಮಾಡುವ ಹೊಣೆಗಾರಿಕೆಯನ್ನು ನೀಡಿದೆ.

ಉತ್ತರ ಪ್ರದೇಶ ಚುನಾವಣೆ; ಶೋಭಾ ಕರಂದ್ಲಾಜೆಗೆ ಮಹತ್ವದ ಹುದ್ದೆ ಉತ್ತರ ಪ್ರದೇಶ ಚುನಾವಣೆ; ಶೋಭಾ ಕರಂದ್ಲಾಜೆಗೆ ಮಹತ್ವದ ಹುದ್ದೆ

ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ್ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 2022ರ ಆರಂಭದಲ್ಲಿಯೇ ವಿಧಾನಸಭೆ ಚುನಾವಣೆಗಳು ಎದುರಾಗಲಿವೆ.

ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಗೆಲುವಿಗೆ ದಲಿತ, ಬ್ರಾಹ್ಮಣರ ಮೇಲಿನ ದಬ್ಬಾಳಿಕೆ ಅಸ್ತ್ರ ಪ್ರಯೋಗಉತ್ತರ ಪ್ರದೇಶದಲ್ಲಿ ಬಿಎಸ್ಪಿ ಗೆಲುವಿಗೆ ದಲಿತ, ಬ್ರಾಹ್ಮಣರ ಮೇಲಿನ ದಬ್ಬಾಳಿಕೆ ಅಸ್ತ್ರ ಪ್ರಯೋಗ

430 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಉಸ್ತುವಾರಿಯಾಗಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಐವರು ಸಹ ಉಸ್ತುವಾರಿಗಳು ನೇಮಕವಾಗಿದ್ದಾರೆ. ಆರು ವಿಭಾಗವಾರು ಉಸ್ತುವಾರಿಗಳನ್ನು ಸಹ ಬಿಜೆಪಿ ನೇಮಕ ಮಾಡಿದೆ.

ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಬೃಹತ್ ಒಬಿಸಿ ಅಭಿಯಾನಕ್ಕೆ ಬಿಜೆಪಿ ಸಜ್ಜುಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಬೃಹತ್ ಒಬಿಸಿ ಅಭಿಯಾನಕ್ಕೆ ಬಿಜೆಪಿ ಸಜ್ಜು

ಉತ್ತರ ಪ್ರದೇಶ ರಾಜ್ಯಕ್ಕೆ ಉಸ್ತುವಾರಿ

ಉತ್ತರ ಪ್ರದೇಶ ರಾಜ್ಯಕ್ಕೆ ಉಸ್ತುವಾರಿ

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಉತ್ತರ ಪ್ರದೇಶ ಚುನಾವಣಾ ಉಸ್ತುವಾರಿಯಾಗಿದ್ದಾರೆ. ಇವರ ಜೊತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಅನುರಾಗ್ ಠಾಕೂರ್, ಅರ್ಜುನ್ ರಾಮ್ ಮೇಘ್ವಾಲ್, ಅನ್ನಪ್ರಾಣಾ ದೇವಿ, ಸರೋಜ್ ಪಾಂಡೆ ಸಹ ಉಸ್ತುವಾರಿಗಳಾಗಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಉತ್ತರಾಖಂಡ್ ರಾಜ್ಯಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಪಶ್ಚಿಮ ಬಂಗಾಳದ ಎಂಪಿ ಲಾಕೆಟ್ ಚಟರ್ಜಿ, ರಾಷ್ಟ್ರೀಯ ವಕ್ತಾರ ಸರ್ದಾರ್ ಆರ್. ಪಿ. ಸಿಂಗ್ ಸಹ ಉಸ್ತುವಾರಿಗಳಾಗಿ ಪ್ರಹ್ಲಾದ್ ಜೋಶಿ ಜೊತೆಗೆ ಇರಲಿದ್ದಾರೆ.

ಪಂಜಾಬ್ ರಾಜ್ಯದ ಉಸ್ತುವಾರಿಗಳು

ಪಂಜಾಬ್ ರಾಜ್ಯದ ಉಸ್ತುವಾರಿಗಳು

ಐದು ರಾಜ್ಯಗಳ ಪೈಕಿ ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ರಾಜ್ಯದ ಉಸ್ತುವಾರಿಯಾಗಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಮೀನಾಕ್ಷಿ ಲೇಖಿ, ಲೋಕಸಭಾ ಸದಸ್ಯ ವಿನೋದ್ ಚಾವ್ಲಾ ಪಂಜಾಬ್‌ನ ಸಹ ಉಸ್ತುವಾರಿಗಳು.

ಮಣಿಪುರ ಮತ್ತು ಗೋವಾ

ಮಣಿಪುರ ಮತ್ತು ಗೋವಾ

ಮಣಿಪುರ ವಿಧಾನಸಭೆ ಚುನಾವಣೆಗೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಉಸ್ತುವಾರಿಯಾಗಿದ್ದಾರೆ. ಸಚಿವಾರದ ಪ್ರತಿಭಾ ಭೂಮಿಕ ಮತ್ತು ಅಸ್ಸಾಂನ ಸಚಿವರಾದ ಅಶೋಕ್‌ ಸಿಂಘಾಲ್ ಮಣಿಪುರಕ್ಕೆ ಸಹ ಉಸ್ತುವಾರಿಗಳು.

ಗೋವಾ ರಾಜ್ಯಕ್ಕೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉಸ್ತುವಾರಿಯಾಗಿದ್ದಾರೆ. ಕೇಂದ್ರ ಸಚಿವ ಜಿ. ಕೃಷ್ಣಾ ರೆಡ್ಡಿ, ದರ್ಶನ್ ಸಹ ಉಸ್ತುವಾರಿಗಳಾಗಿದ್ದಾರೆ.

ಅಧಿಕಾರ ಪಡೆಯಲು ಪ್ರಯತ್ನ

ಅಧಿಕಾರ ಪಡೆಯಲು ಪ್ರಯತ್ನ

ಬಿಜೆಪಿ ಸದ್ಯ ಅಧಿಕಾರದಲ್ಲಿರುವ ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡ್‌ನಲ್ಲಿ ಮರಳಿ ಅಧಿಕಾರ ಪಡೆಯಬೇಕು ಎಂದು ತಂತ್ರ ರೂಪಿಸುತ್ತಿದೆ. ಪಂಜಾಬ್‌ನಲ್ಲಿಯೂ ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದೆ. ಕೃಷಿ ಕಾಯ್ದೆ ವಿರೋಧಿಸಿ ಅಕಾಲಿ ದಳ ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದಿದೆ. ಆಮ್‌ ಆದ್ಮಿ ಪಕ್ಷ ಪಂಬಾನ್‌ನಲ್ಲಿ ಚುನಾವಣಾ ಸಿದ್ಧತೆ ಚುರುಕುಗೊಳಿಸಿದೆ.

ಕೆಲವು ದಿನಗಳ ಹಿಂದೆ ನಡೆದ ಸಿ-ವೋಟರ್-ಎಬಿಪಿ ಚುನಾವಣಾ ಪೂರ್ವ ಸಮೀಕ್ಷೆ ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡ್‌ನಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ಪ್ರದೇಶದಲ್ಲಿ 50-60 ಸೀಟು ಕಳೆದುಕೊಳ್ಳಬಹುದು ಎಂದು ಅಂದಾಜಿಸಿದೆ.

ಉತ್ತರಾಖಂಡ್‌ನಲ್ಲಿಯೂ ಬಿಜೆಪಿ ಸೀಟು ಕಳೆದುಕೊಂಡರು ಸರ್ಕಾರ ರಚನೆ ಮಾಡಲಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

English summary
The BJP has appointed in-charge and co-incharge for the Uttar Pradesh Punjab, Uttarakhand, Manipur and Goa assembly elections 2022. Here are the full list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X