ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬೂಸಾ ಸುದ್ದಿ' ಹಂಚಿಕೊಳ್ಳುವುದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಯಾರೂ ಕಡಿಮೆ ಇಲ್ಲ: ಆಕ್ಸ್ ಫರ್ಡ್ ಅಧ್ಯಯನ

By ಅನಿಲ್ ಆಚಾರ್
|
Google Oneindia Kannada News

ಫೇಸ್ ಬುಕ್, ವಾಟ್ಸ್ ಅಪ್ ಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಒಂದೇ ಪ್ರಮಾಣದಲ್ಲಿ 'ಬೂಸಾ ಸುದ್ದಿ' (ಜಂಕ್ ನ್ಯೂಸ್) ಹಂಚಿಕೊಳ್ಳಲಾಗುತ್ತದೆ. ಹಾಗೆ ನೋಡಿದರೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ವೃತ್ತಿಪರ ಸುದ್ದಿ ಮೂಲವನ್ನೇ ಹಂಚಿಕೊಳ್ಳುತ್ತವೆ ಎಂಬ ಸಂಗತಿಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಕಂಡುಹಿಡಿದಿದೆ.

ಬಿಜೆಪಿಯು ಹಂಚಿಕೊಳ್ಳುವ ಮೂರು ಫೋಟೋದಲ್ಲಿ ಒಂದು 'ವಿಭಜಕ ಹಾಗೂ ಪೂರ್ವಗ್ರಹ' ಉದ್ದೇಶದಿಂದ ಕೂಡಿರುತ್ತದೆ. ಅದನ್ನೇ ಕಾಂಗ್ರೆಸ್ ಗೆ ಅನ್ವಯಿಸಿ ಹೇಳುವುದಾದರೆ ನಾಲ್ಕರಲ್ಲಿ ಒಂದು, ಹಾಗೂ ಎಸ್ ಪಿ ಮತ್ತು ಬಿಎಸ್ ಪಿಯ ಹತ್ತರಲ್ಲಿ ಒಂದು ಫೋಟೋ ಅಂಥದ್ದಾಗಿರುತ್ತದೆ ಎಂದು ಸೋಮವಾರ ಹೊರಬಂದಿರುವ ವರದಿಯಲ್ಲಿ ಹೇಳಲಾಗಿದೆ.

ಮೋದಿ, ಮೋದಿ ಎಂದು ಕೂಗಿದವರ ಕೈಕುಲುಕಿದ ಪ್ರಿಯಾಂಕಾ: ವಿಡಿಯೋ ವೈರಲ್ಮೋದಿ, ಮೋದಿ ಎಂದು ಕೂಗಿದವರ ಕೈಕುಲುಕಿದ ಪ್ರಿಯಾಂಕಾ: ವಿಡಿಯೋ ವೈರಲ್

ಆಕ್ಸ್ ಫರ್ಡ್ ಅಂತರ್ಜಾಲ ಸಂಸ್ಥೆ ಸಂಶೋಧಕಿ ವಿದ್ಯಾ ನಾರಾಯಣನ್ ಪ್ರಕಾರ, ಪಿತೂರಿ ಒಳಗೊಂಡ ಮಾಹಿತಿಗೆ ಸಂಬಂಧಿಸಿದ ಸಂಗತಿಗಳಲ್ಲಿ ಭಾರತವು ಅಮೆರಿಕ ಮತ್ತು ಪಶ್ಚಿಮ ಯುರೋಪ್ ಮಧ್ಯೆ ಸ್ಥಾನ ಪಡೆಯುತ್ತದೆ. ಅಮೆರಿಕದಲ್ಲಿ ಒಂದು ವೃತ್ತಿಪರ ಸುದ್ದಿ ಇದ್ದರೆ, ಅದೇ ಪ್ರಮಾಣದ ಬೂಸಾ ಸುದ್ದಿ ಇರುತ್ತದಂತೆ. ಯು.ಕೆ. ಮತ್ತು ಫ್ರಾನ್ಸ್ ನಲ್ಲಿ ಈ ಪ್ರಮಾಣ ಒಂದರಿಂದ ನಾಲ್ಕು, ಸ್ವೀಡನ್ ನಲ್ಲಿ ಒಂದರಿಂದ ಮೂರು ಇರುತ್ತದಂತೆ.

ಓದುಗರೇ ಅಂಥ ಮಾಹಿತಿ ಹುಟ್ಟು ಹಾಕುತ್ತಾರೆ

ಓದುಗರೇ ಅಂಥ ಮಾಹಿತಿ ಹುಟ್ಟು ಹಾಕುತ್ತಾರೆ

ಪಶ್ಚಿಮ ಯುರೋಪ್ ಹಾಗೂ ಅಮೆರಿಕದಿಂದ ಹೊರಗೆ ಬಂದು ನೋಡಿದರೆ, ಹೆಚ್ಚಿನ ಪೂರ್ವಗ್ರಹ ಒಳಗೊಂಡ ಮಾಹಿತಿಯನ್ನು ಓದುಗರೇ ಹುಟ್ಟು ಹಾಕಿರುತ್ತಾರೆ. ಈ ಅಧ್ಯಯನದ ಸಲುವಾಗಿಯೇ 130 ಸಾರ್ವಜನಿಕ ಫೇಸ್ ಬುಕ್ ಪುಟಗಳ 27 ಸಾವಿರ ಪೋಸ್ಟ್ ಗಳು, 200 ಸಾರ್ವಜನಿಕ ವಾಟ್ಸ್ ಅಪ್ ಗುಂಪುಗಳನ್ನು ಫೆಬ್ರವರಿ 14 ಮತ್ತು ಏಪ್ರಿಲ್ 10ರ ಮಧ್ಯೆ ಪರಿಶೀಲನೆ ಮಾಡಲಾಗಿದೆ. ವಿಭಜನೆ ಹಾಗೂ ಪಿತೂರಿ ಅಥವಾ ಪೂರ್ವಗ್ರಹ ಎಂದು ಮಾಹಿತಿಯನ್ನು ವಿಂಗಡಣೆ ಮಾಡುವುದರ ಜತೆಗೆ ಸಂಶೋಧಕಿ 'ಬೂಸಾ ಸುದ್ದಿ' ಎಂಬ ಹೊಸ ಪದವನ್ನೂ ಪ್ರಸ್ತಾವ ಮಾಡಿದ್ದಾರೆ. ಅದಕ್ಕಾಗಿ ಅವರು ಗಮನಿಸಿರುವ ವಿಚಾರ ಏನೆಂದರೆ, ವೃತ್ತಿಪರತೆ, ಬರವಣಿಗೆ ಶೈಲಿ, ವಿಶ್ವಾಸಾರ್ಹತೆ, ಪೂರ್ವಗ್ರಹ ಮತ್ತು ನಕಲಿ ಮಾಹಿತಿಯನ್ನು ಜರಡಿ ಹಿಡಿದಿದ್ದಾರೆ.

ಬೂಸಾ ಸುದ್ದಿಗೆ ಹಲವು ಮುಖಗಳು

ಬೂಸಾ ಸುದ್ದಿಗೆ ಹಲವು ಮುಖಗಳು

ಸಂಶೋಧನೆ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ 'ನಕಲಿ ಸುದ್ದಿ' (ಫೇಕ್ ನ್ಯೂಸ್) ಎಂಬ ಪದವನ್ನು ಕೈ ಬಿಟ್ಟಿದ್ದಾರೆ. ಏಕೆಂದರೆ ಡೊನಾಲ್ಡ್ ಟ್ರಂಪ್ ನಂಥ ನಾಯಕರು ಇದನ್ನು ಹೇಗೆ ಆಯ್ಕೆ ಮಾಡಿಕೊಂಡರಲ್ಲಾ ಎಂಬಾ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ. ಬೂಸಾ ಸುದ್ದಿ ಪ್ರಕಟಿಸುವ ಉದ್ದೇಶ ಏನೆಂದರೆ, ದಾರಿ ತಪ್ಪಿಸುವುದು ಹಾಗೂ ತಪ್ಪಾದ ಮಾಹಿತಿ ಮೂಲಕ ರಾಜಕೀಯ, ಆರ್ಥಿಕ ಅಥವಾ ಸಾಂಸ್ಕೃತಿಕ ವಿಚಾರವನ್ನು ಹೀಗೇ ಎಂದು ಬಿಂಬಿಸುವುದಾಗಿರುತ್ತದೆ. ಉಗ್ರವಾದ ಚಿಂತನೆ, ಸಲ್ಲದ ಕುತೂಹಲ ಮೂಡಿಸಬೇಕು ಎಂಬ ಉದ್ದೇಶ, ಪಿತೂರಿ, ಅಭಿಪ್ರಾಯದ ಮುಖವಾಡ ಹೊತ್ತ ಲೇಖನಗಳು, ನಕಲಿ ಸುದ್ದಿ ಮತ್ತು ಬೂಸಾ ಸುದ್ದಿಗೆ ಇನ್ನೂ ಹಲವು ಮುಖಗಳಿರುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಏಳನೇ ಹಂತದ ಚುನಾವಣೆ: ಮೋದಿ ನೇತೃತ್ವದ ಬಿಜೆಪಿಗೆ ಬೆಟ್ಟದಷ್ಟು ಸವಾಲು ಏಳನೇ ಹಂತದ ಚುನಾವಣೆ: ಮೋದಿ ನೇತೃತ್ವದ ಬಿಜೆಪಿಗೆ ಬೆಟ್ಟದಷ್ಟು ಸವಾಲು

ಯಾವ ಪಕ್ಷದಿಂದ ಯಾವ ಪ್ರಮಾಣ?

ಯಾವ ಪಕ್ಷದಿಂದ ಯಾವ ಪ್ರಮಾಣ?

ಇನ್ನು ಯಾವ ಪಕ್ಷದಿಂದ, ಎಷ್ಟು ಪ್ರಮಾಣದಲ್ಲಿ ವಿಭಜನೆ ಹಾಗೂ ಪಿತೂರಿ ಉದ್ದೇಶದ ಮಾಹಿತಿ ಹಂಚಿಕೊಳ್ಳಲಾಗಿದೆ ಎಂಬುದನ್ನು ಪರ್ಸೆಂಟೇಜ್ ಸಹಿತ ವಿವರಿಸಲಾಗಿದೆ. ವಾಟ್ಸ್ ಅಪ್ ಫೋಟೋ ವಿಭಾಗದಲ್ಲಿ ಬಿಜೆಪಿಯು ಹತ್ತಿರ ಹತ್ತಿರ 35%ನಷ್ಟು ವಿಭಜನೆ ಹಾಗೂ ಪಿತೂರಿ ಮಾಹಿತಿ, 18% 'ಪ್ರಚಾರ ಹಾಗೂ ಬೆಂಬಲ', 10.5% ರಾಷ್ಟ್ರೀಯತೆ ಮತ್ತು ಸೈನ್ಯಕ್ಕೆ ಬೆಂಬಲ, 3.5% ಧಾರ್ಮಿಕ, 3.5% 'ತಿರುಗೇಟು' ನೀಡುವಂಥ ಮಾಹಿತಿ ಒಳಗೊಂಡಿದೆ. ಕಾಂಗ್ರೆಸ್ ವಿಚಾರಕ್ಕೆ ಬರುವುದಾದರೆ 30% ಮತ್ತು ಅದಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಪ್ರಚಾರ ಮತ್ತು ಬೆಂಬಲ, 28.5%ನಷ್ಟು ವಿಭಜನೆ ಹಾಗೂ ಪೂರ್ವಗ್ರಹ ಅಥವಾ ಪಿತೂರಿ ಉದ್ದೇಶದ ಮಾಹಿತಿ, 9 ಪರ್ಸೆಂಟ್ ನಷ್ಟು ತಿರುಗೇಟು ಮತ್ತು 5 ಪರ್ಸೆಂಟ್ ಗಿಂತ ಕಡಿಮೆ ಪ್ರಮಾಣದಲ್ಲಿ ಇತರ ವಿಭಾಗಕ್ಕೆ ಬರುವ ಮಾಹಿತಿ ಹಂಚಿಕೊಳ್ಳಲಾಗಿದೆ.

ವೃತ್ತಿಪರ ಸುದ್ದಿಯ ಪ್ರಮಾಣ ಎಷ್ಟು?

ವೃತ್ತಿಪರ ಸುದ್ದಿಯ ಪ್ರಮಾಣ ಎಷ್ಟು?

ಬಿಎಸ್ ಪಿ ಮತ್ತು ಎಸ್ ಪಿ 20.5% ನಷ್ಟು ಪ್ರಚಾರ ಮತ್ತು ಬೆಂಬಲದ ಮಾಹಿತಿ ಒಳಗೊಂಡಿದ್ದನ್ನೇ ಷೇರ್ ಮಾಡಿಕೊಂಡಿವೆ. 11.5% ವಿಭಜನೆ ಮತ್ತು ಪಿತೂರಿಯ ಮಾಹಿತಿ, 7.5% ರಾಷ್ಟ್ರೀಯತೆ ಮತ್ತು ಸೈನ್ಯಕ್ಕೆ ಬೆಂಬಲ ಸೂಚಿಸುವ ಪೋಸ್ಟ್ ಷೇರ್ ಮಾಡಿದ್ದರೆ, ಉಳಿದ ಎಲ್ಲ ವಿಭಾಗಗಳು ಸೇರಿ ನಾಲ್ಕು ಪರ್ಸೆಂಟ್ ಗಿಂತ ಕಡಿಮೆ ಆಗುತ್ತದೆ. ವಾಟ್ಸ್ ಅಪ್ ನಲ್ಲಿ ಹಂಚಿಕೊಳ್ಳುವ 'ಕೊಂಡಿ'ಗಳು ಇತರ ಸಾಮಾಜಿಕ ಮಾಧ್ಯಮಗಳ ಪುಟಗಳಿಗೆ ಹಾಗೂ ರಾಜಕೀಯೇತರ ಮಾಹಿತಿಗೆ ಒಯ್ಯುತ್ತವೆ. ಆದ್ದರಿಂದ ಸಂಶೋಧಕರು ಅವುಗಳ ಬಗ್ಗೆ ಪರಿಶೀಲನೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಫೇಸ್ ಬುಕ್ 'ಕೊಂಡಿ' (ಲಿಂಕ್ಸ್) ವಿಭಾಗದಲ್ಲಿ 40 ಪರ್ಸೆಂಟ್ ನಷ್ಟು ಬಿಜೆಪಿಯವು ವೃತ್ತಿಪರ ಸುದ್ದಿ ಮೂಲಗಳು. 28%ನಷ್ಟು 'ಬೂಸಾ ಸುದ್ದಿ'. ಕಾಂಗ್ರೆಸ್ ನದು ಶೇಕಡಾ ಮೂವತ್ಮೂರರಷ್ಟು ವೃತ್ತಿಪರ ಹಾಗೂ 21 ಪರ್ಸೆಂಟ್ ಬೂಸಾ ಸುದ್ದಿ. ಬಿಎಸ್ ಪಿ ಹಾಗೂ ಎಸ್ ಪಿಯಿಂದ ಫೇಸ್ ಬುಕ್ ನಲ್ಲಿ ಶೇಕಡಾ 60ರಷ್ಟು ವೃತ್ತಿಪರ ಸುದ್ದಿ ಮೂಲ ಹಾಗೂ 1 ಪರ್ಸೆಂಟ್ ಬೂಸಾ ಸುದ್ದಿ ವಿನಿಮಯ ಮಾಡಿಕೊಳ್ಳಲಾಗುತ್ತದೆ.

ನೀವು ಪ್ರೀತಿ ಬಯಸುತ್ತೀರಿ, ನಿಮ್ಮವರು ಮೋದಿಗೆ 'ನೇಣು' ಬಯಸುತ್ತಿದ್ದಾರೆ!ನೀವು ಪ್ರೀತಿ ಬಯಸುತ್ತೀರಿ, ನಿಮ್ಮವರು ಮೋದಿಗೆ 'ನೇಣು' ಬಯಸುತ್ತಿದ್ದಾರೆ!

ನಿಜ ಎಂದು ಭ್ರಮಿಸುವವರ ಎದುರು ಸತ್ಯದ ಕನ್ನಡಿ

ನಿಜ ಎಂದು ಭ್ರಮಿಸುವವರ ಎದುರು ಸತ್ಯದ ಕನ್ನಡಿ

ಫೇಸ್ ಬುಕ್ ನಲ್ಲಿ ಬಿಜೆಪಿ ಹಂಚಿಕೊಳ್ಳುವ ಫೋಟೋಗಳಲ್ಲಿ ಮೂರನೇ ಎರಡು ಭಾಗದಷ್ಟು ಪ್ರಚಾರ ಹಾಗೂ ಬೆಂಬಲಕ್ಕೆ ಸಂಬಂಧಿಸಿದ್ದಾಗಿರುತ್ತದೆ. 12 ಪರ್ಸೆಂಟ್ ಗಿಂತ ಸ್ವಲ್ಪ ಹೆಚ್ಚು ಬೂಸಾ ಇರುತ್ತದೆ. ಇನ್ನು ಕಾಂಗ್ರೆಸ್ ನಿಂದ 52 ಪರ್ಸೆಂಟ್ ಪ್ರಚಾರ ಹಾಗೂ ಬೆಂಬಲಕ್ಕೆ ಸಂಬಂಧಿಸಿದ ಫೋಟೋಗಳು ಹಾಗೂ 14ರಷ್ಟು ಬೂಸಾ ಆಗಿರುತ್ತದೆ. ಇನ್ನು ಬಿಎಸ್ ಪಿ ಹಾಗೂ ಎಸ್ ಪಿ ವಿಚಾರಕ್ಕೆ ಬಂದರೆ ಶೇಕಡಾ 60ಕ್ಕಿಂತ ಹೆಚ್ಚಿನ ಪ್ರಮಾಣದ್ದು ಪ್ರಚಾರ ಹಾಗೂ ಬೆಂಬಲಕ್ಕೆ ಸಂಬಂಧಿಸಿದ ಫೋಟೋ ಆಗಿದ್ದರೆ, 12 ಪರ್ಸೆಂಟ್ ಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದ್ದು ವಿಭಜನೆ ಹಾಗೂ ಪಿತೂರಿಯದ್ದಾಗಿರುತ್ತದೆ. ದ್ವೇಷ, ಆಕ್ಷೇಪಾರ್ಹ ಅಥವಾ ರಕ್ತಸಿಕ್ತವಾದ ಫೋಟೋಗಳ ವಿಭಾಗದಲ್ಲಿ ಯಾವುದೇ ಫೋಟೋ ಕಂಡುಬಂದಿಲ್ಲ ಎಂದು ಸಂಶೋಧಕಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ, ವಾಟ್ಸ್ ಅಪ್ ಗಳಲ್ಲಿ ಬಂದಿದ್ದೆಲ್ಲವನ್ನೂ ನಿಜ ಎಂದು ಭ್ರಮಿಸುವವರಿಗೆ ಈ ಅಧ್ಯಯನ ಹೊರ ಹಾಕಿರುವ ಮಾಹಿತಿಯು ಕಣ್ಣು ತೆರೆಸಿದರೆ ಸಾಕು.

English summary
Oxford internet institution revealed in a study that, BJP and Congress equally sharing junk news in social media platform. When compared to these two parties BSP- SP alliace shares more reliable news source.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X