ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟ್ ಕಾಯಿನ್ ವ್ಯವಹಾರ: 5 ಲಕ್ಷ ಜನರಿಗೆ ಐಟಿ ನೋಟಿಸ್

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಡಿಸೆಂಬರ್ 19: ನಿಯಂತ್ರಣ ರಹಿತ ಬಿಟ್ ಕಾಯಿನ್ ವ್ಯಾವಹಾರದಲ್ಲಿ ತೊಡಗಿದ್ದ 5 ಲಕ್ಷಕ್ಕೂ ಹೆಚ್ಚು ಜನರಿಗೆ ನೋಟಿಸ್ ಜಾರಿ ಮಾಡಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ.

ಬಿಟ್ ಕಾಯಿನ್ ಹೂಡಿಕೆಯ ಬಗ್ಗೆ ತನಿಖೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ ಈ ತನಿಖೆಯ ಭಾಗವಾಗಿ ಈ ನೋಟಿಸ್ ನೀಡಲು ತೀರ್ಮಾನಿಸಿದೆ.

ಬಿಟ್ ಕಾಯಿನ್ ಆದಾಯದ ಮೇಲೆ ತೆರಿಗೆ ಅಧಿಕಾರಿಗಳ ಕಣ್ಣುಬಿಟ್ ಕಾಯಿನ್ ಆದಾಯದ ಮೇಲೆ ತೆರಿಗೆ ಅಧಿಕಾರಿಗಳ ಕಣ್ಣು

ಇತ್ತೀಚೆಗೆ ತೆರಿಗೆ ಅಧಿಕಾರಿಗಳು ದೇಶದ 9 ನಗರಗಳಲ್ಲಿ ತೆರಿಗೆ ತಪ್ಪಿಸಲು ಈ ರೀತಿ ಬಿಟ್ ಕಾಯಿನ್ ಗಳ ವ್ಯವಹಾರದಲ್ಲಿ ತೊಡಗಿರುವವರ ಮೇಲೆ ದಾಳಿ ನಡೆಸಿದ್ದರು. ಅಧಿಕಾರಿಗಳ ಮಾಹಿತಿ ಪ್ರಕಾರ ದೇಶದಲ್ಲಿ ಈ ರೀತಿ ಬಿಟ್ ಕಾಯಿನ್ ವ್ಯವಹಾರ ನಡೆಸಲು 20 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದು ಇವರಲ್ಲಿ 4-5 ಲಕ್ಷ ಜನರು ಮಾತ್ರ ಹೂಡಿಕೆ, ವ್ಯವಹಾರ ನಡೆಸುತ್ತಿದ್ದಾರೆ.

Bitcoin trading: 5 lakh individuals set to get IT notice

ಇತ್ತೀಚೆಗೆ ಐಟಿ ಇಲಾಖೆಯ ಬೆಂಗಳೂರಿನ ತನಿಖಾ ವಿಭಾಗವು ತನ್ನ ಕಾರ್ಯಾಚರಣೆ ನಂತರ ವ್ಯಕ್ತಿಗಳು ಮತ್ತು ಸಂಸ್ಥೆಗಳ ಹೆಸರನ್ನು ಬೇರೆ ಬೇರೆ ವಿಭಾಗಕ್ಕೆ ತನಿಖೆಗಾಗಿ ಕಳುಹಿಸಿಕೊಟ್ಟಿದೆ.

"ಈಗಾಗಲೇ ಮಾಹಿತಿ ಪಡೆಯಲಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ತನಿಖೆ ನಡೆಸಲಾಗುತ್ತಿದೆ. ತೆರಿಗೆ ವಂಚನೆ ಪ್ರಕರಣ ದಾಖಲಿಸಿ ಇವರಿಗೆ ನೋಟಿಸ್ ನೀಡಲಾಗಿದೆ. ಇದೀಗ ಬಿಟ್ ಕಾಯಿನ್ ಹೂಡಿಕೆ ಮತ್ತು ವ್ಯವಹಾರದ ಬಗ್ಗೆ ಇವರೆಲ್ಲಾ ತೆರಿಗೆ ಕಟ್ಟಬೇಕಾಗಿದೆ," ಎಂದು ಅಧಿಕಾರಿ ಹೇಳಿದ್ದಾರೆ.

ದೇಶದಲ್ಲಿ ಬಿಟ್ ಕಾಯಿನ್ ವ್ಯವಹಾರವನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗಿದ್ದು ದೇಶದಲ್ಲಿ ಈ ವ್ಯವಹಾರಕ್ಕೆ ಯಾವುದೇ ನಿಯಂತ್ರಣ ಸಂಸ್ಥೆಗಳಿಲ್ಲ. ಸದ್ಯ ಈಗಿರುವ ಕಾನೂನುಗಳ ಮೇಲೆ ಕ್ರಮ ಕೈಗೊಳ್ಳಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

English summary
Over 5 lakh persons are set to get notices from the Income Tax department for trading in exchanges of unregulated virtual currency. The notices are being sent as part of the probe into Bitcoin investments made by high network individuals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X