ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟ್‌ಕಾಯಿನ್ ಕಾನೂನುಬಾಹಿರವೇ ಅಥವಾ ಇಲ್ಲವೇ; ಕೇಂದ್ರದ ನಿಲುವು ಪ್ರಶ್ನಿಸಿದ ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಫೆಬ್ರವರಿ 25: ಭಾರತದಲ್ಲಿ ಬಿಟ್‌ಕಾಯಿನ್ ಕಾನೂನುಬಾಹಿರವೇ ಅಥವಾ ಅಲ್ಲವೇ ಎಂಬುದರ ಬಗ್ಗೆ ಕೇಂದ್ರ ಸರ್ಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ನೇತೃತ್ವದ ಪೀಠವು ಈ ವಿಷಯದ ಬಗ್ಗೆ ಬೆಳಕು ಚೆಲ್ಲುವಂತೆ ಕೇಂದ್ರ ಸರ್ಕಾರ ಪರವಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿರಿಗೆ ತಿಳಿಸಿದೆ.

ಕ್ರಿಪ್ಟೋಕರೆನ್ಸಿ ಕಾಯ್ದೆ ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗಲ್ಲ!ಕ್ರಿಪ್ಟೋಕರೆನ್ಸಿ ಕಾಯ್ದೆ ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗಲ್ಲ!

ಗೇನ್ ಬಿಟ್‌ಕಾಯಿನ್ ಹಗರಣದ ಆರೋಪಿಗಳಲ್ಲಿ ಒಬ್ಬರಾದ ಅಜಯ್ ಭಾರದ್ವಾಜ್ ಅವರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಈ ವೇಳೆ ಬಿಟ್ ಕಾಯಿನ್ ಕಾನೂನುಬಾಹಿರವೇ ಅಥವಾ ಇಲ್ಲವೇ, ನಿಮ್ಮ ನಿಲುವನ್ನು ನೀವು ಸ್ಪಷ್ಟಪಡಿಸಬೇಕು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು. ಇದಕ್ಕೆ ಉತ್ತರಿಸಿದ ಭಾಟಿ, "ಈ ನಿಟ್ಟಿನಲ್ಲಿ ಸ್ಪಷ್ಟ ನಿರ್ಧಾರವನ್ನು ತಿಳಿಸಲಾಗುವುದು ಎಂದರು.

India: Bitcoin is illegal or not? Supreme Court asks Central govt to make its stand clear

ಬಿಟ್‌ಕಾಯಿನ್ ದಂಧೆಯಲ್ಲಿ ತೊಡಗಿರುವ ಆರೋಪ:

ಗೇನ್ ಬಿಟ್‌ಕಾಯಿನ್ ಹಗರಣದ ಆರೋಪಿಗಳಲ್ಲಿ ಒಬ್ಬರಾದ ಅಜಯ್ ಭಾರದ್ವಾಜ್ ತಮ್ಮ ಸಹೋದರ ಅಮಿತ್ ಭಾರದ್ವಾಜ್ ಜೊತೆ ಕೈಜೋಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ಅಮಿತ್ ಭಾರದ್ವಾಜ್, ಹೂಡಿಕೆದಾರರಿಗೆ ಭಾರಿ ಲಾಭದ ಭರವಸೆ ನೀಡುವ ಬಹು-ಹಂತದ ಮಾರುಕಟ್ಟೆ ಯೋಜನೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ

ಎಎಸ್‌ಜಿ ಭಾಟಿ ವಾದ ಮಂಡನೆ:

ಆರಂಭದಲ್ಲಿ 2,000 ಕೋಟಿ ರೂಪಾಯಿಗಳಷ್ಟಿದ್ದ ಹಗರಣದ ಗಾತ್ರವನ್ನು ಬಿಟ್‌ಕಾಯಿನ್ ಮೌಲ್ಯ ಹೆಚ್ಚಳದ ನಂತರ 20,000 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿತ್ತು. ಪ್ರಕರಣದಲ್ಲಿ 87,000 ಬಿಟ್‌ಕಾಯಿನ್‌ಗಳಿವೆ ಮತ್ತು ಆರೋಪಿಯು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಎಎಸ್‌ಜಿ ಭಾಟಿ ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದರು. "ನಾವು ಅನೇಕ ಸಮನ್ಸ್‌ಗಳನ್ನು ನೀಡಿದ್ದೇವೆ" ಎಂದು ಅವರು ಹೇಳಿದರು.

India: Bitcoin is illegal or not? Supreme Court asks Central govt to make its stand clear

ಬಿಟ್‌ಕಾಯಿನ್‌ಗಳು ಎಂದರೆ ಕರೆನ್ಸಿ:

ಬಿಟ್‌ಕಾಯಿನ್‌ಗಳನ್ನು ಕರೆನ್ಸಿ ಎಂದು ಒಪ್ಪಿಕೊಳ್ಳಲಾಗಿದೆ. ನನ್ನ ಹಣವನ್ನು ತೆಗೆದುಕೊಂಡು ಹೋಗಲಾಗಿದ್ದು, 2018ರಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಜಾಮೀನಿನ ನಂತರ ಈ ವ್ಯಕ್ತಿ ನನ್ನ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಅದರ ಸಿಸಿಟಿವಿ ಕ್ಯಾಮರಾಗಳಲ್ಲಿ," ಆಲಂ ಹೇಳಿದರು. ನಂತರ ನ್ಯಾಯಾಲಯವು ತನಿಖೆಗೆ ಸಹಕರಿಸುವಂತೆ ಆರೋಪಿಗಳಿಗೆ ಸೂಚಿಸಿತು.

"ಅರ್ಜಿದಾರರು ಆರೋಪಿಗಳು ಸಹಕಾರವನ್ನು ತೋರಿಸುವ ಕುರಿತಾಗಿ ವರದಿ ಸಲ್ಲಿಸಬೇಕು. 4 ವಾರಗಳ ನಂತರ ವರದಿ ಸಲ್ಲಿಸಬೇಕು. ಆರೋಪಿಯ ಬಂಧನವನ್ನು ತಡೆಯುವ ಮಧ್ಯಂತರ ಆದೇಶವು ಮುಂದಿನ ವಿಚಾರಣೆಯ ದಿನಾಂಕದವರೆಗೆ ಮುಂದುವರಿಯುತ್ತದೆ. ಮಧ್ಯಂತರ ರಕ್ಷಣೆ ಮುಂದುವರಿಯುತ್ತದೆ," ಎಂದು ಕೋರ್ಟ್ ಹೇಳಿದೆ.

English summary
India: Bitcoin is illegal or not? Supreme Court asks Central govt to make its stand clear. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X