ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಲಕ್ಕಲ್ ಪೊಲೀಸ್ ವಿಚಾರಣೆ, ಜವಾಬ್ದಾರಿಯಿಂದ ತಾತ್ಕಾಲಿಕ ಬಿಡುಗಡೆ

|
Google Oneindia Kannada News

ಕೊಚ್ಚಿ, ಸೆಪ್ಟೆಂಬರ್ 20: ಕ್ರೈಸ್ರ ಸನ್ಯಾಸಿನಿ ಮಾಡಿದ ಅತ್ಯಾಚಾರ ಆರೋಪದ ಮೇಲೆ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ಪೊಲೀಸರು ಗುರುವಾರ ಎರಡನೇ ದಿನ ವಿಚಾರಣೆ ನಡೆಸಿದರು. ಇದೇ ವೇಳೆ ಪೋಪ್ ಫ್ರಾನ್ಸಿಸ್ ರು ಫ್ರಾಂಕೋ ಮುಲಕ್ಕಲ್ ರನ್ನು ತಮ್ಮ ಜವಾಬ್ದಾರಿಯಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ್ದಾರೆ ಎಂದು ಕ್ಯಾಥೋಲಿಕ್ ಬಿಷಪ್ ಕಾನ್ಫರೆನ್ಸ್ ಆಫ್ ಇಂಡಿಯಾದ ಪ್ರಕಟಣೆ ತಿಳಿಸಿದೆ.

ಕೇರಳದ ಸನ್ಯಾಸಿನಿಯ ವಿರುದ್ಧವೇ ತಿರುಗಿದ ಅತ್ಯಾಚಾರ ಪ್ರಕರಣಕೇರಳದ ಸನ್ಯಾಸಿನಿಯ ವಿರುದ್ಧವೇ ತಿರುಗಿದ ಅತ್ಯಾಚಾರ ಪ್ರಕರಣ

ಫ್ರಾಂಕೋ ಮುಲಕ್ಕಲ್ ಅವರ ಸ್ಥಾನಕ್ಕೆ ಬಿಷಪ್ ಎಮೆರಿಟಸ್ ಅವರನ್ನು ತಕ್ಷಣದಿಂದಲೇ ನೇಮಿಸಲಾಗಿದೆ. ಸೆಪ್ಟೆಂಬರ್ ಹದಿನಾರರಂದು ಫ್ರಾಂಕೋ ಮುಲಕ್ಕಲ್ ತಾವೇ ಪತ್ರ ಬರೆದು, ತಾತ್ಕಾಲಿಕವಾಗಿ ತಮನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ ವಕ್ತಾರ ತಿಳಿಸಿದ್ದಾರೆ.

Bishop who allegedly raped Kerala nun relieved of duties

ಕೇರಳದ ಜಲಂಧರ್ ಡಯೊಸೆಸ್ ನ ಬಿಷಪ್ ಫ್ರಾಂಕೋ ಮುಲಕ್ಕಲ್ ಮೇಲೆ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದಿತ್ತು. ಈ ಆರೋಪವನ್ನು ಬಿಷಪ್ ಅಲ್ಲಗಳೆದಿದ್ದರು. ವಿಚಾರಣೆಗಾಗಿ ಹಾಜರಾಗುವಂತೆ ಕೇರಳ ಪೊಲೀಸರು ಸಮನ್ಸ್ ಕಳಿಸಿದ ನಂತರ, ತಮ್ಮ ಜವಾಬ್ದಾರಿಯಿಂದ ತಾತ್ಕಾಲಿಕವಾಗಿ ಬಿಡುಗಡೆ ಕೋರುವುದಾಗಿ ಮುಲಕ್ಕಲ್ ಪತ್ರ ಬರೆದಿದ್ದರು.

English summary
Jalandhar Bishop Franco Mulakkal, who allegedly raped a nun multiple times between 2014 and 2016, was on Thursday temporarily relieved of his pastoral duties, the Catholic Church said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X