ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21 : ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ಅವರನ್ನು ಶುಕ್ರವಾರ ಕೇರಳ ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಲಕ್ಕಲ್ ಪೊಲೀಸ್ ವಿಚಾರಣೆ, ಜವಾಬ್ದಾರಿಯಿಂದ ತಾತ್ಕಾಲಿಕ ಬಿಡುಗಡೆ ಮುಲಕ್ಕಲ್ ಪೊಲೀಸ್ ವಿಚಾರಣೆ, ಜವಾಬ್ದಾರಿಯಿಂದ ತಾತ್ಕಾಲಿಕ ಬಿಡುಗಡೆ

ಕ್ರೈಸ್ತ ಸನ್ಯಾಸಿನಿಯ ಮೇಲೆ ನಡೆಸಲಾದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಮೊದಲ ಭಾರತೀಯ ಕ್ಯಾಥೋಲಿಕ್ ಬಿಷಪ್ ಎಂಬ ಕುಖ್ಯಾತಿಗೆ 54 ವರ್ಷಗಳ ಫ್ರಾಂಕೋ ಮುಳಕ್ಕಲ್ ಅವರು ಪಾತ್ರರಾಗಿದ್ದಾರೆ.

ಅತ್ಯಾಚಾರ ಆರೋಪ: ಸ್ಥಾನ ತ್ಯಜಿಸಿದ ಬಿಷಪ್ ಫ್ರಾಂಕೋ ಅತ್ಯಾಚಾರ ಆರೋಪ: ಸ್ಥಾನ ತ್ಯಜಿಸಿದ ಬಿಷಪ್ ಫ್ರಾಂಕೋ

2014ರಿಂದ 2016ರ ಅವಧಿಯಲ್ಲಿ 44 ವರ್ಷದ ಕ್ರೈಸ್ತ ಸನ್ಯಾಸಿನಿಯನ್ನು ಮೇಲಿಂದ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ್ದಾರೆಂದು ಅವರ ಮೇಲೆ ಆರೋಪವಿದೆ. ಕಳೆದ ಮೂರು ದಿನಗಳಿಂದ ಕೇರಳದ ಪೊಲೀಸರು ಅವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದರು.

Bishop Franco Mulakkal arrested for allegedly raping nun

ಅತ್ಯಾಚಾರದ ಆರೋಪ ಹೊತ್ತಿರುವ ಫಾಂಕೋ ಮುಳಕ್ಕಲ್ ಅವರನ್ನು ಕೂಡಲೆ ಬಂಧಿಸಬೇಕು ಎಂದು ರಾಜ್ಯಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದವು. ಬೇರೆ ಬೇರೆ ಊರುಗಳಿಂದ ಕ್ರೈಸ್ತ ಸನ್ಯಾಸಿನಿಯರು ಕೊಚ್ಚಿಗೆ ಬಂದು ಪ್ರತಿಭಟನೆಯಲ್ಲಿ ತೊಡಗಿದ್ದರು.

'ಹೆಣ್ಣು ಭಕ್ಷಕ' ಬಿಷಪ್, ಅಸಹಾಯಕ ಸನ್ಯಾಸಿನಿ, ನೆರವಿಗೆ ಬಾರದ ಚರ್ಚ್ ವ್ಯವಸ್ಥೆ 'ಹೆಣ್ಣು ಭಕ್ಷಕ' ಬಿಷಪ್, ಅಸಹಾಯಕ ಸನ್ಯಾಸಿನಿ, ನೆರವಿಗೆ ಬಾರದ ಚರ್ಚ್ ವ್ಯವಸ್ಥೆ

ಜಲಂಧರ್ ಡಯೋಸೀಸ್ ನಿಂದ ಫ್ರಾಂಕೋ ಮುಳಕ್ಕಲ್ ಅವರನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸಲಾಗಿತ್ತು. ಅವರನ್ನು ಬಂಧಿಸುವ ಮುನ್ನ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಆರೋಪಿಸಿರುವ ಕ್ರೈಸ್ತ ಸನ್ಯಾಸಿನಿಯ ಹೇಳಿಕೆಯನ್ನು ಮತ್ತೊಮ್ಮೆ ಪಡೆಯಲಾಗಿದೆ.

ಬಿಷಪ್ ಹೇಳಿಕೆಯ ಮೇಲೆ ಸಂದೇಹ : ದೂರಿನ ಪ್ರಕಾರ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರವಾಗಿದ್ದು 2014ರ ಮೇ 5ರಂದು ಕುರವಿಲಂಗಡದ ಕಾನ್ವೆಂಟ್ ನಲ್ಲಿ. ಆದರೆ, ಆ ದಿನ ತಾನು ಆ ಕಾನ್ವೆಂಟ್ ನಲ್ಲಿ ಇರಲೇ ಇಲ್ಲ, ತಾನು ಇದ್ದದ್ದು ಮುತ್ತಲಕೋಡಂ ಕಾನ್ವೆಂಟ್ ನಲ್ಲಿ ಎಂದು ಬಿಷಪ್ ಫ್ರಾಂಕೋ ತನಿಖಾಧಿಕಾರಿಯ ಮುಂದೆ ಹೇಳಿಕೆ ನೀಡಿದ್ದಾರೆ.

ಆದರೆ, ಫ್ರಾಂಕೋನ ಕಾರಿನ ಡ್ರೈವರ್ ಮತ್ತು ರಿಜಿಸ್ಟರ್ ನಿಭಾಯಿಸುವ ಮತ್ತೊಬ್ಬ ಸನ್ಯಾಸಿನಿ ನೀಡಿರುವ ಹೇಳಿಕೆ ವಿಭಿನ್ನವಾಗಿದೆ. ಅತ್ಯಾಚಾರವಾದ ಆ ದಿನದಂದು ಫ್ರಾಂಕೋ ಮತ್ತು ಡ್ರೈವರ್ ಕುರವಿಲಂಗಡದ ಕಾನ್ವೆಂಟ್ ನಲ್ಲಿಯೇ ರಾತ್ರಿ ತಂಗಿದ್ದರು. ಅಲ್ಲದೆ, ಫ್ರಾಂಕೋ ಅವರ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಅವರು ಅತ್ಯಾಚಾರವೆಸಗಿದ ಕಾನ್ವೆಂಟ್ ನಲ್ಲಿಯೇ ಇದ್ದದ್ದು ದೃಢಪಟ್ಟಿದೆ. ಈ ಸಾಕ್ಷ್ಯವನ್ನು ಅವರ ಮುಂದೆ ಇಟ್ಟಾಗ ಫ್ರಾಂಕೋ ನಿರುತ್ತರರಾಗಿದ್ದರು. ಈ ಆಧಾರದ ಮೇಲೆ ಫ್ರಾಂಕೋನನ್ನು ಬಂಧಿಸಲಾಗಿದೆ.

ಸಾಕ್ಷಿಯಾಗಿ ನೀಡಿದ್ದ ವಿಡಿಯೋ ತಿದ್ದುಪಡಿ : ಅತ್ಯಾಚಾರಕ್ಕೊಳಗಾದ ಸನ್ಯಾಸಿನಿ ಮೇ 6ರಂದು ಸಂತೋಷದಿಂದಿದ್ದರು ಎಂದು ತೋರಿಸುವ, ಫ್ರಾಂಕೋ ಪ್ರಸ್ತುತಪಡಿಸಿರುವ ವಿಡಿಯೋ ತಿದ್ದುಪಡಿ ಮಾಡಲಾಗಿದೆ ಎಂದು ದೃಢಪಟ್ಟಿದೆ. ಅಸಲಿಗೆ ಸನ್ಯಾಸಿನಿ ತೀವ್ರ ಖಿನ್ನತೆ ಮತ್ತು ವೇದನೆಗೊಳಗಾಗಿದ್ದು ಖಚಿತವಾಗಿದೆ.

ಅಂದು ರಾತ್ರಿ ಆಗಿದ್ದೇನು? : ರೂಂ ನಂಬರ್ 20ರಲ್ಲಿದ್ದ ಫ್ರಾಂಕೋ ತನ್ನ ಕೊಠಡಿಗೆ ಸನ್ಯಾಸಿನಿಯನ್ನು ಕರೆಯಿಸಿಕೊಂಡಿದ್ದಾರೆ. ಆಗ, ಅಸಹಜ ಲೈಂಗಿಕತೆಗೆ ಅವರನ್ನು ಬಲವಂತಪಡಿಸಿದ್ದಾರೆ. ಅದೂ ಅಲ್ಲದೆ 2014ರಿಂದ 2016ರ ನಡುವಿನಲ್ಲಿ ಹದಿಮೂರು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಫ್ರಾಂಕೋ ಎಂದು ಕ್ರೈಸ್ತ ಸನ್ಯಾಸಿನಿ ದೂರಿನಲ್ಲಿ ತಿಳಿಸಿದ್ದಾರೆ.

ಕೇರಳ ಎಂಎಲ್ಎ ಕ್ಯಾತೆ : ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆದಿದೆಯೆನ್ನಲಾದ ದಿನದ ಮರುದಿನವೇ ಸನ್ಯಾಸಿನಿ ನಗುನಗುತ್ತಲೇ ಬಿಷಪ್ ಫ್ರಾಂಕೋ ಜೊತೆ ಕುಳಿತಿರುವ ಫೋಟೋ ಮತ್ತು ವಿಡಿಯೋ ನನ್ನ ಬಳಿಯಿದೆ. ಅವರ ಮೇಲೆ ಅತ್ಯಾಚಾರ ನಡೆದಿರುತ್ತಿದ್ದರೆ ಹೀಗೆ ನಗುತ್ತ ಹೇಗೆ ಕುಳಿತಿರಲು ಸಾಧ್ಯ? ಆದರೆ, ಕಾನೂನಿಗೆ ವಿರುದ್ಧವಾಗಿರುವುದರಿಂದ ಆ ಫೋಟೋ ಮತ್ತು ವಿಡಿಯೋವನ್ನು ಮಾಧ್ಯಮಗಳಿಗೆ ತೋರಿಸುತ್ತಿಲ್ಲ ಎಂದು ಕೇರಳದ ಎಂಎಲ್ಎ ಪಿಸಿ ಜಾರ್ಜ್ ಎಂಬುವವರು ಫ್ರಾಂಕೋ ಪರವಾಗಿ ವಾದ ಮಂಡಿಸಿದ್ದಾರೆ.

ನಾನು ಈ ದಾಖಲೆಗಳನ್ನು ತನಿಖಾಧಿಕಾರಿಗಳ ಮುಂದೆ ಪ್ರಸ್ತುತ ಪಡಿಸಲು ಸಿದ್ಧನಿದ್ದೇನೆ. ಆದರೆ, ಒಬ್ಬ ತನಿಖಾಧಿಕಾರಿಯೇ ಬಿಷಪ್ ಫ್ರಾಂಕೋ ಅವರನ್ನು ಈ ಸುಳ್ಳು ಕೇಸಿನಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಪಿಸಿ ಜಾರ್ಜ್ ಅವರು ಆರೋಪಿಸಿದ್ದಾರೆ.

ನಾಲ್ವರು ಕ್ರೈಸ್ತ ಪಾದ್ರಿಗಳ ಬಂಧನ : ಮತ್ತೊಂದು ಪ್ರಕರಣದಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬರನ್ನು ಸತತ ಹತ್ತು ವರ್ಷಗಳ ಕಾಲ ಅತ್ಯಾಚಾರ ಮಾಡಿದ ಆರೋಪ ಮತ್ತು ಪಾದ್ರಿಯೊಡನೆ ಸಂಬಂಧ ಇರುವುದನ್ನು ತಪ್ಪೊಪ್ಪಿಕೊಂಡ ಹೇಳಿಕೆಯ ದುರ್ಲಾಭ ಪಡೆದು ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರು ಪಾದ್ರಿಗಳನ್ನು ಮತ್ತೊಂದು ಪ್ರಕರಣದಲ್ಲಿ ಕೇರಳದಲ್ಲಿ ಬಂಧಿಸಲಾಗಿದೆ.

English summary
Bishop Franco Mulakkal has been arrested by Kerala police on Friday for allegedly raping nun in Kerala. Bishop Franco Mulakkal (54) was attached to Jalandhar diocese.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X