ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಮೃಗ ಬೇಟೆ ಪ್ರಕರಣ: ಐವರ ಖುಲಾಸೆ ಮರುಪ್ರಶ್ನಿಸಲು ನಿರ್ಧಾರ

|
Google Oneindia Kannada News

ಬೆಂಗಳೂರು, ಏಪ್ರಿಲ್ 05: ನಟರ ವಿರುದ್ಧದ ಪ್ರಕರಣದಲ್ಲಿ ಹೋರಾಟ ನಡೆಸುತ್ತಿರುವ ರಾಜಸ್ಥಾನದ ಬಿಶ್ನೋಯಿ ಸಭಾ, ಉಳಿದ ಆರೋಪಿಗಳ ಖುಲಾಸೆಯನ್ನು ಪ್ರಶ್ನಿಸಲು ನಿರ್ಧರಿಸಿದೆ.

ಇತರೆ ಆರೋಪಿಗಳಾದ ಸೈಫ್ ಅಲಿ ಖಾನ್, ಸೊನಾಲಿ ಬೇಂದ್ರೆ, ನೀಲಂ ಕೊಠಾರಿ ಮತ್ತು ಟಬು ಅವರನ್ನು ನಿರ್ದೋಷಿ ಎಂದು ನೀಡಿರುವ ತೀರ್ಪಿನ ಬಗ್ಗೆ ಸಭಾ ಅಸಮಾಧಾನ ವ್ಯಕ್ತಪಡಿಸಿದೆ.

ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ದೋಷಿ ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ದೋಷಿ

ಮತ್ತೊಬ್ಬ ಆರೋಪಿ, ಸ್ಥಳೀಯ ಪ್ರವಾಸಿ ಮಾರ್ಗದರ್ಶಿ ದುಷ್ಯಂತ್ ಸಿಂಗ್ ಅವರನ್ನು ಸಹ ದೋಷಮುಕ್ತಗೊಳಿಸಲಾಗಿದೆ.

Bishnoi Sabha object to 5 acquittals, to appeal again

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಐವರ ಖುಲಾಸೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಸಭಾದ ಸದಸ್ಯರೊಬ್ಬರು ತಿಳಿಸಿದ್ದಾರೆ. ತೀರ್ಪಿನ ವಿರುದ್ಧ ಅರ್ಜಿ ಸಲ್ಲಿಸುವಂತೆ ಅರಣ್ಯ ಇಲಾಖೆಯನ್ನು ಸಂಪರ್ಕಿಸಲಾಗುವುದು ಮತ್ತು ಈ ಸಂಬಂಧ ಸರ್ಕಾರಕ್ಕೆ ಪ್ರತಿನಿಧಿಯೊಬ್ಬರನ್ನು ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕೃಷ್ಣಮೃಗ ಬೇಟೆ ಪ್ರಕರಣದ ಪ್ರಮುಖ ಘಟನಾವಳಿಗಳು ಕೃಷ್ಣಮೃಗ ಬೇಟೆ ಪ್ರಕರಣದ ಪ್ರಮುಖ ಘಟನಾವಳಿಗಳು

ವನ್ಯಜೀವಿ ಕಾರ್ಯಕರ್ತರ ಸಂಘಟನೆ ಬಿಶ್ನೋಯಿ ಟೈಗರ್ಸ್ ವನ್ಯ ಏವಂ ಪರ್ಯಾವರಣ್ ಸಂಸ್ಥಾ, ತೀರ್ಪಿನ ವಿರುದ್ಧ ಹೋರಾಟಕ್ಕೆ ಮುಂದಾಗಲು ನಿರ್ಧರಿಸಿದೆ, ತೀರ್ಪಿನಲ್ಲಿನ ಅಂಶಗಳನ್ನು ಪರಿಶೀಲಿಸಲಾಗುವುದು. ತಕ್ಷಣವೇ ಮೇಲ್ಮನವಿ ಸಲ್ಲಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದೆ.

ಸಲ್ಲೂಗೆ ಜೈಲು... 'ಕೃಷ್ಣಮೃಗ'ದ ಮರಿಮಕ್ಕಳಿಗೆ ಸಿಕ್ಕಿತು ನ್ಯಾಯ! ಸಲ್ಲೂಗೆ ಜೈಲು... 'ಕೃಷ್ಣಮೃಗ'ದ ಮರಿಮಕ್ಕಳಿಗೆ ಸಿಕ್ಕಿತು ನ್ಯಾಯ!

ಸಲ್ಮಾನ್ ಹೊರತುಪಡಿಸಿ ಉಳಿದ ಐವರು ಆರೋಪಿಗಳನ್ನು ಪ್ರಬಲ ಸಾಕ್ಷ್ಯಾಧಾರಗಳ ಕೊರತೆಯಿಂದ ನಿರ್ದೋಷಿಗಳು ಎಂದು ಪರಿಗಣಿಸಲಾಗಿದೆ ಎಂಬುದಾಗಿ ತೀರ್ಪಿನಲ್ಲಿ ಹೇಳಲಾಗಿದೆ.

English summary
one of the parties to the case, Bishnoi Sabha, has decided to appeal against the acquittal of the five co-accused in the black buck poaching case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X