ಮಣಿಪುರ ಮುಖ್ಯಮಂತ್ರಿ ಬೈರೆನ್ ಸಿಂಗ್ ಗೆ ಇಂದು ಅಗ್ನಿ ಪರೀಕ್ಷೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 20: ಮಣಿಪುರದ ಚೊಚ್ಚಲ ಬಿಜೆಪಿ ಮುಖ್ಯಮಂತ್ರಿ ಬೈರೆನ್ ಸಿಂಗ್ ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಕಳೆದ ವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬೈರೆನ್ ಸಿಂಗ್ ಗೆ ಇದು ಮೊದಲ ಅಗ್ನಿ ಪರೀಕ್ಷೆಯಾಗಿದೆ.

ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಚುನಾವಣಾ ಫಲಿತಾಂಶದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಇದನ್ನು ಬದಿಗೆ ತಳ್ಳಿ ಬಿಜೆಪಿ ಇಲ್ಲಿ ಅಧಿಕಾರಕ್ಕೇರಿದೆ. ಇದೀಗ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಇಂದು ಬಹುಮತ ಸಾಬೀತು ಪಡಿಸಬೇಕಾಗಿದೆ.

60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಬೈರೆನ್ ಸಿಂಗ್ 31 ಮತಗಳನ್ನು ಪಡೆಯಬೇಕಾಗಿದೆ.[ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಬೈರೆನ್ ಸಿಂಗ್]

Biren Singh to take floor test in Manipur assembly today

ಈಗಾಗಲೇ ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ಬೈರೆನ್ ಸಿಂಗ್ ತಮಗೆ 32 ಶಾಸಕರ ಬೆಂಬಲ ಇರುವುದಾಗಿ ಹೇಳಿದ್ದಾರೆ. 21 ಬಿಜೆಪಿ ಶಾಸಕರು, ಎನ್.ಪಿ.ಪಿ ಯ 4, ಎನ್.ಪಿ.ಎಫ್ ನ 4, ಟಿಎಂಸಿಯ 1, ಎಲ್.ಜೆ.ಪಿಯ 1 ಶಾಸಕರ ಬೆಂಬಲ ತಮಗಿರುವುದಾಗಿ ಅವರು ಹೇಳಿದ್ದಾರೆ.[ನಾಳೆ ಮಣಿಪುರ ಮುಖ್ಯಮಂತ್ರಿಯಾಗಿ ಬೈರೆನ್ ಸಿಂಗ್ ಪ್ರಮಾಣ ವಚನ]

ಇದೇ ವೇಳೆ ಕಾಂಗ್ರೆಸ್ ಕೂಡಾ ತಮಗೂ 32 ಶಾಸಕರ ಬೆಂಬಲ ಇರುವುದಾಗಿ ಹೇಳಿದೆ. ಕಾಂಗ್ರೆಸ್ ಒಟ್ಟು 28 ಸ್ಥಾನಗಳನ್ನು ಗೆದ್ದಿದ್ದು ತಮಗೆ ನಾಲ್ವರು ಎನ್.ಪಿ.ಪಿ ಶಾಸಕರ ಬೆಂಬಲ ಇರುವುದಾಗಿ ಕಾಂಗ್ರೆಸ್ ಹೇಳಿದೆ. ಆದರೆ ತಾವು ಕಾಂಗ್ರೆಸಿಗೆ ಬಂಬಲ ನೀಡಿಯೇ ಇಲ್ಲ ಎಂದು ಎನ್.ಪಿ.ಪಿ ಹೇಳಿದೆ.

ಇವರಲ್ಲಿ ಯಾರು ಸತ್ಯ, ಯಾರು ಸುಳ್ಳು, ಬೈರೆನ್ ಸಿಂಗ್ ಅಧಿಕಾರ ಉಳಿಸಿಕೊಳ್ಳುತ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಮಧ್ಯಾಹ್ನದ ವೇಳೆಗೆ ಉತ್ತರ ದೊರೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The B Biren Singh government in Manipur will face the floor test on Monday. Biren Singh of the BJP was sworn in as chief minister of Manipur last week.
Please Wait while comments are loading...