ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

85 ರೂ.ಗೆ 1 ಕೆಜಿ ಕೋಳಿ ಮಾಂಸ: ಇದು ಹಕ್ಕಿಜ್ವರದ ಪ್ರಭಾವ

|
Google Oneindia Kannada News

ನವದೆಹಲಿ, ಜನವರಿ.12: ದೇಶದಲ್ಲಿ ಹಕ್ಕಿಜ್ವರದ ಆತಂಕದ ಹಿನ್ನೆಲೆ ಕೋಳಿ ಸಾಕಾಣಿಕೆ ಮೇಲೆ ಭಾರಿ ಹೊಡೆತ ಕೊಟ್ಟಿದೆ. ರೋಗದ ಭೀತಿ ನಡುವೆ ಕೋಳಿ ಮಾಂಸ ಹಾಗೂ ಮೊಟ್ಟೆಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.

ಕೋಳಿ ಮಾಂಸ ಮತ್ತು ಮೊಟ್ಟೆಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ಬೇಡಿಕೆ ತಗ್ಗಿದ ಬೆನ್ನಲ್ಲೇ ಬೆಲೆ ಇಳಿಕೆಯಾಗಿರುವುದು ಗೊತ್ತಾಗಿದೆ. ಹಕ್ಕಿಜ್ವರದಿಂದಾಗಿ ಈಗಾಗಲೇ ಹಲವು ರಾಜ್ಯಗಳು ಕೋಳಿ ಮಾಂಸ ರಫ್ತು ಮತ್ತು ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಿವೆ.

ಮಹಾರಾಷ್ಟ್ರದಲ್ಲಿ 9000 ಪಕ್ಷಿಗಳ ಕೊಲೆಗೆ ಕಾರಣವಾದ ಹಕ್ಕಿಜ್ವರ!ಮಹಾರಾಷ್ಟ್ರದಲ್ಲಿ 9000 ಪಕ್ಷಿಗಳ ಕೊಲೆಗೆ ಕಾರಣವಾದ ಹಕ್ಕಿಜ್ವರ!

ನವದೆಹಲಿ ಸೇರಿದಂತೆ ದೇಶದ 13ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಈಗಾಗಲೇ ದೃಢಪಟ್ಟಿದೆ. ಈ ಹಿನ್ನೆಲೆ ಅತಿಹೆಚ್ಚು ಬಳಕೆಯಲ್ಲಿದ್ದ ಕೋಳಿ ಮತ್ತು ಕೋಳಿ ಮಾಂಸದ ಉತ್ಪನ್ನಗಳಿಗೆ ಶೇ.70ರಷ್ಟು ಬೇಡಿಕೆ ತಗ್ಗಿದೆ. ಹೀಗಾಗಿ ಸಹಜವಾಗಿಯೇ ಶೇ.50ರಷ್ಟು ಬೆಲೆ ಇಳಿಕೆಯಾಗಿದ್ದು, ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಕೋಳಿ ಉತ್ಪನ್ನಗಳ ಆಮದು ಮತ್ತು ರಫ್ತಿಗೆ ನಿರ್ಬಂಧ

ಕೋಳಿ ಉತ್ಪನ್ನಗಳ ಆಮದು ಮತ್ತು ರಫ್ತಿಗೆ ನಿರ್ಬಂಧ

ಉತ್ತರ ಭಾರತದಲ್ಲಿ ಕೋಳಿ ಸಾಕಾಣಿಕೆ ವಲಯಕ್ಕೆ ಭಾರಿ ಹೊಡೆತ ಬಿದ್ದಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕೋಳಿ, ಕೋಳಿ ಮಾಂಸದ ಉತ್ಪನ್ನಗಳ ಆಮದು ಮತ್ತು ರಫ್ತು ಮಾಡುವುದನ್ನು ನಿರ್ಬಂಧಿಸಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ದೆಹಲಿ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಕೋಳಿ ಮತ್ತು ಕೋಳಿ ಮಾಂಸ ಆಮದು ಮಾಡಿಕೊಳ್ಳುವುದನ್ನು ಈಗಾಗಲೇ ನಿಷೇಧಿಸಿವೆ.

ಕೋಳಿ ಮಾಂಸಕ್ಕೆ ಯಾವ ರಾಜ್ಯದಲ್ಲಿ ಎಷ್ಟು ಬೆಲೆ?

ಕೋಳಿ ಮಾಂಸಕ್ಕೆ ಯಾವ ರಾಜ್ಯದಲ್ಲಿ ಎಷ್ಟು ಬೆಲೆ?

ದೆಹಲಿ ಮತ್ತು ಎನ್ ಸಿಆರ್ ನಲ್ಲಿ ಬೇಯಿಸಿದ ಕೋಳಿ ಮಾಂಸದ ಬೆಲೆಯು ಒಂದು ಕೆಜಿಗೆ 130-140 ರಿಂದ 85-105 ರೂಪಾಯಿಗೆ ಇಳಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಒಂದು ಕೆಜಿ ಚಿಕನ್ ಬೆಲೆ 85 ರಿಂದ 58 ರೂ.ಗೆ ಇಳಿಮುಖವಾಗಿದೆ. ಗುಜರಾತ್ ನಲ್ಲಿ 65, ತಮಿಳುನಾಡಿನಲ್ಲಿ ಒಂದು ಕೆಜಿ ಕೋಳಿ ಮಾಂಸದ ಬೆಲೆ 70 ರೂಪಾಯಿ ಆಗಿದೆ. ಒಂದು ವೇಳೆ ಕೋಳಿ ಮೊಟ್ಟೆಗಳ ಬೆಲೆ ಶೇ.15 ರಿಂದ 20ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಹಾಗಾದಲ್ಲಿ ಒಂದು ಡಜನ್ ಕೋಳಿ ಮೊಟ್ಟೆ ಬೆಲೆ ಕೇವಲ 60 ರೂಪಾಯಿ ಆಗಲಿದ್ದು, 50 ರೂಪಾಯಿ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಹಕ್ಕಿಜ್ವರವು ಕೋಳಿಗಳಲ್ಲಿ ಕಾಣಿಸಿಕೊಂಡಿದ್ದು ಎಲ್ಲಿ?

ಹಕ್ಕಿಜ್ವರವು ಕೋಳಿಗಳಲ್ಲಿ ಕಾಣಿಸಿಕೊಂಡಿದ್ದು ಎಲ್ಲಿ?

ದೇಶದ 13 ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಸಿಕೊಂಡಿರುವುದು ದೃಢಪಟ್ಟಿದೆ. ನವದೆಹಲಿ, ಕೇರಳ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಈಗಾಗಲೇ ಹಕ್ಕಿಜ್ವರದ ಭೀತಿ ಎದುರಾಗಿದೆ. ಈ ರಾಜ್ಯಗಳಲ್ಲಿ ಸಾವನ್ನಪ್ಪಿರುವ ಹಕ್ಕಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಆದರೆ ಹರಿಯಾಣದಲ್ಲಿ ಮಾತ್ರ ಕೋಳಿಗಳಲ್ಲಿ ಹಕ್ಕಿಜ್ವರ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇನ್ನು, ಉಳಿದ ರಾಜ್ಯಗಳಲ್ಲಿ ಕೋಳಿ ಹೊರತಾದ ವಲಸೆ ಪಕ್ಷಿಗಳು, ಕಾಗೆಗಳು ಮತ್ತು ಬಾತುಕೋಳಿಗಳಲ್ಲಿ ಹಕ್ಕಿಜ್ವರ ತಗುಲಿರುವುದು ವರದಿಯಾಗಿದೆ.

ಕೋಳಿ ಮಾಂಸದ ಉತ್ಪನ್ನಗಳ ಬೆಲೆ ಇಳಿಕೆ ಏಕೆ?

ಕೋಳಿ ಮಾಂಸದ ಉತ್ಪನ್ನಗಳ ಬೆಲೆ ಇಳಿಕೆ ಏಕೆ?

ಹಕ್ಕಿಜ್ವರವೊಂದೇ ಕೋಳಿ ಮಾಂಸದ ಉತ್ಪನ್ನ ಮತ್ತು ಮೊಟ್ಟೆಗಳ ಬೆಲೆ ಇಳಿಕೆಗೆ ಮುಖ್ಯ ಕಾರಣವಲ್ಲ. ದೇಶದಲ್ಲಿ ಹಲವು ರಾಜ್ಯಗಳು ಈ ಉತ್ಪನ್ನಗಳ ಆಮದು ರಫ್ತನ್ನು ನಿಷೇಧಿಸಿರುವುದು ಬೆಲೆ ಇಳಿಕೆ ಹಿಂದಿನ ಮೊದಲ ಕಾರಣವಾಗಿದೆ ಎಂದು ಭಾರತದ ಕೋಳಿ ಸಾಕಾಣಿಕೆ ಫೆಡರೇಷನ್ ಅಧ್ಯಕ್ಷ ರಮೇಶ್ ಖತ್ರಿ ತಿಳಿಸಿದ್ದಾರೆ. ಕಳೆದ ವಾರದಿಂದ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರದಲ್ಲಿ ಕೋಳಿ ಮಾಂಸ ಉತ್ಪನ್ನಗಳ ಆಮದು ಮತ್ತು ರಫ್ತಿಗೆ ನಿರ್ಬಂಧ ವಿಧಿಸಿದ್ದ ಹಿನ್ನೆಲೆ ಬೆಲೆ ಇಳಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಕೋಳಿ ಮಾಂಸ ಬೇಯಿಸಿ ತಿನ್ನುವುದಕ್ಕಿಲ್ಲ ಅಪಾಯ

ಕೋಳಿ ಮಾಂಸ ಬೇಯಿಸಿ ತಿನ್ನುವುದಕ್ಕಿಲ್ಲ ಅಪಾಯ

ಕೋಳಿ ಮಾಂಸ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಲ್ಲಿರುವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಕ್ಕಿಜ್ವರದ ಭಯದಲ್ಲಿ ಕೋಳಿ ಮಾಂಸ ಸೇವನೆಗೆ ಅಂಜುವ ಅಗತ್ಯವಿಲ್ಲ. ಬೇಯಿಸಿದ ಕೋಳಿ ಮಾಂಸದಲ್ಲಿ ಯಾವುದೇ ರೀತಿ ರೋಗಾಣುಗಳು ಇರುವುದಿಲ್ಲ. ಕೋಳಿ ಮಾಂಸವನ್ನು ಬೇಯಿಸಿ ತಿನ್ನುವುದರಿಂದ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

English summary
Bird Flu: Chicken, Chicken Products, Egg Prices Falled By Nearly 50% Across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X