ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಪಿನ್ ರಾವತ್ ಸಾವು; ವಿವಿಧ ದೇಶಗಳಿಂದ ಸಂತಾಪ

|
Google Oneindia Kannada News

ನವದೆಹಲಿ, ಡಿಸೆಂಬರ್ 09; ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡಿದೆ. ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (63) ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.

Recommended Video

ವಾಯುಪಡೆಯ Mi-17V5 ಹೆಲಿಕಾಪ್ಟರ್ ಸ್ಪೆಷಾಲಿಟಿ ಏನು? | Oneindia Kannada

ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ 14 ಜನರ ಪೈಕಿ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ, ಏಳು ಅಧಿಕಾರಿಗಳು, ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್‌ನಲ್ಲಿದ್ದ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದು, ವೆಲ್ಲಿಂಗಟನ್‌ನಲ್ಲಿನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಡಿಸೆಂಬರ್ 10ರಂದು ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಅಂತ್ಯಸಂಸ್ಕಾರಡಿಸೆಂಬರ್ 10ರಂದು ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಅಂತ್ಯಸಂಸ್ಕಾರ

2019ರಲ್ಲಿ ಭಾರತದ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಇಸ್) ಮೊದಲ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅಧಿಕಾರವಹಿಸಿಕೊಂಡಿದ್ದರು. ರಾವತ್ ವೆಲ್ಲಿಂಗಟನ್‌ನಲ್ಲಿನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಉಪನ್ಯಾಸ ನೀಡಲು ತೆರಳುತ್ತಿದ್ದರು. ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಅಪಘಾತದಲ್ಲಿ ಸೇನೆಯ ಅತ್ಯುನ್ನತ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ.

Bipin Rawat: ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ ವ್ಯಕ್ತಿಚಿತ್ರ Bipin Rawat: ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ ವ್ಯಕ್ತಿಚಿತ್ರ

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಬಿಪಿನ್ ರಾವತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ವಿಶ್ವದ ವಿವಿಧ ರಾಷ್ಟ್ರಗಳ ನಾಯಕರು ಟ್ವೀಟ್ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ. ಗುರುವಾರ ಮಧ್ಯಾಹ್ನ ದೆಹಲಿಗೆ ಬಿಪಿನ್ ರಾವತ್ ಪಾರ್ಥಿವ ಶರೀರವನ್ನು ತರಲಾಗುತ್ತಿದ್ದು, ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ.

ಸೇನಾ ಮುಖ್ಯಸ್ಥ ಬಿಪಿನ್ ಪತ್ನಿ ಮಧುಲಿಕಾ ರಾವತ್ ಬಗ್ಗೆ ನೀವು ತಿಳಿದಿರದ ಸಂಗತಿಗಳಿವುಸೇನಾ ಮುಖ್ಯಸ್ಥ ಬಿಪಿನ್ ಪತ್ನಿ ಮಧುಲಿಕಾ ರಾವತ್ ಬಗ್ಗೆ ನೀವು ತಿಳಿದಿರದ ಸಂಗತಿಗಳಿವು

ನೇಪಾಳ ಪ್ರಧಾನಿಯಿಂದ ಸಂತಾಪ

ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಟ್ವೀಟ್ ಮಾಡಿದ್ದು "ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಹಲವಾರು ರಕ್ಷಣಾ ಅಧಿಕಾರಿಗಳು ಮೃತಪಟ್ಟಿದ್ದು ತೀವ್ರ ದುಃಖವಾಗಿದೆ. ಮೃತರ ಕುಟುಂಬಗಳಿಗೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು" ಎಂದು ಹೇಳಿದ್ದಾರೆ.

ಅಮೆರಿಕ ಸೇನಾ ನೆಲೆಯಿಂದ ಸಂತಾಪ

ಅಮೆರಿಕ ಸೇನಾ ನೆಲೆಯಿಂದ ಸಂತಾಪ

ಅಮೆರಿಕದ ಸೇನಾ ನೆಲೆ ಪೆಂಟಗಾನ್‌ನ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಪತ್ರಿಕಾ ಪ್ರಕಟಣೆಯಲ್ಲಿ ಬಿಪಿನ್ ರಾವತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಮತ್ತು ಇತರ ಅಧಿಕಾರಿಗಳು ಮೃತಪಟ್ಟಿದ್ದಾರೆ. ಬಿಪಿನ್ ರಾವತ್ ಕುಟುಂಬ, ಭಾರತೀಯ ಸೇನೆ ಮತ್ತು ಭಾರತದ ಜನರಿಗೆ ನಮ್ಮ ಸಂತಾಪಗಳು. ಘಟನೆಯಲ್ಲಿ ಮೃತಪಟ್ಟ ಇತರರ ಕುಟುಂಬ ಸದಸ್ಯರಿಗೂ ಸಂತಾಪಗಳು" ಎಂದು ಹೇಳಿದ್ದಾರೆ.

ಯುಎಸ್ ರಕ್ಷಣಾ ಕಾರ್ಯದರ್ಶಿ ಸಂತಾಪ

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ. ಆಸ್ಟಿನ್ ಸಹ ಬಿಪಿನ್ ರಾವತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಬಿಪಿನ್ ರಾವತ್ ಕುಟುಂಬ ಮತ್ತು ಅಪಘಾತದಲ್ಲಿ ಮೃತಪಟ್ಟ ಇತರ ಅಧಿಕಾರಿಗಳ ಕುಟುಂಬಕ್ಕೆ ಸಂತಾಪಗಳು. ಬಿಪಿನ್ ರಾವತ್ ಅಮೆರಿಕ-ಭಾರತ ರಕ್ಷಣಾ ಪಾಲುದಾರಿಕೆಯ ಹಾದಿಯಲ್ಲಿ ಅಳಿಸಲಾಗದ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ" ಎಂದು ಹೇಳಿದ್ದಾರೆ.

ಅಮೆರಿಕದ ವಿವಿಧ ಅಧಿಕಾರಿಗಳ ಸಂತಾಪ

ಅಮೆರಿಕದ ಜಂಟಿ ಪಡೆಗಳ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲೆ ಸಹ ಸಂತಾಪ ಸೂಚಿಸಿದ್ದಾರೆ. "ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರರ ಸಾವಿನಿಂದ ದುಃಖಿತರಾಗಿದ್ದೇವೆ. ಭಾರತೀಯ ಸೇನೆಯ ಮೇಲೆ ಅವರು ಸಾಕಷ್ಟು ಪ್ರಭಾವ ಬೀರಿದರು ಮತ್ತು ಭಾರತ ಮತ್ತು ಯುಎಸ್ ಮಿಲಿಟರಿ ಸಂಬಂಧವನ್ನು ಬಲಪಡಿಸಿದರು" ಎಂದು ಹೇಳಿದ್ದಾರೆ.

ದೆಹಲಿಗೆ ಪಾರ್ಥಿವ ಶರೀರ

ದೆಹಲಿಗೆ ಪಾರ್ಥಿವ ಶರೀರ

ತಮಿಳುನಾಡಿನ ವೆಲ್ಲಿಂಗಟನ್‌ನಲ್ಲಿನ ಸೇನಾ ಆಸ್ಪತ್ರೆಯಿಂದ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (63), ಅವರ ಪತ್ನಿ ಮಧುಲಿಕಾ ರಾವತ್ ಪಾರ್ಥಿವ ಶರೀರವನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ದೆಹಲಿಯಲ್ಲಿರು ಬಿಪಿನ್‌ ರಾವತ್ ನಿವಾಸಕ್ಕೆ ತರಲಾಗುತ್ತದೆ. ಬಳಿಕ ಗಣ್ಯರ ಅಂತಿಮ ನಮಕ್ಕೆ ವ್ಯವಸ್ಥೆ ಮಾಡಲಾಗಿದ್ದು ಶುಕ್ರವಾರ ದೆಹಲಿಯಲ್ಲಿಯೇ ಅಂತ್ಯಕ್ರಿಯೆ ಸಕಲ ಸರ್ಕಾರಿ, ಸೇನಾ ಗೌರವದೊಂದಿಗೆ ನಡೆಯಲಿದೆ. (ಚಿತ್ರ; ಬಿಪಿನ್ ರಾವತ್ ದೆಹಲಿ ನಿವಾಸ)

English summary
Gen Bipin Rawat died in the helicopter crash at Tamil Nadu. Condolences over the demise of Chief of Defence Staff from several countries including the US and Russia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X